Vishwavani Editorial: ಸರಿಯಾಗಿ ಬಿಸಿ ಮುಟ್ಟಿಸಬೇಕಿದೆ
ನೆರೆರಾಷ್ಟ್ರ ಪಾಕಿಸ್ತಾನವು ನೀಡುತ್ತಿರುವ ಕುಮ್ಮಕ್ಕು, ಆ ಪಾಕಿಸ್ತಾನಕ್ಕೆ ಅಮೆರಿಕದಿಂದ ಒದಗುತ್ತಿರುವ ವಿವಿಧ ನೆಲೆಗಟ್ಟಿನ ಒತ್ತಾಸೆಗಳು- ಹೀಗೆ ಉಗ್ರರ ಈ ಧಾರ್ಷ್ಟ್ಯದ ಹಿಂದೆ ಸಾಕಷ್ಟು ಅಂಶಗಳು ಕೆಲಸ ಮಾಡುತ್ತಿರುವ ಸಂಭವವಿದೆ. ಹೀಗಾಗಿ ಭಾರತವು ಉಗ್ರದಮನದ ನಿಟ್ಟಿನಲ್ಲಿ ನಿಷ್ಠುರ ಕ್ರಮಗಳಿಗೆ ಮುಂದಾಗಬೇಕಾದ ಅಗತ್ಯವಿದೆ.
-
ಜಮ್ಮು-ಕಾಶ್ಮೀರದ ಛತ್ರೂ ಪ್ರದೇಶದಲ್ಲಿ 12000 ಅಡಿ ಎತ್ತರದಲ್ಲಿ ನೆಲೆಗೊಂಡಿದ್ದ ಜೈಶ್-ಎ-ಮೊಹಮ್ಮದ್ ಉಗ್ರರ ಭೂಗತ ಅಡಗುತಾಣವೊಂದು ಪತ್ತೆಯಾಗಿರುವ ಸುದ್ದಿಯನ್ನು ಈಗಾಗಲೇ ಓದಿರುವಿರಿ. ಉಗ್ರರನ್ನು ಸದೆಬಡಿಯಲು ಭದ್ರತಾ ಪಡೆಗಳು ಹಮ್ಮಿಕೊಂಡಿದ್ದ ಕಾರ್ಯಾಚರಣೆ ಯಲ್ಲಿ ಇಂಥದೊಂದು ನೆಲೆ ಪತ್ತೆಯಾಗಿದೆ ಎಂಬುದು ಗಮನಾರ್ಹ ಸಂಗತಿ.
ಅಲ್ಲಿಗೆ, ಆಪರೇಷನ್ ಸಿಂದೂರ, ಸರ್ಜಿಕಲ್ ಸ್ಟ್ರೈಕ್ ಹೀಗೆ ಭಾರತವು ನೀಡಿದ ತಪರಾಕಿಗಳ ನಿದರ್ಶನವನ್ನು ಕಂಡ ಮೇಲೂ ಉಗ್ರರು ಮತ್ತು ಅವರ ಸಂಘಟನೆಗಳು ಪಾಠ ಕಲಿತಿಲ್ಲ ಎಂದಾ ಯಿತು. ಅದರಲ್ಲೂ, ಭಾರತಕ್ಕೆ ಸೇರಿದ ಪ್ರದೇಶದಲ್ಲೇ ತಮ್ಮ ಅಡಗುತಾಣವನ್ನು ಅವರು ರೂಪಿಸಿ ಕೊಳ್ಳುತ್ತಾರೆ ಎಂದರೆ, ಈ ಉಗ್ರರ ಧಾರ್ಷ್ಟ್ಯ ಎಷ್ಟಿರಬೇಕು!
ಇದನ್ನೂ ಓದಿ: Vishwavani Editorial: ಚೇಳಿಗೆ ಪಾರುಪತ್ಯ ಕೊಟ್ಟರೆ...!
ನೆರೆರಾಷ್ಟ್ರ ಪಾಕಿಸ್ತಾನವು ನೀಡುತ್ತಿರುವ ಕುಮ್ಮಕ್ಕು, ಆ ಪಾಕಿಸ್ತಾನಕ್ಕೆ ಅಮೆರಿಕದಿಂದ ಒದಗುತ್ತಿರುವ ವಿವಿಧ ನೆಲೆಗಟ್ಟಿನ ಒತ್ತಾಸೆಗಳು- ಹೀಗೆ ಉಗ್ರರ ಈ ಧಾರ್ಷ್ಟ್ಯದ ಹಿಂದೆ ಸಾಕಷ್ಟು ಅಂಶಗಳು ಕೆಲಸ ಮಾಡುತ್ತಿರುವ ಸಂಭವವಿದೆ. ಹೀಗಾಗಿ ಭಾರತವು ಉಗ್ರದಮನದ ನಿಟ್ಟಿನಲ್ಲಿ ನಿಷ್ಠುರ ಕ್ರಮಗಳಿಗೆ ಮುಂದಾಗಬೇಕಾದ ಅಗತ್ಯವಿದೆ.
‘ತಲೆಯನ್ನೇ ತೆಗೆದರೆ, ಬಾಲಗಳು ಏನೂ ಮಾಡಿಕೊಳ್ಳಲಿಕ್ಕಾಗುವುದಿಲ್ಲ’ ಎಂಬ ಮಾತಿನಂತೆ, ಉಗ್ರವಾದವೆಂಬ ವಿಷವೃಕ್ಷದ ರೆಂಬೆ-ಕೊಂಬೆಗಳನ್ನಷ್ಟೇ ಕಡಿದು ತೃಪ್ತರಾಗುವ ಬದಲು, ಅದರ ಬೇರಿಗೇ ಕೊಡಲಿ ಪೆಟ್ಟು ನೀಡಬೇಕಾದ ಅಗತ್ಯವಿದೆ. ಇದಕ್ಕೆ ಭಾರತವೊಂದೇ ಸಂಕಲ್ಪಿಸಿದರೆ ಸಾಕಾ ಗದು, ವಿಶ್ವದ ಮಿಕ್ಕ ರಾಷ್ಟ್ರಗಳು ಕೂಡ ಈ ಸಂಕಲ್ಪಕ್ಕೆ ಬಲವನ್ನು ತುಂಬಬೇಕಾದ ಅಗತ್ಯ ವಿದೆ.
ಪ್ರಸ್ತುತ ಪ್ರಪಂಚಕ್ಕೆ ಬೇಕಾಗಿರುವ ಎರಡು ಮಹತ್ತರ ಅಂಶಗಳೆಂದರೆ, ಶಾಂತಿ ಮತ್ತು ನೆಮ್ಮದಿ; ಇವನ್ನು ಕೈಗೂಡಿಸಿಕೊಳ್ಳುವುದಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳಿಗೂ ಮುಂದಾಗಬೇಕಿದೆ. ಈ ಅನಿವಾರ್ಯತೆಯನ್ನು ವಿಶ್ವದ ಎಲ್ಲ ರಾಷ್ಟ್ರಗಳೂ ಮನವರಿಕೆ ಮಾಡಿಕೊಳ್ಳಬೇಕು.