ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Vishwavani Editorial: ಖಾತಾ ಗೊಂದಲಕ್ಕೆ ತೆರೆ ಬೀಳಲಿ

ಒಂದು ವೇಳೆ ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿ ತಂದರೆ ಸರಕಾರದ ಆದಾಯ ಹೆಚ್ಚುತ್ತದೆ. ಅನಧಿಕೃತ ಕಟ್ಟಡಗಳಿಂದ ಎದುರಾಗುವ ನಾಗರಿಕ ಸಮಸ್ಯೆಗಳಿಗೆ ತೆರೆಬೀಳಲಿದೆ. ಜತೆಗೆ ಹೊಸ ಬಡಾವಣೆ ಮತ್ತು ಕಟ್ಟಡಗಳ ಸಂಖ್ಯೆ ಅಂದಾಜು ಸಿಕ್ಕಿದರೆ ಅವುಗಳಿಗೆ ನೀರು, ವಿದ್ಯುತ್, ಒಳ ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು, ಯೋಜನೆ ರೂಪಿಸಲು ಸರಕಾರಕ್ಕೆ ಸಾಧ್ಯವಾಗುತ್ತದೆ ಎನ್ನುವುದು ಸರಕಾರದ ಸಮಜಾಯಿಶಿ.

ಖಾತಾ ಗೊಂದಲಕ್ಕೆ ತೆರೆ ಬೀಳಲಿ

Profile Ashok Nayak Feb 20, 2025 2:12 PM

ರಾಜ್ಯದಲ್ಲಿ ಸುದೀರ್ಘ ಕಾಲದಿಂದ ನನೆಗುದಿಗೆ ಬಿದ್ದಿದ್ದ ಅನಧಿಕೃತ ಬಡಾವಣೆಗಳಿಗೆ ತಡೆಹಾಕಲು ಸರಕಾರ ಬಿ ಖಾತಾ ಅಭಿಯಾನ ಕೈಗೊಂಡಿರುವುದು ಸ್ವಾಗತಾರ್ಹ. ಅನಧಿ ಕೃತ , ರೆವಿನ್ಯೂಬಡಾವಣೆಗಳಲ್ಲಿ ನಿವೇಶನ, ಮನೆ ಹೊಂದಿರುವ ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು ಈ ಕ್ರಮ ಕೈಗೊಂಡಿರುವುದಾಗಿ ಸರಕಾರ ಹೇಳಿದ್ದರೂ ಹೆಚ್ಚಿನ ಆದಾಯ ಪಡೆಯಲು ಜಾರಿಗೊಳಿಸಿದ ಕ್ರಮ ಎನ್ನಲಾಗುತ್ತಿದೆ.

ಬೆಂಗಳೂರಿನಲ್ಲಿ ಜಾರಿಗೆ ತಂದ ಎ ಮತ್ತು ಬಿ ಖಾತಾ ಯೋಜನೆಯಂತೆ ರಾಜ್ಯಕ್ಕೆ ವಿಸ್ತರಿ ಸಲು ಸಿಎಂ ಸಿದ್ದರಾಮಯ್ಯ ಈ ಕ್ರಮ ಕೈಗೊಂಡಿದ್ದು ಖಾತಾ ಸಮಸ್ಯೆಗೆ ಪರಿಹಾರ ಸಿಗುವ ಆಶಾಭಾವನೆ ಉಂಟಾಗಿದೆ. ಆಸ್ತಿ ತೆರಿಗೆ ಸಂಗ್ರಹ ವಿಚಾರದಲ್ಲಿ ಸರಕಾರ ಗಂಭೀರ ವಾಗಿದ್ದು, ಬೆಂಗಳೂರಿನಲ್ಲಿ ನಿಯಮ ಉಲ್ಲಂಘನೆ ಮತ್ತು ಪರವಾನಗಿ ಪಡೆಯದೆ ನಿರ್ಮಿಸ ಲಾಗಿದ್ದ ಕಟ್ಟಡಗಳಿಗೆ ಎ ಮತ್ತು ಬಿ ಖಾತಾ ಕೊಡುತ್ತಿರುವಂತೆ ರಾಜ್ಯದಲ್ಲೂ ಎಲ್ಲರಿಗೂ ಇನ್ನು ಮುಂದೆ ಖಾತಾ ಸಿಗಲಿದೆ.

ಇದು ಅಕ್ರಮ ಅಕ್ರಮದ ಇನ್ನೊಂದು ರೂಪ. ರಾಜ್ಯದಲ್ಲಿ 5 ಲಕ್ಷ ಅನಧಿಕೃತ ಕಟ್ಟಡಗಳಿವೆ ಎಂಬುದು ಸರಕಾರದ ಅಂದಾಜು. ಒಂದು ವೇಳೆ ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿ ತಂದರೆ ಸರಕಾರದ ಆದಾಯ ಹೆಚ್ಚುತ್ತದೆ. ಅನಧಿಕೃತ ಕಟ್ಟಡಗಳಿಂದ ಎದುರಾಗುವ ನಾಗರಿಕ ಸಮಸ್ಯೆಗಳಿಗೆ ತೆರೆಬೀಳಲಿದೆ. ಜತೆಗೆ ಹೊಸ ಬಡಾವಣೆ ಮತ್ತು ಕಟ್ಟಡಗಳ ಸಂಖ್ಯೆ ಅಂದಾಜು ಸಿಕ್ಕಿದರೆ ಅವುಗಳಿಗೆ ನೀರು, ವಿದ್ಯುತ್, ಒಳಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು, ಯೋಜನೆ ರೂಪಿಸಲು ಸರಕಾರಕ್ಕೆ ಸಾಧ್ಯವಾಗುತ್ತದೆ ಎನ್ನುವುದು ಸರಕಾರದ ಸಮಜಾಯಿಶಿ.

ಆದರೆ ಎ ಮತ್ತು ಬಿ ಖಾತಾ ನೀಡುವ ವೇಳೆ ಜನರು ಎದುರಿಸುವ ಸಮಸ್ಯೆಗಳ ಬಗ್ಗೆ ಸರ ಕಾರಕ್ಕೆ ಅರಿವಿರಬೇಕು. ಅಽಕೃತ ಬಡಾವಣೆಯಾಗಿದ್ದರೂ, ಯಾವುದೋ ಒಂದು ದಾಖಲೆ ಇಲ್ಲ ಎನ್ನುವ ಕಾರಣಕ್ಕೆ ಅಽಕಾರಿಗಳು ಇನ್ನು ಮುಂದೆ ಬಿ ಖಾತಾ ಪಡೆದುಕೊಳ್ಳಿ ಎಂದು ಒತ್ತಡ ಹೇರುವ, ಹಣಕ್ಕಾಗಿ ಪೀಡಿಸುವ ಸಾಧ್ಯತೆಗಳಿವೆ. ದಾಖಲೆಗಳ ಹೆಸರಿನಲ್ಲಿ ಪಂಚಾ ಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜನರ ಶೋಷಣೆ ಮಾಡುವುದನ್ನು ತಪ್ಪಿಸಬೇಕು. ಈ ಪ್ರಕ್ರಿಯೆ ಪಾರದರ್ಶಕವಾಗಿರುವಂತೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ದಂಡ ಅಥವಾ ತೆರಿಗೆ ನ್ಯಾಯಬದ್ಧವಾಗಿರಲಿ. ಜನರು ಸುಲಭವಾಗಿ ತಮ್ಮ ಸೂರಿಗೆ ದಾಖಲೆ ಪಡೆಯುವಂತಾಗಲಿ. ಖಾತಾ ಗೊಂದಲಕ್ಕೆ ಇನ್ನಾದರೂ ತೆರೆ ಬೀಳಲಿ.