#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Vishwavani Editorial: ಬಣ ರಾಜಕೀಯಕ್ಕೆ ಬೀಗ ಹಾಕಿ

ಇನ್ನು ತಡಮಾಡಿದರೆ ಬಂಡಿ ಓಡದು ಎಂಬ ಕಾರಣಕ್ಕೆ ವಿಪಕ್ಷ ನಾಯಕನನ್ನು ತಂದು ಕೂರಿಸಲಾ ಯಿತು ಎನ್ನಿ. ಇಷ್ಟಾದ ಮೇಲಾದರೂ ರಾಜ್ಯ ಬಿಜೆಪಿಗರು ಹೊಣೆಯರಿತು ಕೆಲಸ ಮಾಡ ಬೇಕಿತ್ತು ಮತ್ತು ಜನರ ಹಿತ ಚಿಂತನೆಯೇ ಅವರ ಉಸಿರಾಗಬೇಕಿತ್ತು. ಆದರೆ, ಅವರು ಮುಖ ಮಾಡಿ ದ್ದು ಮತ್ತದೇ ಬಣ ರಾಜಕೀಯದ ಕಡೆಗೆ!

Vishwavani Editorial: ಬಣ ರಾಜಕೀಯಕ್ಕೆ ಬೀಗ ಹಾಕಿ

Profile Ashok Nayak Feb 12, 2025 7:30 AM

ಸಾಯೋ ತನಕ ಶನಿಕಾಟವಾದರೆ ಬಾಳೋದು ಯಾವಾಗ?’ ಎಂಬುದೊಂದು ಜಾಣನುಡಿ ನಮ್ಮಲ್ಲಿ ಚಾಲ್ತಿಯಲ್ಲಿದೆ. ಬಿಜೆಪಿ ರಾಜ್ಯಘಟಕದಲ್ಲಿ ಹಲವು ತಿಂಗಳಿಂದ ನಡೆಯುತ್ತಿರುವ ಹಗ್ಗಜಗ್ಗಾಟ, ಬಣ ಬಡಿದಾಟಗಳನ್ನು ಗಮನಿಸಿ ಹೇವರಿಸಿಕೊಂಡ ಶ್ರೀಸಾಮಾನ್ಯರು ಈ ಜಾಣನುಡಿಯನ್ನು ಪದೇ ಪದೆ ಉದ್ಗರಿಸಿದರೆ ಅದೇನೂ ಅಚ್ಚರಿಯಲ್ಲ. ಬಹುತೇಕರಿಗೆ ಗೊತ್ತಿರುವಂತೆ, ಅಧಿಕಾರಸ್ಥ ಬಿಜೆಪಿಗರನ್ನು ಮನೆಗೆ ಕಳಿಸಿ, ಕಾಂಗ್ರೆಸ್ಸಿಗರಿಗೆ ಗದ್ದುಗೆ ಯನ್ನು ಹರಿವಾಣದಲ್ಲಿಟ್ಟುಕೊಟ್ಟಿದ್ದಾರೆ ರಾಜ್ಯದ ಮತದಾ ರರು. ಇದರರ್ಥ, ಇನ್ನು ಐದು ವರ್ಷ ಗಳವರೆಗೆ ಸಮರ್ಥ ಪ್ರತಿಪಕ್ಷವಾಗಿ ಕೆಲಸ ಮಾಡಿ ಎಂಬುದಾ ಗಿತ್ತು. ಆದರೆ, ಪ್ರತಿಪಕ್ಷವಾಗಿ ಕೆಲಸ ಮಾಡುವುದಿರಲಿ, ಪ್ರತಿಪಕ್ಷ ನಾಯಕನನ್ನು ಪ್ರತಿಷ್ಠಾಪಿಸುವು ದಕ್ಕೇ ಸಾಕಷ್ಟು ಮೀನ-ಮೇಷ ಎಣಿಸ ಲಾಯಿತು ಎಂಬುದನ್ನು ಜನ ನೋಡಿದ್ದಾರೆ.

ಕೊನೆಗೆ, ಇನ್ನು ತಡಮಾಡಿದರೆ ಬಂಡಿ ಓಡದು ಎಂಬ ಕಾರಣಕ್ಕೆ ವಿಪಕ್ಷ ನಾಯಕನನ್ನು ತಂದು ಕೂರಿಸಲಾಯಿತು ಎನ್ನಿ. ಇಷ್ಟಾದ ಮೇಲಾದರೂ ರಾಜ್ಯ ಬಿಜೆಪಿಗರು ಹೊಣೆಯರಿತು ಕೆಲಸ ಮಾಡ ಬೇಕಿತ್ತು ಮತ್ತು ಜನರ ಹಿತ ಚಿಂತನೆಯೇ ಅವರ ಉಸಿರಾಗಬೇಕಿತ್ತು. ಆದರೆ, ಅವರು ಮುಖ ಮಾಡಿ ದ್ದು ಮತ್ತದೇ ಬಣ ರಾಜಕೀಯದ ಕಡೆಗೆ! ಒಂದು ಕಾಲಕ್ಕೆ ‘ಶಿಸ್ತಿನ ಪಕ್ಷ’ ಎಂದೇ ಕರೆಸಿ ಕೊಳ್ಳುತ್ತಿದ್ದ ಬಿಜೆಪಿಯಲ್ಲಿ ಈ ಮಟ್ಟಿಗಿನ ಬಣ ರಾಜಕೀಯ ಮತ್ತು ಗೊಂದಲಗಳು ಹುಟ್ಟಿ ಕೊಂಡಿದ್ದೇಕೆ ಎಂಬು ದಕ್ಕೆ ಆ ಪಕ್ಷಸ್ಥರೇ ಉತ್ತರ ಕಂಡುಕೊಳ್ಳಬೇಕು.

ಇದನ್ನೂ ಓದಿ: Vishwavani Editorial: ಸಮಸ್ಯೆಗಳನ್ನು ಆಹ್ವಾನಿಸುವುದೇಕೆ?

ಆದರೆ, ‘ಅಪ್ಪ-ಅಮ್ಮನ ಜಗಳದಲಿ ಕೂಸು ಬಡವಾಯ್ತು’ ಎಂಬ ಮಾತಿನಂತೆ ಬಿಜೆಪಿಗರ ಬಣ ಜಗಳ ದಲ್ಲಿ ಅನ್ಯಾಯವಾಗುತ್ತಿರುವುದು ಶ್ರೀಸಾಮಾನ್ಯರಿಗೆ. ಏಕೆಂದರೆ, ಅಭಿವೃದ್ಧಿ ಕಾರ್ಯಗಳು ಮತ್ತು ಜನರ ಹಿತರಕ್ಷಣೆಯ ನಿಟ್ಟಿನಲ್ಲಿ ಟೊಂಕ ಕಟ್ಟಬೇಕಾದ ಆಳುಗ ವ್ಯವಸ್ಥೆಯು ಹಾದಿ ತಪ್ಪಿದಾಗ ಕಿವಿಹಿಂಡಬೇಕಾದ ಪ್ರತಿಪಕ್ಷದವರು, ಅಂದರೆ ರಾಜ್ಯದ ಬಿಜೆಪಿಗರು, ‘ಪಠ್ಯೇತರ ಚಟುವಟಿಕೆ’ಗಳಲ್ಲೇ ದಿನದೂಡುತ್ತಿದ್ದಾರೆ.

ಎರಡು ಬಾರಿ ದೆಹಲಿ ರಾಜ್ಯದ ಗದ್ದುಗೆ ಅಪ್ಪಿದ್ದ ‘ಆಮ್ ಆದ್ಮಿ’ಗಳನ್ನೇ ಮುಲಾಜಿಲ್ಲದೆ ಮನೆಗೆ ಕಳಿಸಿದ ಮತದಾರರಿರುವ ದೇಶವಿದು. ರಾಜ್ಯ ಬಿಜೆಪಿಗರು ಇನ್ನೂ ಪಾಠ ಕಲಿಯದಿದ್ದರೆ ಮತ್ತು ತಮ್ಮ ಆಂತರಿಕ ಕಲಹಕ್ಕೆ ಪೂರ್ಣವಿರಾಮ ಹಾಕದಿದ್ದರೆ, ಅವರಿಗೂ ಇದೇ ಗತಿ ಒದಗುವುದರಲ್ಲಿ ಸಂದೇಹವಿಲ್ಲ.