Vishwavani Editorial: ಸಮಸ್ಯೆಗಳನ್ನು ಆಹ್ವಾನಿಸುವುದೇಕೆ?
ವ್ಯಕ್ತಿಯೊಬ್ಬನು ದಿನವೊಂದರಲ್ಲಿ 12 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಕಂಪ್ಯೂಟರ್/ಲ್ಯಾಪ್ ಟಾಪ್ ಮುಂದೆ ಕುಳಿತು ಕೆಲಸ ಮಾಡಿದಲ್ಲಿ ಆತ ದೈಹಿಕ ಅನಾರೋಗ್ಯಕ್ಕೆ ಒಳಗಾಗುವುದರ ಜತೆಗೆ ಮಾನಸಿಕ ಸಾಮರ್ಥ್ಯದಲ್ಲೂ ಕುಸಿತವನ್ನು ಕಾಣುತ್ತಾನೆ ಎನ್ನುತ್ತದೆ ಒಂದು ಸಮೀಕ್ಷೆ.
ಉದ್ಯೋಗಿಗಳ ಕಾರ್ಯಾವಧಿ ಬಗೆಗೆ ಇತ್ತೀಚೆಗೆ ಸಾಕಷ್ಟು ಚರ್ಚೆ ನಡೆದಿದೆ, ನಡೆಯುತ್ತಿದೆ. ‘ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು’ ಎಂಬ ಇನ್ಫೋಸಿಸ್ ಸಹ-ಸಂಸ್ಥಾಪಕರ ಹೇಳಿಕೆಯ ನಂತರ, ಎಲ್ ಆಂಡ್ ಟಿ ಕಂಪನಿಯ ಮುಖ್ಯಸ್ಥರು, “ಉದ್ಯೋಗಿಗಳು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು, ಮನೆಯಲ್ಲಿ ಹೆಂಡತಿಯ ಮುಖವನ್ನೇ ಎಷ್ಟೂಂತ ನೋಡ್ತೀರಿ?" ಎಂಬರ್ಥದ ಮಾತಾಡಿದ್ದು ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು.
ಆದರೆ, ವ್ಯಕ್ತಿಯೊಬ್ಬರು ವಾರಕ್ಕೆ 60 ಗಂಟೆಗಿಂತ ಹೆಚ್ಚು ಕೆಲಸ ಮಾಡಿದಲ್ಲಿ ಅದು ಅಂಥವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎನ್ನುತ್ತಾರೆ ಬಲ್ಲವರು. ಈಗಿರುವ ಕಾರ್ಯಾವಧಿ ಮತ್ತು ಒತ್ತಡಗಳೇ ನೌಕರರಲ್ಲಿ ಸಾಕಷ್ಟು ದೈಹಿಕ-ಮಾನಸಿಕ ಸಮಸ್ಯೆಗಳನ್ನು ಸೃಷ್ಟಿಸಿರುವಾಗ, ಕಾರ್ಯಾವಧಿಯನ್ನು 70 ಅಥವಾ 90 ಗಂಟೆಗೆ ಏರಿಸಿದರೆ ಇಂಥ ಸಮಸ್ಯೆಗಳು ಮತ್ತಷ್ಟು ತೀವ್ರಗೊಳ್ಳುವುದರಲ್ಲಿ ಸಂಶಯವಿಲ್ಲ ಎಂಬುದು ಇಂಥ ತಜ್ಞರ ಅಭಿಮತ.
ಇದನ್ನೂ ಓದಿ: Vishwavani Editorial: ಇಸ್ರೊ ಸಾಧನೆ ದೇಶದ ಹೆಮ್ಮೆ
ವ್ಯಕ್ತಿಯೊಬ್ಬನು ದಿನವೊಂದರಲ್ಲಿ 12 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಕಂಪ್ಯೂಟರ್/ಲ್ಯಾಪ್‌ಟಾಪ್ ಮುಂದೆ ಕುಳಿತು ಕೆಲಸ ಮಾಡಿದಲ್ಲಿ ಆತ ದೈಹಿಕ ಅನಾರೋಗ್ಯಕ್ಕೆ ಒಳಗಾಗುವುದರ ಜತೆಗೆ ಮಾನಸಿಕ ಸಾಮರ್ಥ್ಯದಲ್ಲೂ ಕುಸಿತವನ್ನು ಕಾಣುತ್ತಾನೆ ಎನ್ನುತ್ತದೆ ಒಂದು ಸಮೀಕ್ಷೆ.
ಉದ್ಯೋಗವು ಸರಕಾರಿಯೇ ಆಗಿರಲಿ ಅಥವಾ ಖಾಸಗಿ ವಲಯಕ್ಕೆ ಸಂಬಂಧಿ ಸಿದ್ದೇ ಆಗಿರಲಿ, ದಿನಕ್ಕೆ 8 ಗಂಟೆಗಳ ಕಾರ್ಯಾವಽಯು ಎಲ್ಲ ನೆಲೆಯಲ್ಲಿಯೂ ಸೂಕ್ತ ಎಂಬುದು ವೈಜ್ಞಾನಿಕ ತಳಹದಿ ಯಿರುವ ಗ್ರಹಿಕೆ; ಈ ಕಾರಣದಿಂದಲೇ ಸರಕಾರಿ ಕಚೇರಿಗಳಲ್ಲಿ ಈ ಕಾರ್ಯಾವಧಿಯನ್ನು ನಿಗದಿ ಪಡಿಸಿರುವುದು.
ನಿಗದಿತ ಕಚೇರಿ ಕಾರ್ಯದ ನಂತರ ವ್ಯಕ್ತಿ ಯೊಬ್ಬನು ಮಿಕ್ಕ ಸಮಯವನ್ನು ತನ್ನ ಕುಟುಂಬಿಕ ರೊಡನೆ ಒಡನಾಡ ಲೆಂದು, ವೈಯಕ್ತಿಕ ಅಗತ್ಯಗಳ ನೆರವೇರಿಕೆಗೆಂದು ಮೀಸಲಿಡುವುದಕ್ಕೆ ಅನುವು ಮಾಡಿಕೊಡಬೇಕು. ಆಗ ಮಾತ್ರವೇ ಆತನ ಕಾರ್ಯಕ್ಷಮತೆ ವರ್ಧಿಸುತ್ತದೆ ಎನ್ನುತ್ತಾರೆ ಕ್ಷೇತ್ರತಜ್ಞರು. ಆದ್ದರಿಂದ, ವೈಜ್ಞಾನಿಕವಾಗಿ ಮತ್ತು ಸಾಮಾಜಿಕವಾಗಿ ‘ಸರಿ’ ಎಂದು ಸಾಬೀತಾಗಿರುವ ಈ ಕಾರ್ಯ ಶೈಲಿಯನ್ನು ಅತಿರೇಕಕ್ಕೆ ಒಯ್ಯುವುದರಲ್ಲಿ ಅರ್ಥವಿಲ್ಲ, ಅಲ್ಲವೇ?