Vishwavani Editorial: ಇಸ್ರೊ ಸಾಧನೆ ಮುಂದುವರಿಯಲಿ
2008ರಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿದ್ದ ಚಂದ್ರಯಾನ-1 ಯೋಜನೆಯ ಸಂದರ್ಭದಲ್ಲಿ ಚಂದ್ರ ನಲ್ಲಿರುವ ರಾಸಾಯನಿಕ, ಖನಿಜಶಾಸೀಯ ಹಾಗೂ ಭೌಗೋಳಿಕ ಛಾಯಾ ನಕ್ಷೆಗಳನ್ನು ಭೂಮಿಗೆ ಹೊತ್ತು ತರಲಾಗಿತ್ತು. 2019ರಲ್ಲಿ ನಡೆದಿದ್ದ ಚಂದ್ರಯಾನ-2 ಯೋಜನೆಯು ಶೇ.98ರಷ್ಟು ಯಶಸ್ವಿ ಯಾದರೂ, ಅಂತಿಮ ಘಟ್ಟದಲ್ಲಿ ಶೇ.2ರಷ್ಟು ವಿಫಲಗೊಂಡಿತ್ತು


ಬಾಹ್ಯಾಕಾಶ ಅಧ್ಯಯನದಲ್ಲಿ ಜಗತ್ತನ್ನೇ ನಿಬ್ಬೆರಗಾಗಿಸಿದ ಇಸ್ರೊ ಇದೀಗ ಮತ್ತೊಂದು ಸಾಹಸಕ್ಕೆ ಇಳಿದಿದೆ. 250 ಕೆಜಿ ತೂಕದ ರೋವರ್ ಅನ್ನು ಚಂದ್ರನ ಮೇಲೆ ಇಳಿಸಿ ಅಧ್ಯಯನ ನಡೆಸಲು ಇಸ್ರೋ ಮುಂದಾಗಿದೆ. ಈ ಕುರಿತ ಚಂದ್ರಯಾನ-5 ಮಿಷನ್‌ಗೆ ಇದೀಗ ಕೇಂದ್ರ ಸರಕಾರ ಅನುಮೋ ದನೆ ನೀಡಿದೆ. ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದು ಅಧ್ಯಯನ ನಡೆಸಿದ ಪ್ರಗ್ಯಾನ್ ರೋವರ್ ತೂಕ 25 ಕೆಜಿ ಮಾತ್ರ ಇತ್ತು. ಆದರೆ ಚಂದ್ರಯಾನ-5 ಮಿಷನ್ ತೂಕ ಬರೋಬ್ಬರಿ 250 ಕೆಜಿಯಾ ಗಿದೆ.
ಹೀಗಾಗಿ ಈ ಬಾರಿ ಇಸ್ರೋ ಮತ್ತಷ್ಟು ತಯಾರಿಯೊಂದಿಗೆ ಚಂದ್ರನ ಕುತೂಹಲ ಅಧ್ಯಯನಕ್ಕೆ ಮುಂದಾಗಿದೆ. 2008ರಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿದ್ದ ಚಂದ್ರಯಾನ-1 ಯೋಜನೆಯ ಸಂದರ್ಭದಲ್ಲಿ ಚಂದ್ರನಲ್ಲಿರುವ ರಾಸಾಯನಿಕ, ಖನಿಜಶಾಸ್ತ್ರೀಯ ಹಾಗೂ ಭೌಗೋಳಿಕ ಛಾಯಾ ನಕ್ಷೆಗಳನ್ನು ಭೂಮಿಗೆ ಹೊತ್ತು ತರಲಾಗಿತ್ತು. 2019ರಲ್ಲಿ ನಡೆದಿದ್ದ ಚಂದ್ರಯಾನ-2 ಯೋಜನೆಯು ಶೇ.98ರಷ್ಟು ಯಶಸ್ವಿಯಾದರೂ, ಅಂತಿಮ ಘಟ್ಟದಲ್ಲಿ ಶೇ.2ರಷ್ಟು ವಿಫಲಗೊಂಡಿತ್ತು.
ಇದನ್ನೂ ಓದಿ: Vishwavani Editorial: ಮಾದಕ ದ್ರವ್ಯ ಜಾಲಕ್ಕೆ ಅಂಕುಶ ಅಗತ್ಯ
ಚಂದ್ರಯಾನ-3 ಮಿಷನ್ ಚಂದ್ರಯಾನ-2ರ ನಂತರದ ಕಾರ್ಯಾಚರಣೆಯಾಗಿದ್ದು, ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಇಳಿಯುವಿಕೆ ಮತ್ತು ಸಂಚಾರದಲ್ಲಿ ಸಂಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಇನ್ನು, ಚಂದ್ರಯಾನ-4 ಮಿಷನ್‌ಗೂ ಸರಕಾರ ಕಳೆದ ವರ್ಷವೇ ಅನುಮೋದನೆ ನೀಡಿದೆ. ಇದು ಚಂದ್ರನ ಮೇಲೆ ಇಳಿಯುವ ಮತ್ತು ಭೂಮಿಗೆ ಸುರಕ್ಷಿತವಾಗಿ ಮರಳುವ ಸಾಮರ್ಥ್ಯ ವನ್ನು ಹೊಂದಿದೆ.
ಚಂದ್ರಯಾನ 4 ಮಿಷನ್‌ನಲ್ಲಿ ಚಂದ್ರನ ಮೇಲಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಮರಳ ಲಿದೆ. ಇದೀಗ ಚಂದ್ರಯಾನ-5ಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಿದ್ದು, ಇದರಲ್ಲಿ ಹಲವು ಹೊಸತನಗಳಿವೆ. ಕಾರಣ ಇದು ಜಪಾನ್ ಜತೆ ಜಂಟಿಯಾಗಿ ಕೈಗೊಂಡಿರುವ ಚಂದ್ರನ ಅಧ್ಯಯನ ವಾಗಿದ್ದು, ಅನೇಕ ಯೋಜನೆಗಳಿವೆ. ಚಂದ್ರಯಾನ-5 ಲೂಪೆಕ್ಸ್ ಮಿಷನ್ ಹೆಚ್ಚಿನ ಸಾಮರ್ಥ್ಯದ ಲ್ಯಾಂಡರ್ ಅನ್ನು ಪ್ರದರ್ಶಿಸಲು ಯೋಜಿಸಲಾಗುತ್ತಿದೆ,
ಇದು ಭವಿಷ್ಯದ ಲ್ಯಾಂಡಿಂಗ್ ಮಿಷನ್‌ಗಳಿಗೆ ನಿರ್ಣಾಯಕ ಅಂಶವಾಗಿದೆ. ಇದರಲ್ಲಿ ಚಂದ್ರನ ಮೇಲ್ಮೈಯಲ್ಲಿ ಮಾನವ ಲ್ಯಾಂಡಿಂಗ್ ಕೂಡ ಸೇರಿದೆ. ಇದರ ಜತೆಗೆ ಪ್ರಮುಖವಾಗಿ ಭಾರತವು 2035ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಹೊಂದುವ ಉದ್ದೇಶ ಹೊಂದಿದೆ. ಇಸ್ರೊ ಸಂಸ್ಥೆಯ ಈ ಕಾರ್ಯಾಚರಣೆಯೂ ಯಶಸ್ವಿಯಾಗಲಿ. ಆ ಮೂಲಕ ಬಾಹ್ಯಾಕಾಶ ಸಂಶೋ ಧನೆಯಲ್ಲಿ ಮತ್ತಷ್ಟು ಮಹತ್ವದ ಸಾಧನೆಗಳನ್ನು ಮಾಡಲಿ.