Vishwavani Editorial: ಮಾದಕ ದ್ರವ್ಯ ಜಾಲಕ್ಕೆ ಅಂಕುಶ ಅಗತ್ಯ
ನೈಜೀರಿಯಾ, ಕಾಂಬೋಡಿಯಾ, ಥಾಯ್ಲೆಂಡ್, ಬರ್ಮಾ, ಅಪಘಾನಿಸ್ತಾನ ಮುಂತಾದ ದೇಶ ಗಳಿಂದ ಮಾದಕ ವಸ್ತು ಹರಿದು ಬರುತ್ತಲೇ ಇದೆ. ಗೃಹ ಇಲಾಖೆ ಮಾಹಿತಿ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ 25 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮಾದಕ ದ್ರವ್ಯ ಜಾಲದ ವಿರುದ್ಧ ವಿಶೇಷ ಕಾರ‍್ಯಾಚರಣೆ ಹಮ್ಮಿಕೊಳ್ಳಲಾಗಿದೆ.


ರಾಜ್ಯದ ಇತಿಹಾಸದ ಅತಿದೊಡ್ಡ ಪ್ರಮಾಣದ ಮಾದಕ ದ್ರವ್ಯವನ್ನು ಪತ್ತೆ ಹಚ್ಚಿರುವ ಮಂಗಳೂರು ಪೊಲೀಸರು ದಕ್ಷಿಣ ಆಫ್ರಿಕಾ ಮೂಲದ ಇಬ್ಬರು ಮಹಿಳಾ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ ಸುಮಾರು 75 ಕೋಟಿಗೂ ಅಧಿಕ ಮೌಲ್ಯದ 37 ಕೆ.ಜಿ ಎಂಡಿ ಎಂಎ ಮಾದಕ ದ್ರವ್ಯವನ್ನು ವಶಕ್ಕೆ ಪಡೆಯಲಾಗಿದೆ. ಮಂಗಳೂರು ನಗರ ಪೊಲೀಸರ ಈ ಕಾರ್ಯಾಚರಣೆಯನ್ನು ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರೂ ಶ್ಲಾಘಿಸಿದ್ದಾರೆ. ಆದರೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಕಳ್ಳ ಸಾಗಾಟ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕದ ವಿಷಯ. ಬೆಂಗ ಳೂರು, ಮಂಗಳೂರು, ಮೈಸೂರು, ಶಿ ಮೊಗ್ಗ, ಚಿಕ್ಕಮಗಳೂರು, ಕೊಡಗು, ಬೆಳಗಾವಿ ಸೇರಿ ರಾಜ್ಯದ ಪ್ರಮುಖ ನಗರಗಳು, ಶೈಕ್ಷಣಿಕ ಕೇಂದ್ರಗಳು ಮತ್ತು ಪ್ರವಾಸಿ ಕೇಂದ್ರಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಮಾದಕ ದ್ರವ್ಯದ ಜಾಲ ಹೆಚ್ಚುತ್ತಲೇ ಇದೆ. ಹೆಚ್ಚಿನ ಪ್ರಕರಣ ಗಳಲ್ಲಿ ದಕ್ಷಿಣ ಆಫ್ರಿಕಾದ ಪ್ರಜೆಗಳು ಆರೋಪಿ ಗಳಾಗಿದ್ದಾರೆ.
ಇದನ್ನೂ ಓದಿ:Vishwavani Editorial: ಬಿಸಿಲಿನ ಧಗೆ; ಇರಲಿ ಎಚ್ಚರ
ನೈಜೀರಿಯಾ, ಕಾಂಬೋಡಿಯಾ, ಥಾಯ್ಲೆಂಡ್, ಬರ್ಮಾ, ಅಪಘಾನಿಸ್ತಾನ ಮುಂತಾದ ದೇಶಗಳಿಂದ ಮಾದಕ ವಸ್ತು ಹರಿದು ಬರುತ್ತಲೇ ಇದೆ. ಗೃಹ ಇಲಾಖೆ ಮಾಹಿತಿ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ 25 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮಾದಕ ದ್ರವ್ಯ ಜಾಲದ ವಿರುದ್ಧ ವಿಶೇಷ ಕಾರ‍್ಯಾಚರಣೆ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿಯೇ ನೂರಾರು ಪ್ರಕರಣಗಳು ದಾಖಲಾಗಿವೆ. ಕಳೆದ ಡಿಸೆಂಬರ್ ಮಧ್ಯ ಭಾಗದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಅಂತಾರಾಷ್ಟ್ರೀಯ ಮಾದಕವಸ್ತು ಕಾರ್ಯಾಚರಣೆಯನ್ನು ಭೇದಿಸಿ ನಡೆಸಿದ ದಾಳಿಯಲ್ಲಿ 24 ಕೋಟಿ ರೂ. ಮೌಲ್ಯದ 12 ಕಿಲೋಗ್ರಾಂಗಳಷ್ಟು ಎಂಡಿಎಂಎ ಹರಳುಗಳನ್ನು ವಶಪಡಿಸಿಕೊಂಡಿದ್ದರು.
ಈ ಪ್ರಕರಣದಲ್ಲೂ ನೈಜೀರಿಯಾದ ಮಹಿಳೆಯೊಬ್ಬಳನ್ನು ಬಂಧಿಸಲಾಗಿತ್ತು. ಈಕೆ ಟಿಸಿ ಪಾಳ್ಯ ಪ್ರದೇಶದಲ್ಲಿ ಆಫ್ರಿಕನ್ ಸಮುದಾಯಕ್ಕೆ ಆಹಾರ ಒದಗಿಸುವ ದಿನಸಿ ಅಂಗಡಿ ಯನ್ನು ನಡೆಸುತ್ತಿದ್ದಳು. ಇಲ್ಲಿಂದಲೇ ನಗರದ ಕಾಲೇಜು ವಿದ್ಯಾರ್ಥಿಗಳು, ಖಾಸಗಿ ವಲ ಯದ ಉದ್ಯೋಗಿಗಳು ಮತ್ತು ವಿದೇಶಿ ಪ್ರಜೆಗಳಿಗೆ ಮಾದಕದ್ರವ್ಯ ಪೂರೈಸುತ್ತಿದ್ದಳು. ನಾಲ್ಕು ತಿಂಗಳ ಹಿಂದಷ್ಟೇ ಅಂಡಮಾನ್ ದ್ವೀಪ ಪ್ರದೇಶದಲ್ಲಿ ನಡೆಸಿದ ಕಾರ‍್ಯಾಚರಣೆಯೊಂದ ರಲ್ಲಿ ಸೇನೆ 8000 ಕೋಟಿ ರು.ಗಳಿಗೂ ಅಧಿಕ ಮೊತ್ತದ ಎಂಡಿಎಂಎ ವಶಪಡಿಸಿಕೊಂಡಿತ್ತು.
ದಿಲ್ಲಿ ಮತ್ತು ಗುಜರಾತ್‌ನಲ್ಲಿ ತಲಾ 5 ಸಾವಿರ ಕೋಟಿ ಮೊತ್ತದ ಕೊಕೇನ್ ವಶಪಡಿಸಿಕೊಳ್ಳ ಲಾಗಿತ್ತು. ಮಾದಕ ದ್ರವ್ಯ ತಡೆಗೆ ಏಕಕಾಲದಲ್ಲಿ ಕಾರ‍್ಯಾಚರಣೆ ಮತ್ತು ಜಾಗೃತಿ ಅಗತ್ಯವಿದೆ. ಜತೆಗೆ ನಮ್ಮ ಗುಪ್ತಚರ ದಳವನ್ನು ಬಲಪಡಿಸಬೇಕಾಗಿದೆ.