ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಉಗ್ರರಿದ್ದಾರೆ, ನಿರ್ಲಕ್ಷ್ಯ ಸಲ್ಲ

ಪಾಕಿಸ್ತಾನ ಮೂಲದ ‘ಲಷ್ಕರ್-ಎ-ತೈಬಾ’ (ಎಲ್‌ಇಟಿ) ಉಗ್ರಗಾಮಿ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ದಕ್ಷಿಣ ಕಾಶ್ಮೀರ ಭಾಗದಲ್ಲಿ ನಿರಾಳವಾಗಿ ಮತ್ತು ರಾಜಾರೋಷವಾಗಿ ಓಡಾಡಿಕೊಂಡಿರುವುದನ್ನು ವ್ಯಾಪಾರದ ಮಳಿಗೆಯೊಂದರ ಸಿಸಿಟಿವಿ ಕ್ಯಾಮೆರಾ ಸೆರೆ ಹಿಡಿದಿರುವ ಸುದ್ದಿ ಬಂದಿದೆ. ‘ಮೀನಿನ ಹೆಜ್ಜೆಯ ಜಾಡನ್ನಾದರೂ ಕಂಡುಹಿಡಿಯಬಹುದು, ಆದರೆ ಕುತ್ಸಿತ ಜನರ ದುರಾಲೋಚನೆಗಳನ್ನು ಮುಂಚಿತ ವಾಗಿ ಲೆಕ್ಕಿಸುವುದು ಕಷ್ಟ’ ಎಂಬ ಮಾತನ್ನು ಗಮನದಲ್ಲಿಟ್ಟು ಕೊಂಡು, ಈ ಬೆಳವಣಿಗೆಯನ್ನು ಹದ್ದಿನ ಕಣ್ಣುಗಳಿಂದ ವಿಶ್ಲೇಷಿಸಬೇಕಾದ ಅಗತ್ಯವಿದೆ.

Vishwavani Editorial: ಉಗ್ರರಿದ್ದಾರೆ, ನಿರ್ಲಕ್ಷ್ಯ ಸಲ್ಲ

-

Ashok Nayak
Ashok Nayak Dec 29, 2025 8:33 AM

ಪಾಕಿಸ್ತಾನ ಮೂಲದ ‘ಲಷ್ಕರ್-ಎ-ತೈಬಾ’ (ಎಲ್‌ಇಟಿ) ಉಗ್ರಗಾಮಿ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ದಕ್ಷಿಣ ಕಾಶ್ಮೀರ ಭಾಗದಲ್ಲಿ ನಿರಾಳವಾಗಿ ಮತ್ತು ರಾಜಾರೋಷವಾಗಿ ಓಡಾಡಿಕೊಂಡಿರುವು ದನ್ನು ವ್ಯಾಪಾರದ ಮಳಿಗೆಯೊಂದರ ಸಿಸಿಟಿವಿ ಕ್ಯಾಮೆರಾ ಸೆರೆ ಹಿಡಿದಿರುವ ಸುದ್ದಿ ಬಂದಿದೆ. ‘ಮೀನಿನ ಹೆಜ್ಜೆಯ ಜಾಡನ್ನಾದರೂ ಕಂಡುಹಿಡಿಯಬಹುದು, ಆದರೆ ಕುತ್ಸಿತ ಜನರ ದುರಾ ಲೋಚನೆಗಳನ್ನು ಮುಂಚಿತವಾಗಿ ಲೆಕ್ಕಿಸುವುದು ಕಷ್ಟ’ ಎಂಬ ಮಾತನ್ನು ಗಮನದಲ್ಲಿಟ್ಟು ಕೊಂಡು, ಈ ಬೆಳವಣಿಗೆಯನ್ನು ಹದ್ದಿನ ಕಣ್ಣುಗಳಿಂದ ವಿಶ್ಲೇಷಿಸಬೇಕಾದ ಅಗತ್ಯವಿದೆ.

ಏಕೆಂದರೆ, ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಅವಧಿಯಲ್ಲಿ, ಪಾಕಿಸ್ತಾನಕ್ಕೆ ಸಾಕಷ್ಟು ತಪರಾಕಿ ಬಿದ್ದಿರುವ ಮತ್ತು ಉಗ್ರರ ನೆಲೆಗಳು ನಾಶವಾಗಿರುವ ಕಹಿ ವಾಸ್ತವವು ಇಂಥ ಜನರನ್ನು ಕೆಂಡವಾಗಿಸಿರುವ ಸಾಧ್ಯತೆಯಿದೆ; ಅದು ‘ಬೂದಿ ಮುಚ್ಚಿದ ಕೆಂಡ’ ಆಗಿದ್ದಿರಲಿಕ್ಕೂ ಸಾಕು.

ಇದನ್ನೂ ಓದಿ: Vishwavani Editorial: ಉಗ್ರವಾದಕ್ಕೂ ಇದೇ ಗತಿಯಾಗಲಿ

ಹಾಗಾಗಿ, ‘ಇದು ಬರಿಯ ಬೂದಿ’ ಎಂದು ನಾವು ನಿರ್ಲಕ್ಷಿಸುವ ಹಾಗಿಲ್ಲ. ಜತೆಗೆ, ನಾವು ಇದುವರೆಗೆ ತರಿದುಹಾಕಿರುವುದು ಉಗ್ರವಾದ ಎಂಬ ವಿಷವೃಕ್ಷದ ರೆಂಬೆ-ಕೊಂಬೆಗಳನ್ನಷ್ಟೇ, ಅದರ ಮೂಲೋ ತ್ಪಾಟನೆ ಬಾಕಿಯಿದೆ. ಅದಕ್ಕೆ ಮಹತ್ತರ ಸಂಕಲ್ಪದ ಅಗತ್ಯವಿದೆ ಮತ್ತು ವಿಶ್ವದ ಮಿಕ್ಕ ರಾಷ್ಟ್ರಗಳ ಸಾಂಗತ್ಯವೂ ಬೇಕಾಗಿದೆ.

ಇದು ತುರ್ತಾಗಿ ಆಗಬೇಕಿರುವ ಕೆಲಸ, ಇಲ್ಲವಾದಲ್ಲಿ ಉಗ್ರರದ್ದು ರಕ್ತಬೀಜಾಸುರನ ಸಂತತಿ ಆಗುವ ಅಪಾಯ ಇದ್ದೇ ಇದೆ. ವಿವಿಧ ದೇಶಗಳ ಆಳುಗರು ಮತ್ತು ಸಮಾನಮನಸ್ಕರು ಒಂದೆಡೆ ಕಲೆತು, ಈ ಮಹಾಯಜ್ಞಕ್ಕೆ ಸಂಬಂಽಸಿದಂತೆ ಒಂದು ನಿರ್ಣಾಯಕ ಠರಾವನ್ನು ಹೊಮ್ಮಿಸುವಂತಾಗಲಿ...