ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ವಂಚಕರಿಗೆ ಇನ್ನು ಉಳಿಗಾಲವಿಲ್ಲ

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ 6000 ಕೋಟಿ ರುಪಾಯಿಗೂ ಹೆಚ್ಚಿನ ಸಾಲ ಪಡೆದು ನಾಮ ಹಾಕಿ ಭಾರತದಿಂದ ಪಲಾಯನ ಮಾಡಿದ್ದ ಮೆಹುಲ್ ಚೋಕ್ಸಿಯು ಬೆಲ್ಜಿಯಂನಲ್ಲಿ ಬಂಧನಕ್ಕೊಳಗಾಗಿದ್ದು ಈತನನ್ನೂ ಹೆಡೆಮುರಿ ಕಟ್ಟಿ ಭಾರತಕ್ಕೆ ಎಳೆ ತರುವ ಕಾಲ ಸನ್ನಿಹಿತವಾಗಿದೆ

ವಂಚಕರಿಗೆ ಇನ್ನು ಉಳಿಗಾಲವಿಲ್ಲ

Profile Ashok Nayak Apr 16, 2025 5:24 AM

2008ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ತಹಾವುರ್ ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಈಗಾಗಲೇ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಕುಕೃ ತ್ಯಕ್ಕೆ ಯಾವೆಲ್ಲಾ ಶಕ್ತಿಗಳು ಕೈಜೋಡಿಸಿದ್ದವು ಎಂಬುದು ಈ ವಿಚಾರಣೆಯ ವೇಳೆ ಬಯಲಾಗಲಿದೆ ಮತ್ತೊಂದೆಡೆ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ 6000 ಕೋಟಿ ರುಪಾಯಿಗೂ ಹೆಚ್ಚಿನ ಸಾಲ ಪಡೆದು ನಾಮ ಹಾಕಿ ಭಾರತದಿಂದ ಪಲಾಯನ ಮಾಡಿದ್ದ ಮೆಹುಲ್ ಚೋಕ್ಸಿಯು ಬೆಲ್ಜಿಯಂ ನಲ್ಲಿ ಬಂಧನಕ್ಕೊಳಗಾಗಿದ್ದು ಈತನನ್ನೂ ಹೆಡೆಮುರಿ ಕಟ್ಟಿ ಭಾರತಕ್ಕೆ ಎಳೆ ತರುವ ಕಾಲ ಸನ್ನಿಹಿತ ವಾಗಿದೆ. ನಮ್ಮ ದೇಶದ ವ್ಯವಸ್ಥೆಯಲ್ಲಿರಬಹುದಾದ ನ್ಯೂನತೆಗಳನ್ನು ಬಳಸಿಕೊಂಡು ಹೇಗೆ ಬೇಕಾದರೂ ಮೆರೆಯಬಹುದು ಎಂಬ ಭ್ರಮೆಯಿಟ್ಟುಕೊಂಡು ಆಟ ಆಡಿದವರಿಗೆ ಮತ್ತು ಆಡುತ್ತಿರು ವವರಿಗೆ, ಸಾಲ ಪಡೆದ ಬ್ಯಾಂಕುಗಳಿಗೆ ವಂಚಿಸಿ ಭಾರತದಿಂದ ಪರಾರಿಯಾಗಿ, ದೂರದೇಶದಲ್ಲೆಲ್ಲೋ ಕೂತು ಐಷಾರಾಮಿ ಜೀವನ ನಡೆಸುತ್ತಿರುವ ‘ಪ್ರಭಾವಿ’ಗಳಿಗೆ ಈ ಎರಡು ಬೆಳವಣಿಗೆಗಳು ಎಚ್ಚರಿಕೆ ಗಂಟೆ ಯಾಗಬೇಕು ಹಾಗೂ ‘ಕಾನೂನಿನ ಕೈಗಳು ತುಂಬಾ ಉದ್ದವಾಗಿರುತ್ತವೆ ಮತ್ತು ಕಣ್ಣುಗಳು ತುಂಬಾ ತೀಕ್ಷ್ಣವಾಗಿರುತ್ತವೆ’ ಎಂಬ ಕಹಿಸತ್ಯದ ರುಚಿ ಇಂಥವರಿಗೆ ಗೊತ್ತಾಗುವಂತಾಗಬೇಕು.

ಇದನ್ನೂ ಓದಿ: Vishwavani Editorial: ಇದು ಇಂದ್ರನ ಅಮರಾವತಿಯೇ?

ಇಲ್ಲವಾದಲ್ಲಿ, ‘ಹಣ-ಅಧಿಕಾರ- ಪ್ರಭಾವ ಇದ್ದುಬಿಟ್ಟರೆ ಈ ದೇಶದಲ್ಲಿ ಏನು ಬೇಕಾದರೂ ಅಕ್ರಮ ವೆಸಗಿ ದಕ್ಕಿಸಿಕೊಳ್ಳಬಹುದು’ ಎಂಬ ಗ್ರಹಿಕೆಯೇ ಕೆಲವರ ಪಾಲಿಗೆ ಸ್ಥಾಯಿಯಾಗಿ ಬಿಡುತ್ತದೆ. ‘ದೇವರ ನ್ಯಾಯ ನೀಡಿಕೆಯಲ್ಲಿ ವಿಳಂಬವಾಗಬಹುದು, ಆದರೆ ಅಲ್ಲಿ ಅನ್ಯಾಯಕ್ಕಂತೂ ಆಸ್ಪದವಿಲ್ಲ’ ಎಂಬರ್ಥದ ಮಾತೊಂದು ನಮ್ಮಲ್ಲಿ ಚಾಲ್ತಿಯಲ್ಲಿದೆ.

ಈ ಮಾತಿಗೆ ಪುಷ್ಟಿ ನೀಡುವಂತೆ, ಕೆಲ ವರ್ಷಗಳ ನಂತರ ವಾದರೂ ‘ವಂಚಕ-ಮಿಕ’ಗಳು ಸಿಕ್ಕಿ ಬೀಳುತ್ತಿವೆ. ಆರ್ಥಿಕ ನೆಲೆಯಲ್ಲಾಗಲೀ ಸಾಮಾಜಿಕ ನೆಲೆಯಲ್ಲಾಗಲೀ ಭಾರತಕ್ಕೆ ವಂಚಿಸಿದರೆ ಇನ್ನು ಉಳಿಗಾಲವಿಲ್ಲ ಎಂಬುದು ದುರುಳರಿಗೆ ಅರ್ಥವಾದರೆ ಸಾಕು!