#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Vishwavani Editorial: ಸಮೂಹ ಸಾರಿಗೆ ಬಳಕೆಗೆ ಉತ್ತೇಜಿಸಬೇಕಿದೆ

ದುಬಾರಿ ವೆಚ್ಚದಿಂದ ಮೆಟ್ರೊ ಯೋಜನೆಯು ಕಾರ್ಯಸಾಧುವಲ್ಲದ ಹಾಗೆ ನಿರ್ವಹಣೆ ಮಾಡುವ ದುರವಸ್ಥೆಯಾಗಿದೆ. 18 ಕಿ.ಮಿ ಹಳದಿ ಮಾರ್ಗವು ಸಿದ್ಧವಾಗಿದ್ದರೂ ರೈಲು ಬೋಗಿಗಳು ಇಲ್ಲದೆ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಮುಂದಾಲೋಚನೆಯ ಕೊರತೆ ಹಾಗೂ ಸೂಕ್ತ ತಯಾರಿ ಇಲ್ಲದ ಕಾರಣ ಸಂಚಾರ ಆರಂಭಿಸಲು ಸಾಧ್ಯವಾಗದೆ ಮೆಟ್ರೊ ನಿಗಮವು ಕೋಟ್ಯಂತರ ರುಪಾಯಿ ನಷ್ಟ ಅನುಭವಿಸು ತ್ತಿರುವುದೇ ಇದಕ್ಕೆ ತಾಜಾ ಉದಾಹರಣೆ

Editorial: ಸಮೂಹ ಸಾರಿಗೆ ಬಳಕೆಗೆ ಉತ್ತೇಜಿಸಬೇಕಿದೆ

Profile Ashok Nayak Feb 11, 2025 9:11 AM

ಸಾರಿಗೆ ದರ, ಪೆಟ್ರೋಲ್-ಡೀಸೆಲ್ ದರ, ಹೊಸ ವಾಹನ ಖರೀದಿಯ ಮೇಲೆ 1000 ರು. ಹೊಸ ಸೆಸ್ ಹೀಗೆ ಹತ್ತಾರು ಬೆಲೆಗಳ ಹೆಚ್ಚಳದಿಂದಾಗಿ ಹೈರಾಣಾಗಿರುವ ಜನರ ಮೇಲೆ ಇದೀಗ ಮೆಟ್ರೊ ದರ ಹೊರೆ ಹಾಕಲಾಗಿದೆ. ಇದೀಗ ದೇಶದ ಅತ್ಯಂತ ದುಬಾರಿಯಾದ ಮೆಟ್ರೋ ಸೇವೆಯನ್ನು ನೀಡುತ್ತಿ ರುವ ರಾಜ್ಯ ಎಂಬ ಕುಖ್ಯಾತಿಗೆ ಕರ್ನಾಟಕ ಪಾತ್ರವಾಗಿದೆ. ಬೆಂಗಳೂರು ಮೆಟ್ರೋ ಪ್ರಯಾಣ ದರವು ದೆಹಲಿ ಮೆಟ್ರೋಗಿಂತ ಹೆಚ್ಚಾದಂತಾಗಿದೆ. ಬೆಂಗಳೂರಿಗೆ ಹೋಲಿಕೆ ಮಾಡಿದರೆ ದೆಹಲಿ ಮೆಟ್ರೋ ವಿಸ್ತರಣೆ ಸಾಕಷ್ಟು ದೊಡ್ಡದು. ದೆಹಲಿ ಮೆಟ್ರೋ ಸೇವೆಯಲ್ಲಿ ಎಂಡ್ ಟು ಎಂಡ್ ಕನೆಕ್ಟಿವಿಟಿ ಇದೆ. (ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ನೇರ ಮೆಟ್ರೋ ಸಂಪರ್ಕ).

ಆದರೆ ಬೆಂಗಳೂರಿನಲ್ಲಿ ಆ ರೀತಿ ಇಲ್ಲ. ಆದರೂ ಪ್ರಯಾಣ ದರ ಅಲ್ಲಿಗಿಂತ ಇಲ್ಲಿ ಜಾಸ್ತಿ ಆಗಿದೆ. ದುರದೃಷ್ಟಕರ ಸಂಗತಿಯೆಂದರೆ ಮೆಟ್ರೋ ಯೋಜನೆಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸಲು ವಿಫಲವಾಗಿ ಯೋಜನಾ ವೆಚ್ಚವು ದುಪ್ಪಟ್ಟಾಗಿದೆ.

ಇದನ್ನೂ ಓದಿ: Vishwavani Editorial: ನ್ಯಾಕ್ ದಂಧೆಗೆ ಕಡಿವಾಣ ಬೀಳಲಿ

ದುಬಾರಿ ವೆಚ್ಚದಿಂದ ಮೆಟ್ರೊ ಯೋಜನೆಯು ಕಾರ್ಯಸಾಧುವಲ್ಲದ ಹಾಗೆ ನಿರ್ವಹಣೆ ಮಾಡುವ ದುರವಸ್ಥೆಯಾಗಿದೆ. 18 ಕಿ.ಮಿ ಹಳದಿ ಮಾರ್ಗವು ಸಿದ್ಧವಾಗಿದ್ದರೂ ರೈಲು ಬೋಗಿಗಳು ಇಲ್ಲದೆ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಮುಂದಾಲೋಚನೆಯ ಕೊರತೆ ಹಾಗೂ ಸೂಕ್ತ ತಯಾರಿ ಇಲ್ಲದ ಕಾರಣ ಸಂಚಾರ ಆರಂಭಿಸಲು ಸಾಧ್ಯವಾಗದೆ ಮೆಟ್ರೊ ನಿಗಮವು ಕೋಟ್ಯಂತರ ರುಪಾಯಿ ನಷ್ಟ ಅನುಭವಿಸುತ್ತಿರುವುದೇ ಇದಕ್ಕೆ ತಾಜಾ ಉದಾಹರಣೆ.

ನಿಗಮದ ಅಧಿಕಾರಿಗಳ ಅದಕ್ಷತೆಗೆ ನಗರದ ನಾಗರಿಕರು ದಂಡ ತೆರುವಂತಾಗಿದೆ. ಬೆಂಗಳೂರು ಮೆಟ್ರೊದಲ್ಲಿ ಇತ್ತೀಚೆಗೆ ಯಾವುದೇ ಹೆಚ್ಚಿನ ಸೌಲಭ್ಯ ಕಲ್ಪಿಸಿಲ್ಲ. ಬಹಳಷ್ಟು ಜನ ನಿಂತೇ ಪ್ರಯಾಣ ಮಾಡುತ್ತಾರೆ. ದೆಹಲಿ ಹಾಗೂ ಇನ್ನು ಕೆಲವು ಮೆಟ್ರೊಗಳಲ್ಲಿ ಕಲ್ಪಿಸಿರುವ ಹಲವು ಸೌಲಭ್ಯಗಳನ್ನು ನಮ್ಮ ಮೆಟ್ರೊದಲ್ಲಿ ಒದಗಿಸಿಲ್ಲ. ಇದೆಲ್ಲವನ್ನೂ ಪರಿಶೀಲಿಸಿ ಕೇಂದ್ರ ಹಾಗೂ ರಾಜ್ಯ ಸರಕಾರವು ಮೆಟ್ರೊ ಟಿಕೆಟ್ ದರ ಏರಿಕೆ ಕುರಿತು ಪುನರ್ ಪರಿಶೀಲನೆ ನಡೆಸಿ, ಬೆಂಗಳೂರಿಗರ ಬದುಕನ್ನು ಸಹನೀಯಗೊಳಿಸಬೇಕು.

ಮೆಟ್ರೊ ಸೇವೆಯಲ್ಲಿ ವೃತ್ತಿಪರತೆ ಅಳವಡಿಸಿಕೊಂಡು ಕಾಲಬದ್ಧ ಅವಧಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ನಗರದ ನಾಗರಿಕರನ್ನು ಸಮೂಹ ಸಾರಿಗೆ ಬಳಕೆಗೆ ಉತ್ತೇ ಜಿಸುವ ಕ್ರಮಗಳಿಗೆ ನಿಗಮ ಮುಂದಾಗಬೇಕು.