ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಅತ್ತೂ ಕರೆದೂ ಔತಣಕ್ಕೆ...!

ಭಾರತ ಮತ್ತು ಪಾಕ್ ನಡುವಿನ ಸಂಘರ್ಷ ಸೇರಿದಂತೆ ವಿಶ್ವದ 7 ಯುದ್ಧಗಳನ್ನು ತಾವು ನಿಲ್ಲಿಸಿರುವು ದಾಗಿಯೂ, ಹೀಗೆ ವಿಶ್ವಶಾಂತಿಗೆ ಜೀವವನ್ನೇ ಮುಡಿಪಾಗಿಟ್ಟ ತಮಗೆ ಈ ಬಾರಿಯ ‘ನೊಬೆಲ್ ಶಾಂತಿ ಪುರಸ್ಕಾರ’ ದಕ್ಕಬೇಕು ಎಂದೂ ಟ್ರಂಪ್ ಮಹಾಶಯರು ಸಾರ್ವಜನಿಕವಾಗೇ ವಿಲಕ್ಷಣವಾಗಿ ಅಲವತ್ತು ಕೊಂಡಿದ್ದುಂಟು.

Vishwavani Editorial: ಅತ್ತೂ ಕರೆದೂ ಔತಣಕ್ಕೆ...!

-

Ashok Nayak Ashok Nayak Oct 11, 2025 9:26 AM

ಪ್ರಶಸ್ತಿ-ಪುರಸ್ಕಾರಗಳು ಅವಾಗಿಯೇ ಬರಬೇಕೇ ವಿನಾ, ಅವನ್ನು ನೀಡುವಂತೆ ನಾವಾಗೇ ದುಂಬಾಲು ಬೀಳಬಾರದು ಅಥವಾ ಹಠ ಮಾಡಬಾರದು. ಒಂದೊಮ್ಮೆ ಹಾಗೆ ಮಾಡಿದರೆ ಏನಾಗುತ್ತದೆ ಎಂಬುದನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈಗಿನ ‘ಮುಖವರ್ಣಿಕೆ’ ಯೇ ವರ್ಣಿಸುತ್ತದೆ! ಭಾರತ ಮತ್ತು ಪಾಕ್ ನಡುವಿನ ಸಂಘರ್ಷ ಸೇರಿದಂತೆ ವಿಶ್ವದ 7 ಯುದ್ಧಗಳನ್ನು ತಾವು ನಿಲ್ಲಿಸಿರುವುದಾಗಿಯೂ, ಹೀಗೆ ವಿಶ್ವಶಾಂತಿಗೆ ಜೀವವನ್ನೇ ಮುಡಿಪಾಗಿಟ್ಟ ತಮಗೆ ಈ ಬಾರಿಯ ‘ನೊಬೆಲ್ ಶಾಂತಿ ಪುರಸ್ಕಾರ’ ದಕ್ಕಬೇಕು ಎಂದೂ ಟ್ರಂಪ್ ಮಹಾಶಯರು ಸಾರ್ವಜನಿಕವಾಗೇ ವಿಲಕ್ಷಣವಾಗಿ ಅಲವತ್ತುಕೊಂಡಿದ್ದುಂಟು.

ಅವರು ಮಾಡಿದ ಅಬ್ಬರವನ್ನು ನೋಡಿದರೆ, ಪ್ರಶಸ್ತಿಯ ಆಯ್ಕೆ ಸಮಿತಿಯೂ ಅದಕ್ಕೆ ‘ಠಸ್ಸೆ’ ಒತ್ತಿಬಿಡುತ್ತದೆ ಎಂದೇ ಕೆಲವರು ಭಾವಿಸುವಂತಾಗಿತ್ತು. ಆದರೆ, ಅಮೆರಿಕವು ವಿಶ್ವದ ‘ದೊಡ್ಡಣ್ಣ’ ಎಂದಮಾತ್ರಕ್ಕೆ ಎಲ್ಲ ವಾರಗಳೂ ಭಾನುವಾರಗಳಾಗಲು ಸಾಧ್ಯವಿಲ್ಲವಲ್ಲಾ! ವೆನಿಜುವೆಲಾದ ವಿಪಕ್ಷ ನಾಯಕಿ ಕೊರಿನಾ ಮಚಾದೊ ಅವರಿಗೆ ಈ ಬಾರಿಯ ನೊಬೆಲ್ ಶಾಂತಿ ಪುರಸ್ಕಾರ ಸಂದಿದೆ, ಪರಿಣಾ ಮವಾಗಿ ಟ್ರಂಪ್ ಮತ್ತೊಮ್ಮೆ ನಗೆಪಾಟಲಿಗೆ ಈಡಾಗಿದ್ದಾರೆ.

ಇದನ್ನೂ ಓದಿ: Vishwavani Editorial; ಔಷಧವೇ ವಿಷವಾಗದಿರಲಿ

ವಿಶ್ವದ ವಿವಿಧೆಡೆ ದೇಶ-ದೇಶಗಳ ನಡುವೆ ಯುದ್ಧವಾಗುತ್ತಿದ್ದರೇನೇ ತನ್ನ ಶಸ್ತ್ರಾಸ್ತ್ರ ತಯಾರಿಕಾ ಉದ್ಯಮಗಳು ಉಸಿರಾಡಲು ಸಾಧ್ಯ ಎಂಬ ಗ್ರಹಿಕೆಯಲ್ಲೇ ದಿನದೂಡುವ ದೇಶ ಅಮೆರಿಕ. ಅದರ ಅಧ್ಯಕ್ಷರೆನಿಸಿಕೊಂಡಿರುವವರು ತಮ್ಮನ್ನು ‘ಶಾಂತಿ ದೂತ’ ಎಂಬಂತೆ ಬಿಂಬಿಸಿಕೊಳ್ಳಲು ಹೊರಟರೆ, ಅದು ನಗೆಪಾಟಲಿನ ಸಂಗತಿಯಾಗದೆ ಮತ್ತಿನ್ನೇನು ಆಗಲಿಕ್ಕೆ ಸಾಧ್ಯ? ಹೀಗೆ ‘ಅತ್ತೂ ಕರೆದೂ ಔತಣಕ್ಕೆ ಕರೆಸಿಕೊಳ್ಳುವ’ ನಡೆಗೆ ಒಡ್ಡಿಕೊಳ್ಳುವುದರ ಬದಲು ತಮ್ಮ ಪಾಡಿಗೆ ತಾವು ಅಮೆರಿಕದ ‘ರಾಜಕೀಯ’ದಲ್ಲಿ ತೊಡಗಿಸಿಕೊಂಡಿದ್ದರೆ ಟ್ರಂಪ್‌ರ ಮಾನ ಅಷ್ಟೋ ಇಷ್ಟೋ ಉಳಿಯುತ್ತಿತ್ತು.

ಆದರೆ, ಎರಡನೇ ಬಾರಿಗೆ ಗದ್ದುಗೆ ಏರಿದಾಗಿನಿಂದ ರಂಗದ ಮೇಲಿನ ‘ನಾಜೂಕಯ್ಯ’ನ ತರಹ ವರ್ತಿಸುತ್ತಿದ್ದಾರೆ ಟ್ರಂಪ್ ಮಹಾಶಯರು. ‘ಸೈಡ್‌ವಿಂಗ್’ನಲ್ಲಿ ನಿಂತಿರುವವರು ಇನ್ನಾದರೂ ಎಚ್ಚರಿಸದಿದ್ದರೆ ಪ್ರಾಯಶಃ ಮುಂದೆ ಕಷ್ಟವಾಗಬಹುದು!...