Hardik Pandya: ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಕೊಹ್ಲಿ ದಾಖಲೆ ಪುಡಿಗಟ್ಟಿದ ಪಾಂಡ್ಯ!
ಮಾರ್ಚ್ 22 ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಗೆ ಎಲ್ಲ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ ಮೊದಲ ಐಪಿಎಲ್ ಪಂದ್ಯದಲ್ಲೇ ನಿಷೇಧಕ್ಕೊಳಗಾಗಲಿದ್ದಾರೆ. ಇದಕ್ಕೆ ಕಾರಣ ಕಳೆದ ಐಪಿಎಲ್ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್(Mumbai Indians) 3 ಸಲ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡದ್ದು.


ಮುಂಬಯಿ: ಕಳೆದ ಭಾನುವಾರ ಮುಕ್ತಾಯ ಕಂಡಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ(Champions Trophy 2025) ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ 4 ವಿಕೆಟ್ ಅಂತರದ ಗೆಲುವು ಸಾಧಿಸಿ ಮೂರನೇ ಬಶರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಗೆಲುವಿನ ಬಳಿಕ ಟೀಮ್ ಇಂಡಿಯಾ ಆಟಗಾರರು ಟ್ರೋಫಿ ಜತೆ ತಮ್ಮದೇ ಶೈಲಿಯಲ್ಲಿ ಫೋಟೊಗಳನ್ನು ತೆಗೆಸಿಕೊಂಡಿದ್ದರು. ಅಲ್ಲದೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಹಾರ್ದಿಕ್ ಪಾಂಡ್ಯ(Hardik Pandya) ಅವರು ಹಂಚಿಕೊಂಡಿರುವ ಫೋಟೋ ಒಂದು(Hardik Pandya's Champions Trophy Picture) ದಾಖಲೆಯನ್ನೇ ಸೃಷ್ಟಿಸಿದೆ.
ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪಾಂಡ್ಯ ಟ್ರೋಫಿಯೊಂದಿಗೆ ನಿಂತಿರಿವ ಫೋಟೊವನ್ನು ಪೋಸ್ಟ್ ಮಾಡಿದ್ದರು. ಈ ಫೋಟೊ ಕೇವಲ ಆರು ನಿಮಿಷಗಳಲ್ಲಿ 1 ಮಿಲಿಯನ್ ಲೈಕ್‌ಗಳನ್ನು ಪಡೆದುಕೊಳ್ಳುವ ಮೂಲಕ, ಪಾಂಡ್ಯ ಅತಿ ವೇಗವಾಗಿ ಒಂದು ಮಿಲಿಯನ್ ಲೈಕ್ ಗಿಟ್ಟಿಸಿಕೊಂಡ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಂಡರು.
HARDIK PANDYA - THE FASTEST INDIAN TO HIT 1M LIKE ON INSTRAGRAM. 🤯
— Mufaddal Vohra (@mufaddal_vohra) March 12, 2025
- 1M Like In just 6 minutes....!!!! 🔥 pic.twitter.com/llCQGK8XJ4
ಪಾಂಡ್ಯಗೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಹೌದು ಕೊಹ್ಲಿ ಕಳೆದ ವರ್ಷ(2024) ವೆಸ್ಟ್ ಇಂಡೀಸ್‌ನ ಬಾರ್ಬಡೋಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಗೆಲುವಿನ ಬಳಿಕ ಕೊಹ್ಲಿ ಟ್ರೋಫಿಯೊಂದಿಗೆ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಆ ಪೋಸ್ಟ್ ಕೇವಲ ಏಳು ನಿಮಿಷಗಳಲ್ಲಿ 1 ಮಿಲಿಯನ್ ಲೈಕ್‌ಗಳನ್ನು ಪಡೆದುಕೊಂಡಿತ್ತು. ಇದೀಗ ಪಾಂಡ್ಯ ಈ ದಾಖಲೆಯನ್ನು ಮುರಿದಿದ್ದಾರೆ.
2024ರ ಟಿ20 ವಿಶ್ವಕಪ್ ಗೆದ್ದ ನಂತರ ಹಾರ್ದಿಕ್ ಪಾಂಡ್ಯ ಟ್ರೋಫಿಯೊಂದಿಗೆ ಹೇಗೆ ಪೋಸ್ ನೀಡಿದ್ದರೋ, ಅದೇ ರೀತಿ ಚಾಂಪಿಯನ್ಸ್ ಟ್ರೋಫಿಯೊಂದಿಗೂ ಪೋಸ್ ನೀಡಿದ್ದರು. ಪ್ರಸ್ತುತ, ಈ ಫೋಟೋ 1.66 ಕೋಟಿಗೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.
ಇದನ್ನೂ ಓದಿ ಭಾರತ ತಂಡಕ್ಕಾಗಿ ಇನ್ನೂ 5-6 ಐಸಿಸಿ ಟ್ರೋಫಿ ಗೆಲ್ಲಬೇಕು: ಹಾರ್ದಿಕ್ ಪಾಂಡ್ಯ ಶಪಥ!
ಐಪಿಎಲ್ ಮೊದಲ ಪಂದ್ಯಕ್ಕೆ ಪಾಂಡ್ಯ ಬ್ಯಾನ್
ಮಾರ್ಚ್ 22 ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಗೆ ಎಲ್ಲ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ ಮೊದಲ ಐಪಿಎಲ್ ಪಂದ್ಯದಲ್ಲೇ ನಿಷೇಧಕ್ಕೊಳಗಾಗಲಿದ್ದಾರೆ. ಇದಕ್ಕೆ ಕಾರಣ ಕಳೆದ ಐಪಿಎಲ್ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್(Mumbai Indians) 3 ಸಲ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡದ್ದು.
ಕಳೆದ ಬಾರಿಯ ಆವೃತ್ತಿಯ ಲಕ್ನೋ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಮೂರನೇ ಬಾರಿಗೆ ಸ್ಲೋ ಓವರ್ ರೇಟ್ ಕಾಯ್ದುಕೊಂಡ ಕಾರಣಕ್ಕೆ ಪಾಂಡ್ಯಗೆ 30 ಲಕ್ಷ ದಂಡ ಮತ್ತು ಒಂದು ಪಂದ್ಯ ನಿಷೇಧ ವಿಧಿಸಲಾಗಿತ್ತು. ಮುಂಬೈಗೆ ಅದು ಕೊನೆಯ ಲೀಗ್ ಪಂದ್ಯವಾಗಿದ್ದ ಕಾರಣ ಈ ಶಿಕ್ಷೆ ಈ ಬಾರಿಯ ಆವೃತ್ತಿಯಲ್ಲಿ ಮುಂದುವರಿಯಲಿದೆ. ಅದರನ್ವಯ ಮಾರ್ಚ್ 23 ರಂದು ಚೆನ್ನೈ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಕಣಕ್ಕಿಳಿಯುವಂತಿಲ್ಲ. ಮಾರ್ಚ್ 29 ರಂದು ನಡೆಯುವ ಗುಜರಾತ್ ಟೈಟಾನ್ಸ್ ವಿರುದ್ಧದ ದ್ವಿತೀಯ ಪಂದ್ಯಲ್ಲಿ ಪಾಂಡ್ಯ ನಿಷೇಧ ಮುಕ್ತವಾಗಿ ಮೈದಾನಕ್ಕಿಳಿಯಬಹುದು.