ದೇವಾಲಯದ ಬಳಿ ಶೂ ಧರಿಸಿದ ಪ್ರವಾಸಿಗರು: ಹಿಂದೂಗಳ ಭಾವನೆಗೆ ಧಕ್ಕೆ ತಂದವರ ಬೆವರಿಳಿಸಿದ ಯುವಕ
Viral Video: ಸಾರ್ವಜನಿಕ ಸ್ಥಳದಲ್ಲಿ ಹುಚ್ಚಾಟ ಮೆರೆಯುವುದು, ಧಾರ್ಮಿಕ ಕ್ಷೇತ್ರದಲ್ಲಿ ಅಶಿಸ್ತಿನಿಂದ ವರ್ತಿಸುವ ವಿಡಿಯೊಗಳು ವೈರಲ್ ಆಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರಾಖಂಡದ ಧಾರ್ಮಿಕ ಕ್ಷೇತ್ರವಾದ ಚಂದ್ರಶಿಲಾ ದೇವಾಲಯದ ಆವರಣದಲ್ಲಿ ಪ್ರವಾಸಿಗರು ಶೂ ಧರಿಸಿ ಕುಳಿತಿರುವ ವಿಡಿಯೊವೊಂದು ವೈರಲ್ ಆಗಿದೆ.
ದೇವಾಲಯದ ಬಳಿ ಶೂ ಧರಿಸಿದ ಪ್ರವಾಸಿಗರು -
ಡೆಹ್ರಾಡೂನ್, ಮೇ 27: ಇತ್ತೀಚೆಗೆ ಜನರು ನಾಗರಿಕ ಪ್ರಜ್ಞೆಯನ್ನೇ ಮರೆತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಹುಚ್ಚಾಟ ಮೆರೆಯುವುದು, ಧಾರ್ಮಿಕ ಕ್ಷೇತ್ರದಲ್ಲಿ ಅಶಿಸ್ತಿನಿಂದ ವರ್ತಿಸುವುದು ಹೀಗೆ ಎಡವಟ್ಟು ಮಾಡುತ್ತಿರುವ ವಿಡಿಯೊಗಳು ವೈರಲ್ (Viral News) ಆಗುತ್ತಿರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರಾಖಂಡದ ಧಾರ್ಮಿಕ ಕ್ಷೇತ್ರವಾದ ಚಂದ್ರಶಿಲಾ ದೇವಾಲಯದ ಆವರಣದಲ್ಲಿ ಪ್ರವಾಸಿಗರು ಶೂ ಧರಿಸಿ ಕುಳಿತಿರುವ ವಿಡಿಯೊವೊಂದು ವೈರಲ್ ಆಗಿದೆ. ಸದ್ಯ ಈ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಮಾಡಿದಂತೆ ಎಂದು ಕಿಡಿಕಾರಿದ್ದಾರೆ.
ಇತ್ತೀಚೆಗಷ್ಟೇ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಬಾದಾಮಿ ಗುಹಾಂತರ ದೇವಾಲಯದಲ್ಲಿ ಮುಸ್ಲಿಂ ಸಿಬ್ಬಂದಿಯೊಬ್ಬಳು ಶೂ ಧರಿಸಿ ಕುಳಿತಿದ್ದ ದೃಶ್ಯ ಹಿಂದು ಧಾರ್ಮಿಕ ಭಕ್ತರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಚಂದ್ರಶೀಲಾ ದೇವಾಲಯದಲ್ಲಿ ಇಬ್ಬರು ಪ್ರವಾಸಿಗರು ಶೂ ಧರಿಸಿ ಕುಳಿತಿರುವುದು ಕಂಡು ಬಂದಿದೆ.
ವಿಡಿಯೊ ನೋಡಿ:
Loved it! No fighting, screaming, pushing..
— Sidharth Shukla (@sidhshuk) May 26, 2026
Showed them their place with a few lines.
'we won't need tourists like you, don't come'
'tumpe do kaudi paise bhi nahin banenge'
'tumpe to views bhi nahin ayenge' #Uttarakhand #tourism #HimachalPradesh pic.twitter.com/ZndUikZiDd
ಚಂದ್ರಶಿಲಾ ಶಿಖರದ ಮೇಲಿರುವ ದೇವಾಲಯದ ಆವರಣದಲ್ಲಿ ಇಬ್ಬರು ಪ್ರವಾಸಿಗರು ಕುಳಿತಿದ್ದರು. ಆಗ ಸ್ಥಳೀಯ ಯುವಕನೊಬ್ಬ ತನ್ನ ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡ್ ಮಾಡಲು ಪ್ರಾರಂಭಿಸಿದ್ದಾನೆ. ಅಲ್ಲಿ ಕೂತಿದ್ದ ಪ್ರವಾಸಿಗರು ವಿಡಿಯೊಗೆ ಕೈ ಬೀಸಿ ನಗು ಬೀರಿದ್ದಾರೆ. ಸ್ಥಳೀಯ ಯುವಕ ಶೂ ಧರಿಸಿ ಪ್ರವಾಸಿಗರು ದೇವಾಲಯದ ಆವರಣದಲ್ಲಿ ಕುಳಿತಿರುವುದನ್ನು ತೋರಿಸಿದಾಗ ವಿಚಾರವೇ ಬದಲಾಗಿದೆ.
ಬ್ಲಿಂಕ್‌ಇಟ್‌ನಿಂದ ಕೇವಲ 6 ನಿಮಿಷಗಳಲ್ಲಿ ಆರ್ಡರ್ ಪಡೆದ ಅಮೆರಿಕದ ವ್ಯಕ್ತಿಗೆ ಅಚ್ಚರಿ
ಯುವಕ ವಿಡಿಯೊ ಮಾಡುತ್ತಿದ್ದಂತೆ ಪ್ರವಾಸಿಗರು ತರಾಟೆಗೆ ತೆಗೆದುಕೊಂಡಿದ್ದು, ಹಣ ಗಳಿಸಲು ನೀವು ಏನು ಮಾಡುತ್ತೀರಿ? ವಿಡಿಯೊ ಮಾಡುವ ಬದಲು ನೇರವಾಗಿ ವಿಷಯ ತಿಳಿಸಬಹುದಿತ್ತಲ್ಲವೇ ಎಂದು ಕಿಡಿಕಾರಿದ್ದಾರೆ. ಅದಕ್ಕೆ ಚಿತ್ರೀಕರಿಸಿದ ಯುವಕ, ʼʼನಾನು ಇದನ್ನುಮೊದಲೇ ಹೇಳಿದ್ದೇನೆ. ಇಲ್ಲಿ ಶೂ ಧರಿಸುವ ಹಾಗಿಲ್ಲ. ನನ್ನ ಮಾತನ್ನು ಕೇಳದಿದ್ದರೆ ಅದು ನಿಮ್ಮ ಸಮಸ್ಯೆʼʼ ಎಂದು ಉತ್ತರಿಸಿದ್ದಾನೆ.
ಇದಕ್ಕೆ ಪ್ರವಾಸಿ ಮಹಿಳೆ "ದುಡ್ಡು ಸಂಪಾದಿಸು, ವೀವ್ಸ್ ಗಳಿಸು" ಎಂದಾಗ "ನಿಮ್ಮನ್ನು ತೋರಿಸಿದರೆ ನನಗೆ ವೀವ್ಸ್ ಬರುವುದಿಲ್ಲ, ಹಣವೂ ಬರುವುದಿಲ್ಲʼʼ ಎಂದು ಉತ್ತರಿಸಿದ್ದಾನೆ. ವಿಡಿಯೊ ಡಿಲೀಟ್ ಮಾಡುವಂತೆ ಪ್ರವಾಸಿಗರು ಕೇಳಿದರೂ ಯುವಕ ನಿರಾಕರಿಸಿದ್ದಾನೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ 24 ಗಂಟೆಗಳಲ್ಲಿ 2.18 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ.
ನೆಟ್ಟಿಗರೊಬ್ಬರು, "ಇಂತಹ ಜನ ಕೇವಲ ಎಂಜಾಯ್ ಮಾಡಲು ಬರುತ್ತಾರೆ. ಗೌರವದಿಂದ ಅಲ್ಲ...ಇಂತಹ ಜನರನ್ನು ಅಲ್ಲಿಂದ ಓಡಿಸಬೇಕು" ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಇಲ್ಲಿ ಹಿಮ ಆವರಿಸಿದೆ. ವಿಡಿಯೊ ಮಾಡಿದ್ದು ತಪ್ಪುʼʼ ಎಂದು ಪ್ರವಾಸಿಗರನ್ನು ಸಮರ್ಥಿಸಿಕೊಂಡಿದ್ದಾರೆ.