ಅಭಿಮಾನಿಗಳ ಮುಂದೆ ಆಡಲು ಸಿದ್ಧ; ಎಬಿ ಡಿವಿಲಿಯರ್ಸ್
ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್ ಪಂದ್ಯ ಆಡಿರುವ ಎಬಿಡಿ 22 ಶತಕಗಳ ಜತೆಗೆ ಬರೋಬ್ಬರಿ 8765 ರನ್ ಗಳಿಸಿದ್ದಾರೆ. 218 ಏಕದಿನ ಪಂದ್ಯಗಳಲ್ಲಿ 9577 ರನ್ ಸಿಡಿಸಿದ್ದಾರೆ. ಈ ಪೈಕಿ 25 ಶತಕಗಳು ಸೇರಿವೆ. ಟಿ20 ಮಾದರಿಯಲ್ಲಿ 78 ಪಂದ್ಯ ಆಡಿ 1672 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ 184 ಪಂದ್ಯಗಳಿಂದ 5162 ರನ್ ಕಲೆ ಹಾಕಿದ್ದಾರೆ.

ab de villiers

ಜೊಹಾನ್ಸ್‌ಬರ್ಗ್: 'ಮಿಸ್ಟರ್ 360 ಡಿಗ್ರಿ ಬ್ಯಾಟರ್' ಖ್ಯಾತಿಯ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್(AB de Villiers) ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಲು ಸಜ್ಜಾಗಿದ್ದಾರೆ. ಅದು ಕೂಡ ನಾಯಕನಾಗಿ. ಮುಂಬರುವ ಜುಲೈ ತಿಂಗಳಲ್ಲಿ ನಡೆಯುವ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) 2ನೇ ಸೀಸನ್ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎಬಿಡಿ ಪ್ರತಿನಿಧಿಸಲಿದ್ದಾರೆ. ಜುಲೈ 18 ರಿಂದ ಆಗಸ್ಟ್ 2 ರವರೆಗೆ ಈ ಟೂರ್ನಿ ನಡೆಯಲಿದೆ.
2021ರಲ್ಲಿ ಎಬಿಡಿ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಇದೀಗ ನಾಲ್ಕು ವರ್ಷಗಳ ಬಳಿಕ ಮತ್ತೆ ಮೈದಾನದಲ್ಲಿ ಸದ್ದು ಮಾಡಲು ಸಿದ್ಧವಾಗಿದ್ದಾರೆ. ಮೈದಾನದ ಎಲ್ಲ ದಿಕ್ಕಿಗೂ ಚೆಂಡನ್ನು ಅಟ್ಟುವ ಕೌಶಲ್ಯವನ್ನು ಕರಗತ ಮಾಡಿಕೊಂಡಿರುವ ವಿಲಿಯರ್ಸ್, 'ಮಿಸ್ಟರ್ 360 ಡಿಗ್ರಿ ಬ್ಯಾಟರ್' ಎಂದೇ ಖ್ಯಾತಿ ಪಡೆದಿದ್ದರು.
'ನಾಲ್ಕು ವರ್ಷಗಳ ಬಳಿಕ ಮತ್ತೆ ನನ್ನ ಅಭಿಮಾನಿಗಳ ಮುಂದೆ ಕ್ರಿಕೆಟ್ ಆಡಲು ಕಾತರದಿಂದ ಕಾಯುತ್ತಿದ್ದೇನೆ' ಎಂದು ವಿಲಿಯರ್ಸ್ ಹೇಳಿದ್ದಾರೆ.
AB DE VILLIERS IS BACK...!!! 🫡
— Mufaddal Vohra (@mufaddal_vohra) January 28, 2025
- AB will return to the cricketing field in July with the WCL. 🥺❤️ pic.twitter.com/rhiPsNZZPH
ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್ ಪಂದ್ಯ ಆಡಿರುವ ಎಬಿಡಿ 22 ಶತಕಗಳ ಜತೆಗೆ ಬರೋಬ್ಬರಿ 8765 ರನ್ ಗಳಿಸಿದ್ದಾರೆ. 218 ಏಕದಿನ ಪಂದ್ಯಗಳಲ್ಲಿ 9577 ರನ್ ಸಿಡಿಸಿದ್ದಾರೆ. ಈ ಪೈಕಿ 25 ಶತಕಗಳು ಸೇರಿವೆ. ಟಿ20 ಮಾದರಿಯಲ್ಲಿ 78 ಪಂದ್ಯ ಆಡಿ 1672 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ 184 ಪಂದ್ಯಗಳಿಂದ 5162 ರನ್ ಕಲೆ ಹಾಕಿದ್ದಾರೆ.
ಇದನ್ನೂ ಓದಿ IPL 2025: ಮಾರ್ಚ್ 21 ರಿಂದ ಐಪಿಎಲ್ ಆರಂಭ; ಅಧ್ಯಕ್ಷ ಅರುಣ್ ಧುಮಾಲ್
ತಮ್ಮ 13 ವರ್ಷಗಳ ಐಪಿಎಲ್ ವೃತ್ತಿ ಜೀವನದಲ್ಲಿ ಎಬಿ ಡಿ ವಿಲಿಯರ್ಸ್ ಅವರು ಕೇವಲ ಎರಡು ತಂಡಗಳ ಪರ ಮಾತ್ರ ಆಡಿದ್ದಾರೆ. ಐಪಿಎಲ್ ಟೂರ್ನಿಯ ಆರಂಭಿಕ ವರ್ಷಗಳಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ (ಡೆಲ್ಲಿ ಕ್ಯಾಪಿಟಲ್ಸ್) ಪರ ಆಡಿದ್ದರು. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. ತಮ್ಮ ಐಪಿಎಲ್ ವೃತ್ತಿ ಜೀವನದ ಬಹುತೇಕ ಅವಧಿಯನ್ನು ಆರ್‌ಸಿಬಿ ತಂಡದಲ್ಲಿ ಅವರು ಕಳೆದಿದ್ದಾರೆ.