IPL 2025: ಮಾರ್ಚ್ 21 ರಿಂದ ಐಪಿಎಲ್ ಆರಂಭ; ಅಧ್ಯಕ್ಷ ಅರುಣ್ ಧುಮಾಲ್
ಐಪಿಎಲ್ ಪಂದ್ಯಾವಳಿಯ ಕುರಿತ ಎಲ್ಲ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟಗೊಳ್ಳಲಿದೆ. ಮಾರ್ಚ್ 21ಕ್ಕೆ ಟೂರ್ನಿ(IPL 2025) ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್ ಹೇಳಿದ್ದಾರೆ.
![IPL 2025: ಮಾರ್ಚ್ 21 ರಿಂದ ಐಪಿಎಲ್ ಆರಂಭ; ಅಧ್ಯಕ್ಷ ಅರುಣ್ ಧುಮಾಲ್](https://cdn-vishwavani-prod.hindverse.com/media/original_images/IPL.jpg)
IPL
![Profile](https://vishwavani.news/static/img/user.png)
ಮುಂಬಯಿ: ಬಹುನಿರೀಕ್ಷಿತ 18ನೇ ಆವೃತ್ತಿಯ ಐಪಿಎಲ್ ಆರಂಭದ(IPL 2025 Start Date) ಬಗ್ಗೆ ಗೊಂದಲವೊಂದು ಶುರುವಾಗಿದೆ. ಈ ಹಿಂದೆ ಐಪಿಎಲ್(IPL 2025) ಮಾರ್ಚ್ 23 ರಿಂದ ಪ್ರಾರಂಭವಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ ಖಚಿತಪಡಿಸಿದ್ದರು, ಆದರೆ ಇದೀಗ ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್ ಮಾರ್ಚ್ 21 ರಿಂದ ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿ ಮೂರನೇ ಆವೃತ್ತಿಯ ಸಂಸದ್ ಖೇಲ್ ಮಹಾಕುಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಧುಮಾಲ್, 'ಐಪಿಎಲ್ ಪಂದ್ಯಾವಳಿಯ ಕುರಿತ ಎಲ್ಲ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟಗೊಳ್ಳಲಿದೆ. ಮಾರ್ಚ್ 21ಕ್ಕೆ ಟೂರ್ನಿ ಆರಂಭಗೊಳ್ಳುವ ಸಾಧ್ಯತೆ ಇದೆ. ಹಿಮಾಚಲ ಪ್ರದೇಶದ ರಮಣೀಯ ತಾಣವಾದ ಧರ್ಮಶಾಲಾದಲ್ಲಿ ಈ ಬಾರಿ ಹೆಚ್ಚಿನ ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ' ಎಂದು ಹೇಳಿದರು.
ಇದನ್ನೂ ಓದಿ IPL 2025: ಆರ್‌ಸಿಬಿಗೆ ನಾಯಕನಾಗಲು ಕೊಹ್ಲಿ ಏಕೈಕ ಆಯ್ಕೆ; ಎಬಿಡಿ
'ಕಳೆದ ವರ್ಷ ನಡೆದಂತೆ ಈ ವರ್ಷ ಕೂಡಾ ಐಪಿಎಲ್ ಪಂದ್ಯಾವಳಿಗಳ ವಿಚಾರದಲ್ಲಿ ಯಾವುದೇ ಬದಲಾವಣೆಗಳು ಇಲ್ಲ. ಕಳೆದ ಆವೃತ್ತಿಯಂತೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲೂ 74 ಪಂದ್ಯಗಳು ನಡೆಯಲಿವೆ. ಇನ್ನು ಐಪಿಎಲ್ ಟೂರ್ನಿಯ ಮಾದರಿಯಲ್ಲೂ ಯಾವುದೇ ಬದಲಾವಣೆ ಮಾಡದಿರಲು ಬಿಸಿಸಿಐ ತೀರ್ಮಾನಿಸಿದೆ' ಎಂದು ಧುಮಾಲ್ ಹೇಳಿದರು.
🚨IPL 2025 to get underway from March 21🚨
— SportsTiger (@The_SportsTiger) January 28, 2025
📷: IPL#IPL2025 #IPLT20 #Cricket #IPLNews pic.twitter.com/sTFFmKYqXT
ಈ ಬಾರಿ ಕೆಎಂಎಫ್ ನಂದಿನಿ(KMF Nandini IPL) ಕೂಡ ಐಪಿಎಲ್ ಅಂಗಳಕ್ಕೆ ಕಾಲಿಡುವ ನಿರೀಕ್ಷೆ ಇದೆ. ಕನ್ನಡಿಗರ ನೆಚ್ಚಿನ ತಂಡವಾದ ಆರ್‌ಸಿಬಿಗೆ (Royal Challengers Bengaluru)ಪ್ರಾಯೋಜಕತ್ವ ವಹಿಸಲು ಮುಂದಾಗಿದೆ. ಈಗಾಗಲೇ ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ಈ ಕುರಿತು ಮಾಹಿಯನ್ನು ಕೂಡ ನೀಡಿದ್ದಾರೆ. ನಂದಿನ ಕಳೆದ ವರ್ಷ ನಡೆದಿದ್ದ ಪುರುಷರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳಿಗೆ ಪ್ರಾಯೋಜಕತ್ವ ವಹಿಸಿತ್ತು.
'ಕೆಎಂಎಫ್‌ನ ಬಜೆಟ್‌ಗೆ ಆರ್‌ಸಿಬಿಯವರು ಒಪ್ಪಿಕೊಂಡರೆ ಮುಂದಿನ ಐಪಿಎಲ್‌ನಲ್ಲಿ ಪ್ರಾಯೋಜಕತ್ವ ಮಾಡಲಾಗುವುದು. ಈ ಸಂಬಂಧ ಆರ್‌ಸಿಬಿ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಲಾಗುವುದುʼ ಎಂದು ಭೀಮಾನಾಯಕ್ ಹೇಳಿದ್ದರು.