ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

19 ಎಸೆತದಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದ ಅಭಿಷೇಕ್‌ ಶರ್ಮಾ; ವಿಶ್ವದ ಮೊದಲ ಆಟಗಾರ

Abhishek Sharma scripts T20I history: ಐರ್ಲೆಂಡ್ ವಿರುದ್ಧ ಅತ್ಯಂತ ವೇಗದ T20I ಅರ್ಧಶತಕ ಬಾರಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೂ ಅಭಿಷೇಕ್‌ ಪಾತ್ರರಾಗಿದ್ದಾರೆ. ದಾಖಲೆ ಸ್ಟೀಫನ್ ಮೈಬರ್ಗ್ ಹೆಸರಿನಲ್ಲಿದೆ. 2014 ರಲ್ಲಿ ಅವರು 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಲಿಟ್ಟನ್ ದಾಸ್(18 ಎಸೆತ) ದ್ವಿತೀಯ ಸ್ಥಾನದಲ್ಲಿದ್ದಾರೆ.

19 ಎಸೆತದಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದ ಅಭಿಷೇಕ್‌ ಶರ್ಮಾ

Abhishek Sharma -

Abhilash BC
Abhilash BC Jun 27, 2026 12:41 PM

ಬೆಲ್‌ಫಾಸ್ಟ್‌, ಜೂ.27: ಐರ್ಲೆಂಡ್ ವಿರುದ್ಧದ ಮೊದಲ ಟಿ20ಯಲ್ಲಿ ಭಾರತ ತಂಡ ಸೋಲು ಕಂಡರೂ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿ ಅರ್ಧಶತಕ ಸಿಡಿಸಿದ ಭಾರತದ ಆರಂಭಿಕ ಎಡಗೈ ಬ್ಯಾಟರ್‌ ಅಭಿಷೇಕ್‌ ಶರ್ಮಾ(Abhishek Sharma) ಅವರು ದಾಖಲೆಯೊಂದನ್ನು ಬರೆದಿದ್ದಾರೆ. ಪೂರ್ಣ ಸದಸ್ಯ ರಾಷ್ಟ್ರದ ಆಟಗಾರನೊಬ್ಬ 20 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಗರಿಷ್ಠ ಐದು ಅರ್ಧಶತಕಗಳನ್ನು ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪಂದ್ಯದಲ್ಲಿ ಎಡಗೈ ಆಟಗಾರ ಅಭಿಷೇಕ್‌ ಕೇವಲ 19 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಯುವರಾಜ್ ಸಿಂಗ್, ಡೇವಿಡ್ ವಾರ್ನರ್, ಫಿಲ್ ಸಾಲ್ಟ್, ಕಾಲಿನ್ ಮನ್ರೋ, ದಾಸುನ್ ಶನಕ ಮತ್ತು ಫಿನ್ ಅಲೆನ್ ತಲಾ ಮೂರು ಮಿಂಚಿನ ವೇಗದ ಅರ್ಧಶತಕಗಳನ್ನು ಗಳಿಸಿದ್ದಾರೆ. ಆದರೆ ಅಭಿಷೇಕ್‌ 5 ಬಾರಿ ಈ ಸಾಧನೆ ಮಾಡಿ ಅಗ್ರಸ್ಥಾನ ಪಡೆದಿದ್ದಾರೆ.

ಇದು ಮಾತ್ರವ ಐರ್ಲೆಂಡ್ ವಿರುದ್ಧ ಅತ್ಯಂತ ವೇಗದ T20I ಅರ್ಧಶತಕ ಬಾರಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ದಾಖಲೆ ಸ್ಟೀಫನ್ ಮೈಬರ್ಗ್ ಹೆಸರಿನಲ್ಲಿದೆ. 2014 ರಲ್ಲಿ ಅವರು 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಲಿಟ್ಟನ್ ದಾಸ್(18 ಎಸೆತ) ದ್ವಿತೀಯ ಸ್ಥಾನದಲ್ಲಿದ್ದಾರೆ.

ಐರ್ಲೆಂಡ್ ವಿರುದ್ಧ ಅತಿ ವೇಗದ T20I ಅರ್ಧಶತಕ

ಸ್ಟೀಫನ್ ಮೈಬರ್ಗ್ (ಸಿಲ್ಹೆಟ್ 2014)- 17 ಎಸೆತ

ಲಿಟ್ಟನ್ ದಾಸ್ (ಚಟ್ಟೋಗ್ರಾಮ್ 2023)- 18 ಎಸೆತ

ಅಭಿಷೇಕ್ ಶರ್ಮಾ (ಬೆಲ್‌ಫಾಸ್ಟ್ 2026)- 19 ಎಸೆತ

ಫಿಲ್ ಸಾಲ್ಟ್ (ಮಲಾಹೈಡ್ 2025)- 20 ಎಸೆತ

ಸೋಲು ಕಂಡ ಭಾರತ

183 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ತಂಡವು ಅಭಿಷೇಕ್ ಶರ್ಮಾ (50) ಅವರ ಅಬ್ಬರದ ಅರ್ಧಶತಕದ ಹೊರತಾಗಿಯೂ ಸೋತಿತು. ಪ್ರಮುಖ ಬ್ಯಾಟರ್‌ಗಳಾದ ಸಂಜು ಸ್ಯಾಮ್ಸನ್ (5 ರನ್), ಇಶಾನ್ ಕಿಶನ್ (1 ರನ್), ನಾಯಕನಾಗಿ ಮೊದಲ ಪಂದ್ಯವಾಡಿದ ಶ್ರೇಯಸ್ ಅಯ್ಯರ್ (3 ರನ್) ಹಾಗೂ ವಾಷಿಂಗ್ಟನ್ ಸುಂದರ್ (9 ರನ್) ಅವರ ವೈಫಲ್ಯವು ತಂಡದ ಸೋಲಿಗೆ ಕಾರಣವಾಯಿತು.

ಫಿಫಾ ನಾಕೌಟ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಚಿಕ್ಕ ದೇಶ ಕೇಪ್‌ ವರ್ಡೆ

ಐರ್ಲೆಂಡ್‌ ತಂಡದ ಮ್ಯಾಥ್ಯೂ ಹಂಪ್ರಿಸ್ (38ಕ್ಕೆ3) ಮತ್ತು ಮ್ಯಾಥ್ಯೂ ಹೊಲಾರ್ಡ್‌ (28ಕ್ಕೆ3) ಅವರ ಅಮೋಘ ಬೌಲಿಂಗ್ ಮುಂದೆ ‘ಟಿ20 ವಿಶ್ವಕಪ್ ಚಾಂಪಿಯನ್’ ಭಾರತ ತಂಡವು ಶರಣಾಯಿತು. 18.5 ಓವರ್‌ಗಳಲ್ಲಿ 148 ರನ್ ಗಳಿಸಿ ಸರ್ವಪತನ ಕಂಡಿತು. 34 ರನ್‌ಗಳಿಂದ ಗೆದ್ದ ಐರ್ಲೆಂಡ್ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು. ಎರಡನೇ ಹಾಗೂ ಕೊನೆಯ ಪಂದ್ಯವು 28ರಂದು ನಡೆಯಲಿದೆ.