Abhishek Sharma: ಎಬಿಡಿ ವಿಲಿಯರ್ಸ್ ದಾಖಲೆ ಮುರಿದ ಅಭಿಷೇಕ್ ಶರ್ಮಾ
IPL 2025: ಚೇಸಿಂಗ್ ವೇಳೆ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್, ಪಂಜಾಬ್ ಬೌಲರ್‌ಗಳ ಮೇಲೆರಗಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯನ್ನು ಸುರಿಸಿದರು. ಮುಟ್ಟಿದೆಲ್ಲ ಚಿನ್ನ ಎಂಬಂತೆ ಉಭಯ ಆಟಗಾರರು ಬಾರಿಸಿದ ಚೆಂಡು ಸರಾಗವಾಗಿ ಬೌಂಡರಿ ಲೈನ್ ದಾಟುತ್ತಿತ್ತು. ಈ ಜೋಡಿ ಮೊದಲ ವಿಕೆಟ್‌ಗೆ 171 ರನ್ ಕಲೆ ಹಾಕಿತು.


ಹೈದರಾಬಾದ್: ಪಂಜಾಬ್ ಕಿಂಗ್ಸ್ ವಿರುದ್ಧ ಶನಿವಾರ ನಡೆದಿದ್ದ ಐಪಿಎಲ್(IPL 2025) ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದ್ದ ಸನ್‌ರೈಸರ್ಸ್ ತಂಡದ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ(Abhishek Sharma) ಐಪಿಎಲ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ಮೂರನೇ ಹಾಗೂ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಈ ವೇಳೆ ಅವರು ಕ್ವಿಂಡನ್ ಡಿ ಕಾಕ್(140*) ಮತ್ತು ಎಬಿಡಿ ವಿಲಿಯರ್ಸ್(133*) ಅವರನ್ನು ಹಿಂದಿಕ್ಕಿದರು. ದಾಖಲೆ ಕ್ರಿಸ್ ಗೇಲ್(175*) ಹೆಸರಿನಲ್ಲಿದೆ. ಬ್ರೆಂಡನ್ ಮೆಕಲಮ್ (158*) ದ್ವಿತೀಯ ಸ್ಥಾನದಲ್ಲಿದ್ದಾರೆ. ಅಭಿಷೇಕ್ ಶರ್ಮಾ ಅವರ ಅಮೋಘ ಶತಕದ ನೆರವಿನಿಂದ ಹೈದರಾಬಾದ್ ತಂಡ 8 ವಿಕೆಟ್ ಅಂತರದ ಗೆಲುವು ಸಾಧಿಸಿತು.
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ದೊಡ್ಡ ಮೊತ್ತದ ಮೇಲಾಟದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಹೈದರಾಬಾದ್ ತಂಡ 8 ವಿಕೆಟ್ ಅಂತರದ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಬ್ಯಾಟಿಂಗ್ ಪ್ರದರ್ಶಿಸಿ 6 ವಿಕೆಟಿಗೆ 245 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಹೈದರಾಬಾದ್ ಸುಂಟರಗಾಳಿಯಂಥ ಬ್ಯಾಟಿಂಗ್ ನಡೆಸಿ 18.3 ಒವರ್ ಗಳಲ್ಲಿಯೇ 2 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.
ಇದನ್ನೂ ಓದಿ IPL 2025 Points Table: ಅಗ್ರಸ್ಥಾನ ಕಳೆದುಕೊಂಡ ಗುಜರಾತ್
ಚೇಸಿಂಗ್ ವೇಳೆ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್, ಪಂಜಾಬ್ ಬೌಲರ್‌ಗಳ ಮೇಲೆರಗಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯನ್ನು ಸುರಿಸಿದರು. ಮುಟ್ಟಿದೆಲ್ಲ ಚಿನ್ನ ಎಂಬಂತೆ ಉಭಯ ಆಟಗಾರರು ಬಾರಿಸಿದ ಚೆಂಡು ಸರಾಗವಾಗಿ ಬೌಂಡರಿ ಲೈನ್ ದಾಟುತ್ತಿತ್ತು. ಈ ಜೋಡಿ ಮೊದಲ ವಿಕೆಟ್‌ಗೆ 171 ರನ್ ಕಲೆ ಹಾಕಿತು.
ಅಬ್ಬರದ ಬ್ಯಾಟಿಂಗ್ ನಡೆಸಿದ ಅಭಿಷೇಕ್ ಕೇವಲ 55 ಎಸೆತಗಳಿಂದ 141 ರನ್ ಚಚ್ಚಿದರು. ಅವರ ಈ ಸೊಗಸಾದ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ ಬರೋಬ್ಬರಿ 10 ಸಿಕ್ಸರ್ ಮತ್ತು 14 ಬೌಂಡರಿ ಸಿಡಿಯಿತು. ಟ್ರಾವಿಸ್ ಹೆಡ್ 66 ರನ್ ಬಾರಿಸಿದರು. ಪಂಜಾಬ್ ಪರವಾಗಿ ಆರಂಭಿಕರಾದ ಪ್ರಿಯಾಂಶ್ ಆರ್ಯ(36), ಪ್ರಭ್‌ಸಿಮ್ರಾನ್ ಸಿಂಗ್(42), ನಾಯಕ ಶ್ರೇಯಸ್ ಅಯ್ಯರ್(82) ಮತ್ತು ಆಸ್ಟ್ರೇಲಿಯಾದ ಮಾರ್ಕಸ್ ಸ್ಟೋಯಿನಿಸ್(34*) ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ್ದರು.
Travis Head said, "the note has been in the pocket of Abhishek Sharma for 6 games, glad it came out tonight".
— Richard Kettleborough (@RichKettle07) April 12, 2025
~ Abhishek Sharma was trying hard since 6 matches and eventually got the reward today 👏🏻 A brilliant 141 (55) with 10 Sixes 💥#SRHvsPBKSpic.twitter.com/qVrLWFgHvR
ಐಪಿಎಲ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್
ಕ್ರಿಸ್ ಗೇಲ್ (ಆರ್‌ಸಿಬಿ) 175*
ಬ್ರೆಂಡನ್ ಮೆಕಲಮ್ (ಕೆಕೆಆರ್) 158*
ಅಭಿಷೇಕ್ ಶರ್ಮಾ(ಹೈದರಾಬಾದ್) 141
ಕ್ವಿಂಟನ್ ಡಿ ಕಾಕ್(ಲಕ್ನೋ) 140*
ಎಬಿಡಿ ವಿಲಿಯರ್ಸ್(ಆರ್‌ಸಿಬಿ) 133*