IPL 2025 Points Table: ಅಗ್ರಸ್ಥಾನ ಕಳೆದುಕೊಂಡ ಗುಜರಾತ್
IPL 2025: ನಾಲ್ಕು ಗೆಲುವಿನೊಂದಿಗೆ ಟೂರ್ನಿಯ ಅಜೇಯ ತಂಡವಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಗ್ರಸ್ಥಾನಿಯಾಗಿದೆ. ಗುಜರಾತ್ ಮಣಿಸಿದ ಲಕ್ನೋ ಮೂರನೇ ಸ್ಥಾನಕ್ಕೇರಿದೆ. ಕೋಲ್ಕತಾ ನೈಟ್ ರೈಡರ್ಸ್ ನಾಲ್ಕನೇ, ಆರ್‌ಸಿಬಿ 5 ನೇ ಸ್ಥಾನದಲ್ಲಿದೆ. 5 ಬಾರಿಯ ಚಾಂಪಿಯನ್‌ಗಳಾದ ಚೆನ್ನೈ ಸೂಪರ್ ಕಿಂಗ್ಸ್ ಕೊನೆಯ ಸ್ಥಾನಿಯಾಗಿದ್ದರೆ, ಮುಂಬೈ ಇಂಡಿಯನ್ಸ್ 9ನೇ ಸ್ಥಾನದಲ್ಲಿದೆ.


ಹೈದರಾಬಾದ್: ಶನಿವಾರ ನಡೆದಿದ್ದ ಡಬಲ್ ಹೆಡರ್ ಐಪಿಎಲ್(IPL 2025) ಪಂದ್ಯಗಳ ಬಳಿಕ ಅಂಕಪಟ್ಟಿಯಲ್ಲಿ(IPL 2025 Points Table) ಮಹತ್ವದ ಬದಲಾವಣೆ ಸಂಭವಿಸಿದೆ. ದಿನದ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋಲು ಕಂಡ ಗುಜರಾತ್ ಟೈಟಾನ್ಸ್(GT vs LSG) ಅಗ್ರಸ್ಥಾನದಿಂದ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ರಾತ್ರಿಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿದ ಸನ್‌ರೈಸರ್ಸ್ ಹೈದರಾಬಾದ್(PBKS vs SRH) 2 ಸ್ಥಾನಗಳ ಪ್ರಗತಿಯೊಂದಿಗೆ 8ನೇ ಸ್ಥಾನಕ್ಕೆ ಬಂದು ನಿಂತಿದೆ. ಪಂದ್ಯಕ್ಕೂ ಮುನ್ನ ಕೊನೆಯ ಸ್ಥಾನಿಯಾಗಿತ್ತು.
ಡೆಲ್ಲಿ ಅಗ್ರಸ್ಥಾನಿ
ನಾಲ್ಕು ಗೆಲುವಿನೊಂದಿಗೆ ಟೂರ್ನಿಯ ಅಜೇಯ ತಂಡವಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಗ್ರಸ್ಥಾನಿಯಾಗಿದೆ. ಗುಜರಾತ್ ಮಣಿಸಿದ ಲಕ್ನೋ ಮೂರನೇ ಸ್ಥಾನಕ್ಕೇರಿದೆ. ಕೋಲ್ಕತಾ ನೈಟ್ ರೈಡರ್ಸ್ ನಾಲ್ಕನೇ, ಆರ್‌ಸಿಬಿ 5 ನೇ ಸ್ಥಾನದಲ್ಲಿದೆ. 5 ಬಾರಿಯ ಚಾಂಪಿಯನ್‌ಗಳಾದ ಚೆನ್ನೈ ಸೂಪರ್ ಕಿಂಗ್ಸ್ ಕೊನೆಯ ಸ್ಥಾನಿಯಾಗಿದ್ದರೆ, ಮುಂಬೈ ಇಂಡಿಯನ್ಸ್ 9ನೇ ಸ್ಥಾನದಲ್ಲಿದೆ.
ಇಂದು(ಭಾನುವಾರ) ಕೂಡ ಡಬಲ್ ಹೆಡರ್ ಪಂದ್ಯ ನಡೆಯಲಿದ್ದು, ಹಗಲು ಪಂದ್ಯದಲ್ಲಿ ರಾಜಸ್ಥಾನ್ ಮತ್ತು ಆರ್‌ಸಿಬಿ ಮುಖಾಮುಖಿಯಾದರೆ, ರಾತ್ರಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸೆಣಸಾಟ ನಡೆಸಲಿವೆ.
ಲಕ್ನೋ ತಂಡದ ನಿಕೋಲಸ್ ಪೂರನ್ ಅವರು ಆರೆಂಜ್ ಕ್ಯಾಪ್ ಹೊಂದಿದ್ದರೆ, ನೂರ್ ಅಹ್ಮದ್ ಪರ್ಪಲ್ ಕ್ಯಾಪ್ ಪಡೆದಿದ್ದಾರೆ. ಗುಜರಾತ್ ತಂಡದ ಸಾಯಿ ಸುದರ್ಶನ್ ಶನಿವಾರದ ಪಂದ್ಯದಲ್ಲಿ ನಿಕೋಲಸ್ ಪೂರನ್ ಅವರನ್ನು ಹಿಂದಿಕ್ಕಿ ಆರೆಂಜ್ ಕ್ಯಾಪ್ ಪಡೆದರೂ ಈ ಖುಷಿ ಹೆಚ್ಚು ಸಮಯ ಇರಲಿಲ್ಲ. ನಿಕೋಲಸ್ ಪೂರನ್ ಮತ್ತೆ ಅಮೋಘ ಆಟವಾಡುವ ಮೂಲಕ ಆರೆಂಜ್ ಕ್ಯಾಪನ್ನು ವಶಪಡಿಸಿಕೊಂಡರು.
ಅಂಕಪಟ್ಟಿ ಹೀಗಿದೆ
IPL 2025 POINTS TABLE. 📈
— Mufaddal Vohra (@mufaddal_vohra) April 12, 2025
- No.9 & No.10 is worth 10 trophies. 🤯 pic.twitter.com/sODVaX2hY9