IPL 2026: ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ: ಅಭಿಷೇಕ್ ಶರ್ಮಾಗೆ ದಂಡ
Abhishek Sharma fined 25% of his match fee: "ಅಭಿಷೇಕ್ ಆರ್ಟಿಕಲ್ 2.3 ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಒಪ್ಪಿಕೊಂಡರು ಮತ್ತು ಮ್ಯಾಚ್ ರೆಫರಿಯ ಶಿಕ್ಷೆಯನ್ನು ಒಪ್ಪಿಕೊಂಡರು. ಲೆವೆಲ್ 1 ನೀತಿ ಸಂಹಿತೆಯ ಉಲ್ಲಂಘನೆಗಾಗಿ, ಮ್ಯಾಚ್ ರೆಫರಿಯ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ" ಎಂದು ಐಪಿಎಲ್‌ನ ಅಧಿಕೃತ ಪ್ರಕಟಣೆ ತಿಳಿಸಿದೆ.
Abhishek Sharma -
ಕೋಲ್ಕತಾ, ಎ.3: ಗುರುವಾರ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(KKR vs SRH) ವಿರುದ್ಧದ ಪಂದ್ಯದಲ್ಲಿ(IPL 2026) ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಸನ್‌ರೈಸರ್ಸ್ ಹೈದರಾಬಾದ್‌ನ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ(Abhishek Sharma)ಗೆ ಪಂದ್ಯ ಸಂಭಾವನೆಯ ಶೇ 25ರಷ್ಟು ದಂಡ ವಿಧಿಸಲಾಗಿದೆ ಮತ್ತು ಅವರ ಶಿಸ್ತಿನ ದಾಖಲೆಯಲ್ಲಿ ಒಂದು ಡಿಮೆರಿಟ್ ಅಂಕ ಸೇರಿಸಲಾಗಿದೆ.
ಕ್ಯಾಚ್ ವಿಚಾರವಾಗಿ ಅಭಿಷೇಕ್ ಶರ್ಮ ಫೀಲ್ಡ್ ಅಂಪೈರ್ ಜತೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು. ವರುಣ್ ಚಕ್ರವರ್ತಿ ಡೈವಿಂಗ್ ಕ್ಯಾಚ್ ತೆಗೆದುಕೊಂಡರು ಮತ್ತು ಚೆಂಡು ನೆಲವನ್ನು ಮುಟ್ಟಿದಂತೆ ತೋರುತ್ತಿತ್ತು, ಆದಾಗ್ಯೂ, ಮೂರನೇ ಅಂಪೈರ್ ಕ್ಯಾಚ್ ಕಾನೂನುಬದ್ಧವಾಗಿದೆ ಎಂದು ಪರಿಗಣಿಸಿದರು. ಇದನ್ನು ಒಪ್ಪದ ಅಭಿಷೇಕ್ ಮೈದಾನದಿಂದ ಹೊರನಡೆಯುವಾಗ ಅಂಪೈರ್ ಜತೆ ನಿರಾಶೆಯನ್ನು ವ್ಯಕ್ತಪಡಿಸಿದರು. ಇದು ಐಪಿಎಲ್ ನೀತಿ ಸಂಹಿತೆ ಉಲ್ಲಘನೆಯಾಗಿದೆ. ಪಂದ್ಯದಲ್ಲಿ ಅಭಿಷೇಕ್ ಕೇವಲ 21 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಸಿಕ್ಸರ್‌ಗಳೊಂದಿಗೆ 48 ರನ್ ಗಳಿಸಿದ್ದರು.
"ಗುರುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಸನ್‌ರೈಸರ್ಸ್ ಹೈದರಾಬಾದ್‌ನ ಅಭಿಷೇಕ್ ಶರ್ಮಾ ಅವರ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಲಾಗಿದೆ ಮತ್ತು ಒಂದು ಡಿಮೆರಿಟ್ ಪಾಯಿಂಟ್ ಅನ್ನು ನೀಡಲಾಗಿದೆ" ಎಂದು ಐಪಿಎಲ್ ಆಡಳಿತ ಮಂಡಳಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
KKR vs SRH: ಸೋತರೂ ನಾಯಕತ್ವ ಸಮರ್ಥಿಸಿಕೊಂಡ ಅಜಿಂಕ್ಯ ರಹಾನೆ
"ಅಭಿಷೇಕ್ ಆರ್ಟಿಕಲ್ 2.3 ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಒಪ್ಪಿಕೊಂಡರು ಮತ್ತು ಮ್ಯಾಚ್ ರೆಫರಿಯ ಶಿಕ್ಷೆಯನ್ನು ಒಪ್ಪಿಕೊಂಡರು. ಲೆವೆಲ್ 1 ನೀತಿ ಸಂಹಿತೆಯ ಉಲ್ಲಂಘನೆಗಾಗಿ, ಮ್ಯಾಚ್ ರೆಫರಿಯ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ" ಎಂದು ಐಪಿಎಲ್‌ನ ಅಧಿಕೃತ ಪ್ರಕಟಣೆ ತಿಳಿಸಿದೆ.
ಪಂದ್ಯ ಗೆದ್ದ ಹೈದರಾಬಾದ್
ಪಂದ್ಯದಲ್ಲಿ ಟಾಸ್ ಜಯಿಸಿದ ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಹೈದರಾಬಾದ್ ತಂಡವನ್ನು ಬ್ಯಾಟಿಂಗ್ ಇಳಿಸಿದರು. ಹೈದರಾಬಾದ್ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 226 ರನ್ ಗಳಿಸಿತು. ಗೆಲ್ಲಲು 227 ರನ್ ಗುರಿ ಪಡೆದ ಕೆಕೆಆರ್ ತಂಡ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದು 16 ಓವರ್ಗಳಲ್ಲಿ 161 ರನ್ ಗಳಿಸಿ ಆಲೌಟಾಯಿತು. ಕೆಕೆಆರ್ ಪರ ಎ.ರಘುವಂಶಿ(52 ರನ್, 29 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ರಿಂಕು ಸಿಂಗ್(35 ರನ್, 25 ಎಸೆತ)ಹಾಗೂ ಫಿನ್ ಅಲೆನ್(28 ರನ್, 7 ಎಸೆತ)ರನ್ ಗಳಿಸಿದರು.
ಹೈದರಾಬಾದ್ ಪರ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲೂ ಮಿಂಚಿದ ನಿತೀಶ್ ಎರಡು ವಿಕೆಟ್ ಗಳಿಸಿ ಎಸ್‌ಆರ್‌ಎಚ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರ ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಗೌರವ ಲಭಿಸಿತು. ಉಳಿದಂತೆ ಜಯದೇವ್ ಉನದ್ಕಟ್ (3-21)ಯಶಸ್ವಿ ಮತ್ತು ಇಶಾನ್ ಮಾಲಿಂಗ(2-14) ಉತ್ತಮ ಬೌಲಿಂಗ್ ನಡೆಸಿದರು.