ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Abhishek Sharma: ಏಷ್ಯಾಕಪ್‌ನಲ್ಲಿ ಕಾರು ಗೆದ್ದರೂ ಭಾರತದಲ್ಲಿ ಓಡಿಸುವಂತಿಲ್ಲ ಅಭಿಷೇಕ್ ಶರ್ಮಾ; ಕಾರಣ ಏನು?

2018ರ ಅಂಡರ್-19 ವಿಶ್ವಕಪ್ ವಿಜೇತ ತಂಡದ ಪ್ರಮುಖ ಆಟಗಾರನಾಗಿದ್ದ ಅಭಿಷೇಕ್ ಶರ್ಮಾ ಟೀಂ ಇಂಡಿಯಾಗೆ ಪ್ರವೇಶ ಪಡೆಯಲು ಬರೋಬ್ಬರಿ 6 ವರ್ಷಕ್ಕಿಂತ ಅಧಿಕ ಸಮಯ ತೆಗೆದುಕೊಂಡರು. ಆದರೆ ಅವರ ಜೊತೆ ಅಂಡರ್–19 ತಂಡದಲ್ಲಿ ಆಡಿದ್ದ ಪೃಥ್ವಿ ಶಾ, ಶುಭಮನ್ ಗಿಲ್ ಸೇರಿ ಕೆಲವು ಆಟಗಾರರು ಬೇಗನೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು.

ಮುಂಬಯಿ: ಈ ಬಾರಿಯ ಏಷ್ಯಾ ಕಪ್‌ನಲ್ಲಿ(Asia Cup 2025) ಪ್ರಚಂಡ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಅಭಿಷೇಕ್ ಶರ್ಮಾ(Abhishek Sharma), ತಾನಾಡಿದ 7 ಪಂದ್ಯಗಳಿಂದ 3 ಅರ್ಧಶತಕ ಸಹಿತ 314 ರನ್ ಸಿಡಿಸಿದ್ದರು. ಹಾಗೂ ಟೂರ್ನಿಯಲ್ಲಿ ಅತ್ಯಧಿಕ ರನ್ ಸ್ಕೋರರ್ ಆಗಿದ್ದು, ಆ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ ಅವರಿಗೆ HAVAL H9 SUV ಕಾರನ್ನು ನೀಡಲಾಗಿತ್ತು. ಆದರೆ ಅವರು ಈ ಕಾರನ್ನು ಭಾರತದಲ್ಲಿ ಓಡಿಸುವಂತಿಲ್ಲ ಎನ್ನುವುದು ಹಲವರಿಗೆ ಅಚ್ಚರಿ ತಂದಿದೆ.

ಹೌದು, ಈ ಕಾರು ಎಡಗೈ ಡ್ರೈವ್ ಆಗಿದ್ದು, ಇದು ಭಾರತೀಯ ರಸ್ತೆಗಳಲ್ಲಿ ಕಾನೂನುಬಾಹಿರವಾಗಿದೆ. ಭಾರತೀಯ ಆರ್‌ಟಿಒ ಕಾನೂನು ಬಲಗೈ ಡ್ರೈವ್ ವಾಹನಗಳನ್ನು ಮಾತ್ರ ಅನುಮತಿಸುತ್ತದೆ. ಇದರಿಂದಾಗಿ ಅಭಿಷೇಕ್‌ ತಮಗೆ ಸಿಕ್ಕ ಈ ಕಾರನ್ನು ದೇಶದಲ್ಲಿ ನೋಂದಾಯಿಸಲು ಅಥವಾ ಓಡಿಸಲು ಅಸಾಧ್ಯವಾಗಿದೆ.

ಅಭಿಷೇಕ್‌ ಮುಂದೆ ಎರಡು ಅವಕಾಶ

ಅಭಿಷೇಕ್‌ ಅವರ ಮುಂದೆ ಎರಡು ಅವಕಾಶವಿದೆ. ಒಂದು ಕಾರಿನ ಬದಲು ಹಣವನ್ನು ಪಡೆಯಬಹುದು, ಇಲ್ಲವಾದಲ್ಲಿ ಇದೇ ಕಂಪೆನಿಯ ಕಾರನ್ನು ಭಾರತದಲ್ಲಿ ಪಡೆದುಕೊಳ್ಳಬಹುದು. ಆದರೆ HAVAL H9 ಬಲಗೈ ಆವೃತ್ತಿ ಸದ್ಯಕ್ಕೆ ಬಿಡುಗಡೆ ಆಗಿಲ್ಲ. ವರದಿಗಳ ಪ್ರಕಾರ, HAVAL H9 ಬಲಗೈ ಆವೃತ್ತಿಯನ್ನು ಕಂಪನಿ ಭಾರತದಲ್ಲಿ ಶೀಘ್ರವೇ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಒಂದೊಮ್ಮೆ ಅಭಿಷೇಕ್‌ ಅವರು ಕಾರು ಬೇಕೆಂದರೆ ಅವರು ಬಲಗೈ ಆವೃತ್ತಿ ಬಿಡುಗಡೆ ತನಕ ಕಾಯಬೇಕಿದೆ.

ಇದನ್ನೂ ಓದಿ IND vs PAK: 'ಎಲ್' ಕೈ ಸನ್ನೆಯಿಂದ ಸಂಭ್ರಮಿಸಲು ಕಾರಣ ಬಹಿರಂಗಪಡಿಸಿದ ಅಭಿಷೇಕ್ ಶರ್ಮಾ!

2018ರ ಅಂಡರ್-19 ವಿಶ್ವಕಪ್ ವಿಜೇತ ತಂಡದ ಪ್ರಮುಖ ಆಟಗಾರನಾಗಿದ್ದ ಅಭಿಷೇಕ್ ಶರ್ಮಾ ಟೀಂ ಇಂಡಿಯಾಗೆ ಪ್ರವೇಶ ಪಡೆಯಲು ಬರೋಬ್ಬರಿ 6 ವರ್ಷಕ್ಕಿಂತ ಅಧಿಕ ಸಮಯ ತೆಗೆದುಕೊಂಡರು. ಆದರೆ ಅವರ ಜೊತೆ ಅಂಡರ್–19 ತಂಡದಲ್ಲಿ ಆಡಿದ್ದ ಪೃಥ್ವಿ ಶಾ, ಶುಭಮನ್ ಗಿಲ್ ಸೇರಿ ಕೆಲವು ಆಟಗಾರರು ಬೇಗನೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು.