ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಫ್ಘಾನ್‌ ವಿರುದ್ಧ ಟಾಸ್‌ ಗೆದ್ದ ಭಾರತ; ಸೂರ್ಯವಂಶಿಗಿಲ್ಲ ಅವಕಾಶ

Afghanistan vs India 1st T20I: ಅಭ್ಯಾಸದ ವೇಳೆ ಬೆನ್ನಿನ ಗಾಯದ ಸಮಸ್ಯೆಗೆ ಒಳಗಾಗಿದ್ದ ಇಶನ್‌ ಕಿಶನ್‌ ಚೇತರಿಕೆ ಕಂಡು ಈ ಪಂದ್ಯದಲ್ಲಿ ಕಣಕ್ಕಿಳಿದರು. 15 ವರ್ಷದ ಸೂರ್ಯವಂಶಿಗೆ ಅವಕಾಶ ಸಿಗಲಿಲ್ಲ. ಅನುಭವಿ ಜಸ್‌ಪ್ರೀತ್‌ ಬುಮ್ರಾ ಕೂಡ ತಂಡಕ್ಕೆ ಮರಳಿದರು.

ಆಫ್ಘಾನ್‌ ವಿರುದ್ಧ ಟಾಸ್‌ ಗೆದ್ದ ಭಾರತ; ಸೂರ್ಯವಂಶಿಗಿಲ್ಲ ಅವಕಾಶ

Afghanistan vs India -

Abhilash BC
Abhilash BC Sep 13, 2026 7:14 PM

ನವದೆಹಲಿ, ಸೆ.13: ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡ ಬೌಲಿಂಗ್‌ ಆಯ್ದುಕೊಂಡಿದೆ. ನಾಯಕನಾಗಿ ಶ್ರೇಯಸ್‌ ಅಯ್ಯರ್‌ ತವರಿನಲ್ಲಿ ಆಡುತ್ತಿರುವ ಮೊದಲ ಸರಣಿ. ಅಭ್ಯಾಸದ ವೇಳೆ ಬೆನ್ನಿನ ಗಾಯದ ಸಮಸ್ಯೆಗೆ ಒಳಗಾಗಿದ್ದ ಇಶನ್‌ ಕಿಶನ್‌ ಚೇತರಿಕೆ ಕಂಡು ಈ ಪಂದ್ಯದಲ್ಲಿ ಕಣಕ್ಕಿಳಿದರು. 15 ವರ್ಷದ ಸೂರ್ಯವಂಶಿಗೆ ಅವಕಾಶ ಸಿಗಲಿಲ್ಲ. ಅನುಭವಿ ಜಸ್‌ಪ್ರೀತ್‌ ಬುಮ್ರಾ ಕೂಡ ತಂಡಕ್ಕೆ ಮರಳಿದರು.

ಪಿಚ್‌ ರಿಪೋರ್ಟ್‌

ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಮಾನ ಅವಕಾಶಗಳನ್ನು ನೀಡುವ ಸಾಧ್ಯತೆಯಿದೆ. ಇಲ್ಲಿ ನಡೆದ ಕಳೆದ 10 ಪಂದ್ಯಗಳಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ ಸುಮಾರು 173 ರನ್‌ಗಳಷ್ಟಿದೆ. 185ಕ್ಕೂ ಹೆಚ್ಚಿನ ಗುರಿಯನ್ನು ಬೆನ್ನಟ್ಟುವುದು ಸವಾಲಿನ ವಿಷಯವಾಗಬಹುದು. ಇಲ್ಲಿ ನಡೆದ ಕಳೆದ 10 ಪಂದ್ಯಗಳ ಪೈಕಿ 7ರಲ್ಲಿ ಗುರಿಯನ್ನು ಬೆನ್ನಟ್ಟಿದ ತಂಡವೇ ಜಯಗಳಿಸಿದೆ. ಆದ್ದರಿಂದ, ಟಾಸ್ ಗೆದ್ದ ಅಯ್ಯರ್‌ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಉಭಯ ತಂಡಗಳು ಟಿ20ಯಲ್ಲಿ ಈವರೆಗೆ 9 ಪಂದ್ಯಗಳನ್ನು ಆಡಿದ್ದು ಭಾರತ ಅಜೇಯವಾಗಿದೆ. 8 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಅಫ್ಘಾನಿಸ್ತಾನ ಈ ಬಾರಿಯಾದರೂ ಗೆಲುವಿನ ಖಾತೆ ತೆರೆದೀತೇ ಎಂದು ಕಾದು ನೋಡಬೇಕಿದೆ.

ದೇಶೀಯ ಕ್ರಿಕೆಟ್ ಸ್ವರೂಪವನ್ನು ತೀವ್ರವಾಗಿ ಟೀಕಿಸಿದ ಗವಾಸ್ಕರ್

ಆಡುವ ಬಳಗ

ಭಾರತ: ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್(ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.

ಅಫ್ಘಾನಿಸ್ತಾನ: ಇಬ್ರಾಹಿಂ ಜದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿ.ಕೀ.), ಸೇದಿಕುಲ್ಲಾ ಅಟಲ್, ದರ್ವಿಶ್ ರಸೂಲಿ, ಅಜ್ಮತುಲ್ಲಾ ಒಮರ್ಜಾಯ್, ಗುಲ್ಬದಿನ್ ನೈಬ್, ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ಫಜಲ್ಹಕ್ ಫಾರೂಕಿ.