IPL 2025: ಐಪಿಎಲ್‌ನಲ್ಲಿ ವಿಶೇಷ ದಾಖಲೆ ಬರೆಯಲು ಸಜ್ಜಾದ ಅಜಿಂಕ್ಯ ರಹಾನೆ
Ajinkya Rahane: ಹಾಲಿ ಚಾಂಪಿಯನ್ ಮತ್ತು ಒಟ್ಟಾರೆ 3 ಬಾರಿ ಚಾಂಪಿಯನ್ ಆಗಿರುವ ಕೆಕೆಆರ್ ಈ ಬಾರಿ ರಹಾನೆ ನಾಯಕತ್ವದಲ್ಲಿ ನಾಲ್ಕನೇ ಟ್ರೋಫಿ ಗೆಲ್ಲಬಹುದೇ ಎಂದು ಕಾದು ನೋಡಬೇಕಿದೆ. ತಂಡ ಈ ಬಾರಿ ಕೆಲ ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ಬರೋಬ್ಬರಿ 23.75 ಕೋಟಿ ಕೊಟ್ಟು ಖರೀದಿಸಿದ ವೆಂಕಟೇಶ್ ಅಯ್ಯರ್ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಮಿಂಚಿದ ವರುಣ್ ಚಕ್ರವರ್ತಿ ಮೇಲೂ ಬೆಟ್ಟದಷ್ಟು ನಿರೀಕ್ಷೆ ಮಾಡಲಾಗಿದೆ.


ಕೋಲ್ಕತ್ತಾ: ರಂಗು ರಂಗಿನ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ 18ನೇ ಆವೃತ್ತಿ(IPL 2025) ಆರಂಭಕ್ಕೆ ಇನ್ನು ಕೇವಲ 5 ದಿನಗಳು ಮಾತ್ರ ಬಾಕಿ ಉಳಿದಿವೆ. ಎಲ್ಲ ಫ್ರಾಂಚೈಸಿಗಳು ಈಗಾಗಲೇ ಟ್ರೋಫಿ ಗೆಲ್ಲಲು ಸಿದ್ಧತೆ ಪೂರ್ಣಗೊಳಿಸಿದ್ದಾರೆ. ಮಾರ್ಚ್ 22 ರಂದು ನಡೆಯುವ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ತಂಡ ಆರ್‌ಸಿಬಿ(KKR vs RCB) ಆಡಲಿದೆ. ಕೆಕೆಆರ್ ತಂಡದ ನಾಯಕನಾಗಿರುವ ಅಜಿಂಕ್ಯ ರಹಾನೆ(Ajinkya Rahane) ಈ ಪಂದ್ಯದಲ್ಲಿ ಮೈದಾನಕ್ಕಿಳಿಯುವ ವೇಳೆ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ಮೂರು ಫ್ರಾಂಚೈಸಿಗಳನ್ನು ಮುನ್ನಡೆಸಿದ ಮೊದಲ ಭಾರತೀಯ ಹಾಗೂ ನಾಲ್ಕನೇ ನಾಯಕ ಎನಿಸಿಕೊಳ್ಳಲಿದ್ದಾರೆ.
36 ವರ್ಷದ ಮುಂಬೈ ಬ್ಯಾಟ್ಸ್‌ಮನ್ ಆಗಿರುವ ರಹಾನೆ ಇದುವರೆಗೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಾಯಕತ್ವ ವಹಿಸಿದ್ದರು. ನಾಯಕನಾಗಿ ಕೆಕೆಆರ್ ಮೂರನೇ ಫ್ರಾಂಚೈಸಿ. ರಹಾನೆಗೂ ಮುನ್ನ ಮಹೇಲಾ ಜಯವರ್ಧನೆ, ಕುಮಾರ ಸಂಗಕ್ಕಾರ ಮತ್ತು ಸ್ಟೀವನ್ ಸ್ಮಿತ್ ಮೂರು ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು.
ಹಾಲಿ ಚಾಂಪಿಯನ್ ಮತ್ತು ಒಟ್ಟಾರೆ 3 ಬಾರಿ ಚಾಂಪಿಯನ್ ಆಗಿರುವ ಕೆಕೆಆರ್ ಈ ಬಾರಿ ರಹಾನೆ ನಾಯಕತ್ವದಲ್ಲಿ ನಾಲ್ಕನೇ ಟ್ರೋಫಿ ಗೆಲ್ಲಬಹುದೇ ಎಂದು ಕಾದು ನೋಡಬೇಕಿದೆ. ತಂಡ ಈ ಬಾರಿ ಕೆಲ ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ಬರೋಬ್ಬರಿ 23.75 ಕೋಟಿ ಕೊಟ್ಟು ಖರೀದಿಸಿದ ವೆಂಕಟೇಶ್ ಅಯ್ಯರ್ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಮಿಂಚಿದ ವರುಣ್ ಚಕ್ರವರ್ತಿ ಮೇಲೂ ಬೆಟ್ಟದಷ್ಟು ನಿರೀಕ್ಷೆ ಮಾಡಲಾಗಿದೆ.
Captain Ajinkya Rahane's first day on duty! 💼 💜
— KolkataKnightRiders (@KKRiders) March 13, 2025
A new chapter begins! 📖🔥 pic.twitter.com/JGeNzGBXRW
ಬೆಸ್ಟ್ ಪ್ಲೇಯಿಂಗ್ ಇಲೆವೆನ್
ಸುನಿಲ್ ನರೈನ್, ಕ್ವಿಂಟನ್ ಡಿ ಕಾಕ್, ಅಜಿಂಕ್ಯ ರಹಾನೆ (ನಾಯಕ), ಅಂಗ್‌ಕೃಷ್ ರಘುವಂಶಿ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆ್ಯಂಡ್ರೆ ರಸೆಲ್, ರಮಣ್‌ದೀಪ್ ಸಿಂಗ್, ಹರ್ಷಿತ್ ರಾಣಾ, ಸ್ಪೆನ್ಸರ್ ಜಾನ್ಸನ್, ವರುಣ್ ಚಕ್ರವರ್ತಿ.
ಇದನ್ನೂ ಓದಿ IPL 2025: ಕೆಜಿಎಫ್ ಹಾಡಿನೊಂದಿಗೆ ಎಂಟ್ರಿ; ಎದುರಾಳಿ ತಂಡಕ್ಕೆ ಎಚ್ಚರಿಕೆ ಕೊಟ್ಟ ಕರುಣ್ ನಾಯರ್
ಐಪಿಎಲ್‌ನಲ್ಲಿ ಅತ್ಯಧಿಕ ನಾಯಕತ್ವ
ಕುಮಾರ ಸಂಗಕ್ಕಾರ: ಪಂಜಾಬ್ ಕಿಂಗ್ಸ್, ಡೆಕ್ಕನ್ ಚಾರ್ಜರ್ಸ್, ಸನ್‌ರೈಸರ್ಸ್ ಹೈದರಾಬಾದ್
ಮಹೇಲಾ ಜಯವರ್ಧನೆ: ಪಂಜಾಬ್ ಕಿಂಗ್ಸ್, ಕೊಚ್ಚಿ ಟಸ್ಕರ್ಸ್ ಕೇರಳ, ಡೆಲ್ಲಿ ಕ್ಯಾಪಿಟಲ್ಸ್(ಡೆಲ್ಲಿ ಡೇರ್ ಡೆವಿಲ್ಸ್)
ಸ್ಟೀವನ್ ಸ್ಮಿತ್: ಪುಣೆ ವಾರಿಯರ್ಸ್ ಇಂಡಿಯಾ, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ರಾಜಸ್ಥಾನ್ ರಾಯಲ್ಸ್