T20 World Cup: ಸಂಜು, ಬುಮ್ರಾ ಅಲ್ಲ; ಇಂಗ್ಲೆಂಡ್ ಆಲ್‌ರೌಂಡರ್‌ಗೆ 10 ಅಂಕ ನೀಡಿದ ರಿಕಿ ಪಾಂಟಿಂಗ್!
ರಿಕಿ ಪಾಂಟಿಂಗ್ ವಿಲ್ ಜ್ಯಾಕ್ಸ್‌ಗೆ 10/10 ರೇಟಿಂಗ್ ನೀಡಿದ್ದರೆ, ಸಂಜು ಸ್ಯಾಮ್ಸನ್ ಮತ್ತು ಜಸ್‌ಪ್ರೀತ್ ಬುಮ್ರಾಗೆ 9.5/10 ರೇಟಿಂಗ್ ನೀಡಿದ್ದಾರೆ. ಫೈನಲ್ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ, ದಾಖಲೆಯ 255 ರನ್‌ಗಳನ್ನು ಗಳಿಸಿತು. ಅಂತಿಮವಾಗಿ ಮೂರನೇ ಬಾರಿ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತು.
ಸಂಜು, ಬುಮ್ರಾಗೆ ರೇಟಿಂಗ್ಸ್ ನೀಡಿದ ರಿಕಿ ಪಾಂಟಿಂಗ್. -
ನವದೆಹಲಿ: ಪುರುಷರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಬಳಿಕ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ (Ricky Ponting) ಅವರು ಟೂರ್ನಿಯಲ್ಲಿ ಆಡಿದ ಆಟಗಾರರಿಗೆ ರೇಟಿಂಗ್ ನೀಡಿದ್ದಾರೆ. ಆಸೀಸ್ ಮಾಜಿ ನಾಯಕ, ಅದ್ಭುತ ಪ್ರದರ್ಶನಕ್ಕಾಗಿ ಇಂಗ್ಲೆಂಡ್ ಆಲ್‌ರೌಂಡರ್ ವಿಲ್ ಜ್ಯಾಕ್ಸ್‌ಗೆ ಪರಿಪೂರ್ಣ 10 ಅಂಕಗಳನ್ನು ನೀಡಿದ್ದಾರೆ. ಆದರೆ ಭಾರತೀಯ ತಾರೆಯರು ಸಹ ಪಾಟಿಂಗ್ ಅವರ ಶ್ರೇಯಾಂಕದಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಸಂಜು ಸ್ಯಾಮ್ಸನ್ (Sanju Samson) ಹಾಗೂ ಜಸ್‌ಪ್ರೀತ್ ಬುಮ್ರಾ ಗಮನವನ್ನು ಸೆಳೆದಿದ್ದಾರೆ.
ರಿಕಿ ಪಾಂಟಿಂಗ್ ಟೂರ್ನಿಯಲ್ಲಿ ಅತ್ಯುತ್ತಮ ಆಟಗಾರ ಎಂದು ಹೆಸರಿಸಲ್ಪಟ್ಟ ಸಂಜು ಸ್ಯಾಮ್ಸನ್ ಮತ್ತು 'ಯಾರ್ಕರ್ ಕಿಂಗ್' ಜಸ್‌ಪ್ರೀತ್ ಬುಮ್ರಾ ಅವರಿಗೆ 10ರ ಪೈಕಿ 9.5 ರೇಟಿಂಗ್ ನೀಡಿದರು. ಸ್ಯಾಮ್ಸನ್ ಟೂರ್ನಿಯಲ್ಲಿ ಭಾರತದ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು ಮತ್ತು ಒಟ್ಟಾರೆ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದಾರೆ. ಇದರ ನಡವೆ ಜಸ್‌ಪ್ರೀತ್ ಬುಮ್ರಾ ಈ ಟೂರ್ನಿಯಲ್ಲಿ ಒಟ್ಟು 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಫೈನಲ್‌ನಲ್ಲಿ ನಾಲ್ಕು ವಿಕೆಟ್‌ಗಳು ಸೇರಿದಂತೆ ಟೂರ್ನಿಯಲ್ಲಿ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಆರಂಭಿಕರಾದ ಸಾಹಿಬ್‌ಝಾದ ಫರ್ಹಾನ್ (9.5/10) ಮತ್ತು ಟಿಮ್ ಸೈಫರ್ಟ್ (9/10) ಕೂಡ ಪಾಂಟಿಂಗ್ ಅವರ ಪಟ್ಟಿಯಲ್ಲಿ ಪ್ರಮುಖವಾಗಿ ಸ್ಥಾನ ಪಡೆದರು.
ʻಭಾರತ ತಂಡ ಹೊರಬೀಳುತ್ತಿತ್ತುʼ: ಟಿ20 ವಿಶ್ವಕಪ್‌ನ ʻಅತ್ಯಂತ ಮೂರ್ಖ ತಂಡʼ ದಕ್ಷಿಣ ಆಫ್ರಿಕಾ ಎಂದ ಮೈಕಲ್ ವಾನ್!
ನ್ಯೂಜಿಲೆಂಡ್ ತಂಡವನ್ನು ಮಣಿಸಿದ್ದ ಭಾರತ
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಾರ್ಚ್ 8 ರಂದು ನಡೆದಿದ್ದ ಅಂತಿಮ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡಜಕ್ಕೆ ಅಭಿಷೇಕ್ ಶರ್ಮಾ ಭರ್ಜರಿ ಆರಂಭವನ್ನು ಒದಗಿಸಿದರು, ಕೇವಲ 21 ಎಸೆತಗಳಲ್ಲಿ 52 ರನ್‌ಗಳನ್ನು (6 ಬೌಂಡರಿಗಳು ಮತ್ತು 3 ಸಿಕ್ಸರ್‌ಗಳು ಸೇರಿದಂತೆ) ಗಳಿಸಿದರು. ಅವರು ಸಂಜು ಸ್ಯಾಮ್ಸನ್ ಅವರೊಂದಿಗೆ 98 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಬಳಿಕ ಸಂಜು ಸ್ಯಾಮ್ಸನ್, ಇಶಾನ್ ಕಿಶನ್ (25 ಎಸೆತಗಳಲ್ಲಿ 54 ರನ್‌ಗಳು) ಅವರೊಂದಿಗೆ ಶತಕದ ಜೊತೆಯಾಟವನ್ನು ನಿರ್ಮಿಸಿದರು, 16 ನೇ ಓವರ್‌ನೊಳಗೆ ಸ್ಕೋರ್ 200 ರನ್‌ಗಳ ಗಡಿ ದಾಟಿತು. ಸಂಜು ಸ್ಯಾಮ್ಸನ್ ಸ್ಪೋಟಕ ಬ್ಯಾಟ್ ಮಾಡಿ 89 ರನ್‌ಗಳನ್ನು ಬಾರಿಸಿದ್ದರು.
ಬೌಲಿಂಗ್‌ನಲ್ಲಿ ಮಿಂಚಿದ್ದ ಬುಮ್ರಾ, ಅಕ್ಷರ್
ಬಳಿಕ 256 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಕಿವೀಸ್ ತಂಡವು ಭಾರತದ ಬೌಲಿಂಗ್ ದಾಳಿಯನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಜಸ್‌ಪ್ರೀತ್ ಬುಮ್ರಾ ಮತ್ತು ಅಕ್ಷರ್ ಪಟೇಲ್ ಅವರ ಚುರುಕಾದ ಬೌಲಿಂಗ್ ನ್ಯೂಜಿಲೆಂಡ್ ಅನ್ನು 5 ವಿಕೆಟ್‌ಗಳ ನಷ್ಟಕ್ಕೆ 72 ರನ್‌ಗಳಿಗೆ ಇಳಿಸಿತು. ಟಿಮ್ ಸೈಫರ್ಟ್ (52) ಮತ್ತು ಮಿಚೆಲ್ ಸ್ಯಾಂಟ್ನರ್ (43) ಅವರ ಪ್ರಯತ್ನಗಳ ಹೊರತಾಗಿಯೂ, ಇಡೀ ತಂಡವು 159 ರನ್‌ಗಳಿಗೆ ಆಲೌಟ್ ಆಯಿತು.
T20 World Cup ಗೆದ್ದ ಬಳಿಕ ಗೌತಮ್ ಗಂಭೀರ್ ಹೇಳಿದ್ದ ಮಾತನ್ನು ರಿವೀಲ್ ಮಾಡಿದ ಸೂರ್ಯಕುಮಾರ್ ಯಾದವ್!
ಮೂರನೇ ಟಿ20 ವಿಶ್ವಕಪ್ ಗೆದ್ದ ಭಾರತ
96 ರನ್‌ಗಳ ಬೃಹತ್ ಗೆಲುವಿನೊಂದಿಗೆ ಭಾರತ ತಂಡ, ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡ ಮೊದಲ ತಂಡ ಎನಿಸಿಕೊಂಡಿತು. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಮೂರನೇ ಬಾರಿ ಈ ಟ್ರೋಫಿಯನ್ನು ಎತ್ತಿ ಹಿಡಿಯಿತು. ಆ ಮೂಲಕ ಟೀಮ್ ಇಂಡಿಯಾ ವಿಶ್ವದಾಖಲೆಯನ್ನು ಬರೆಯಿತು. ಈ ಟೂರ್ನಿಯಲ್ಲಿ 321 ರನ್‌ಗಳನ್ನು ಕಲೆ ಹಾಕಿದ ಸಂಜು ಸ್ಯಾಮ್ಸನ್ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.