ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಚಾಂಪಿಯನ್‌ಗಳ ಒಂದು ನೋಟ

Asia Cup Winners List: ಈ ಬಾರಿ ಏಷ್ಯಾಕಪ್​ನಲ್ಲಿ ಒಟ್ಟಾರೆ 8 ತಂಡಗಳು ಭಾಗಿ ಆಗುತ್ತಿವೆ. ಹಾಲಿ ಚಾಂಪಿಯನ್​ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನ, ಓಮನ್, ಯುಎಇ ಮತ್ತು ಹಾಂಗ್ ಕಾಂಗ್ ತಂಡಗಳು ಭಾಗವಹಿಸುತ್ತಿವೆ. ಈ ಎಂಟು ತಂಡಗಳನ್ನು ಎ ಮತ್ತು ಬಿ ಗುಂಪುಗಳಲ್ಲಿ ವಿಂಗಡಿಸಲಾಗಿದೆ.

ಏಷ್ಯಾಕಪ್‌ ಚಾಂಪಿಯನ್‌ಗಳ ಒಂದು ನೋಟ

Abhilash BC Abhilash BC Aug 25, 2025 10:09 AM

ಬೆಂಗಳೂರು: ಬಹುನಿರೀಕ್ಷಿತ 17ನೇ ಆವೃತ್ತಿಯ ಏಷ್ಯಾಕಪ್(Asia Cup 2025)​ ಟೂರ್ನಿಗೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 9 ರಿಂದ ಪಂದ್ಯಾವಳಿ ಪ್ರಾರಂಭವಾಗಲಿದ್ದು ಈ ಟೂರ್ನಿಗೆ ಯುಎಇ ಆತಿಥ್ಯ ವಹಿಸಿಕೊಳ್ಳುತ್ತಿದೆ. ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್​ ಗಮನದಲ್ಲಿಟ್ಟುಕೊಂಡು ಈ ಬಾರಿಯ ಏಷ್ಯಾಕಪ್​ ಟಿ20 ಸ್ವರೂಪದಲ್ಲಿ ಆಯೋಜಸಲಾಗುತ್ತಿದೆ. ಇದುವರೆಗಿನ ಏಷ್ಯಾಕಪ್‌ ಇತಿಹಾಸದಲ್ಲಿ ಚಾಂಪಿಯನ್‌ಗಳಾದ(Asia Cup Winners List) ತಂಡಗಳ ಹಿನ್ನೋಟವೊಂದು ಇಲ್ಲಿದೆ.

ಈವರೆಗೂ 16 ಆವೃತ್ತಿಗಳಲ್ಲಿ 14 ಬಾರಿ ಏಷ್ಯಾಕಪ್​ ಅನ್ನು ಏಕದಿನ ಸ್ವರೂಪದಲ್ಲಿ ನಡೆಸಲಾಗಿದೆ. ಎರಡು ಬಾರಿ ಟಿ20 ಮಾರಿಯಲ್ಲಿ ನಡೆಸಲಾಗಿತ್ತು. ಇದೀಗ ಮೂರನೇ ಬಾರಿಯೂ ಚುಟುಕು ಸ್ವರೂಪದಲ್ಲಿ ಪಂದ್ಯವಳಿಗಳನ್ನು ಆಯೋಜಿಸಲಾಗುತ್ತಿದೆ.

ಭಾರತ, ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಈ ಪಂದ್ಯಾವಳಿಯಲ್ಲಿ ಪ್ರಾಬಲ್ಯ ಸಾಧಿಸುತ್ತಾ ಬಂದಿವೆ. ಈ ಮೂರು ತಂಡಗಳು ಈ ತನಕದ ಪ್ರಶಸ್ತಿಗಳನ್ನು ತಮ್ಮೊಳಗೆ ಹಂಚಿಕೊಂಡಿವೆ. ಭಾರತ ತಂಡವು ಗರಿಷ್ಠ 8 ಬಾರಿ ಪ್ರಶಸ್ತಿಯನ್ನು ಜಯಿಸಿ ಚಾಂಪಿಯನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಶ್ರೀಲಂಕಾ ತಂಡ ಆರು ಹಾಗೂ ಪಾಕಿಸ್ತಾನ ತಂಡವು 2 ಬಾರಿ ಏಶ್ಯಕಪ್ ಗೆದ್ದುಕೊಂಡಿದೆ. ಬಾಂಗ್ಲಾದೇಶ ತಂಡವು ಹಲವು ಬಾರಿ ಫೈನಲ್‌ಗೆ ತಲುಪಿದ್ದರೂ ಈ ತನಕ ಪ್ರಶಸ್ತಿ ಗೆದ್ದಿಲ್ಲ.

ಈಬಾರಿ ಏಷ್ಯಾಕಪ್​ನಲ್ಲಿ ಒಟ್ಟಾರೆ 8 ತಂಡಗಳು ಭಾಗಿ ಆಗುತ್ತಿವೆ. ಹಾಲಿ ಚಾಂಪಿಯನ್​ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನ, ಓಮನ್, ಯುಎಇ ಮತ್ತು ಹಾಂಗ್ ಕಾಂಗ್ ತಂಡಗಳು ಭಾಗವಹಿಸುತ್ತಿವೆ. ಈ ಎಂಟು ತಂಡಗಳನ್ನು ಎ ಮತ್ತು ಬಿ ಗುಂಪುಗಳಲ್ಲಿ ವಿಂಗಡಿಸಲಾಗಿದೆ.

ಪ್ರಶಸ್ತಿ ವಿಜೇತರ ಪಟ್ಟಿ

1984-ಭಾರತ

1986-ಶ್ರೀಲಂಕಾ

1988-ಭಾರತ

1990/91-ಭಾರತ

1995-ಭಾರತ

1997-ಶ್ರೀಲಂಕಾ

2000-ಪಾಕಿಸ್ತಾನ

2004-ಶ್ರೀಲಂಕಾ

2008-ಶ್ರೀಲಂಕಾ

2010-ಭಾರತ

2012-ಪಾಕಿಸ್ತಾನ

2014-ಶ್ರೀಲಂಕಾ

2016-ಭಾರತ

2018-ಭಾರತ

2022-ಶ್ರೀಲಂಕಾ

2023-ಭಾರತ

ಇದನ್ನೂ ಓದಿ Asia Cup 2025: ಏಷ್ಯಾಕಪ್‌ಗೆ ಪ್ರಕಟಗೊಂಡ ತಂಡಗಳ ಪಟ್ಟಿ ಹೀಗಿದೆ