ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS 1st ODI: ಕೊಹ್ಲಿ, ರೋಹಿತ್‌ ಕಮ್‌ಬ್ಯಾಕ್‌ ಪಂದ್ಯದಲ್ಲಿ ಭಾರತಕ್ಕೆ ಸೋಲು

ಹವಾವಾನ ಇಲಾಖೆ ಮುನ್ಸೂಚನೆಯಂತೆ ಪಂದ್ಯಕ್ಕೆ ಹಲವು ಬಾರಿ ಮಳೆ ಅಡಚಣೆ ಉಂಟು ಮಾಡಿತು. ಆರಂಭದಲ್ಲಿ ಪಂದ್ಯವನ್ನು 32 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ ಮತ್ತೆ ಮಳೆ ಸುರಿದ ಕಾರಣ ಎರಡನೇ ಬಾರಿಗೆ ಪಂದ್ಯದ ಓವರ್‌ ಕಡಿತ ಮಾಡಿ 26 ಓವರ್‌ಗೆ ಸೀಮಿತಗೊಳಿಸಲಾಯಿತು.

ಪರ್ತ್‌: ಹಲವು ಬಾರಿ ಮಳೆಯಿಂದ ಅಡಚಣೆಯಾದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸಂಪೂರ್ಣ ಬ್ಯಾಟಿಂಗ್‌ ವೈಫಲ್ಯ ಕಂಡ ಭಾರತ ತಂಡ 7 ವಿಕೆಟ್‌ ಅಂತರದ ಸೋಲು ಕಂಡಿದೆ. ಇದು ಕ್ಯಾಲೆಂಡರ್‌ ವರ್ಷದಲ್ಲಿ ಭಾರತಕ್ಕೆ ಎದುರಾದ ನಾಲ್ಕನೇ ಸೋಲು. ಈ ಹಿಂದೆ 1978, 1991 ಮತ್ತು 1980ರ ಕ್ಯಾಲೆಂಡರ್‌ ವರ್ಷದಲ್ಲಿ ಆಡಿದ ಮೊದಲ ಪಂದ್ಯದಲ್ಲಿಯೇ ಸೋಲು ಕಂಡಿತ್ತು.

ಭಾನುವಾರ ಪರ್ತ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಆಸೀಸ್‌ ನಾಯಕ ಮಿಚೆಲ್‌ ಮಾರ್ಷ್‌ ಬೌಲಿಂಗ್‌ ಆಯ್ದುಕೊಂಡರು. ಬೌಲರ್‌ಗಳು ಸಂಘಟಿತ ಬೌಲಿಂಗ್‌ ದಾಳಿ ಮೂಲಕ ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಂಡರು. ಡಕ್‌ವರ್ತ್‌ ಲೂಯಿಸ್‌ ನಿಯಮದ ಪ್ರಕಾರ 26 ಓವರ್‌ಗೆ ಭಾರತ 9 ವಿಕೆಟ್‌ಗೆ 136 ರನ್‌ಗಳಿಸಿತು. ಆಸ್ಟ್ರೇಲಿಯಾಕ್ಕೆ ಗೆಲುವಿಗೆ 131 ರನ್‌ ಗುರಿ ನೀಡಲಾಯಿತು. ಈ ಸಣ್ಣ ಮೊತ್ತವನ್ನು ಆಸೀಸ್‌ 21.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ ಬಾರಿಸಿ ಗೆಲುವಿನ ದಡ ಸೇರಿಸಿತು. ಚೇಸಿಂಗ್‌ ವೇಳೆ ಆಸೀಸ್‌ ಪರ ನಾಯಕ ಅಜೇಯ 46 ರನ್‌ ಗಳಿಸಿದರೆ, ಜೋಶ್‌ ಫಿಲಿಪ್‌ 37 ರನ್‌ ಗಳಿಸಿರು. ಭಾರತ ಪರ ಅಕ್ಷರ್‌ ಪಟೇಲ್‌, ಸುಂದರ್‌ ಮತ್ತು ಅರ್ಶ್‌ದೀಪ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

ಹಲವು ಬಾರಿ ಮಳೆ ಅಡಚಣೆ

ಹವಾವಾನ ಇಲಾಖೆ ಮುನ್ಸೂಚನೆಯಂತೆ ಪಂದ್ಯಕ್ಕೆ ಹಲವು ಬಾರಿ ಮಳೆ ಅಡಚಣೆ ಉಂಟು ಮಾಡಿತು. ಆರಂಭದಲ್ಲಿ ಪಂದ್ಯವನ್ನು 32 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ ಮತ್ತೆ ಮಳೆ ಸುರಿದ ಕಾರಣ ಎರಡನೇ ಬಾರಿಗೆ ಪಂದ್ಯದ ಓವರ್‌ ಕಡಿತ ಮಾಡಿ 26 ಓವರ್‌ಗೆ ಸೀಮಿತಗೊಳಿಸಲಾಯಿತು.

ಕೊಹ್ಲಿ-ರೋಹಿತ್‌ ವಿಫಲ

ಐಸಿಸಿ ಚಾಂಪಿಯನ್ಸ್​ ಟ್ರೋಫಿ ಬಳಿಕ ಮೊದಲ ಬಾರಿ ಭಾರತ ತಂಡದ ಪರ ಕಣಕ್ಕಿಳಿದ ಟೀಮ್‌ ಇಂಡಿಯಾದ ಮಾಜಿ ನಾಯಕ ರೋಹಿತ್‌ ಶರ್ಮ ಮತ್ತು ವಿರಾಟ್‌ ಕೊಹ್ಲಿ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದರು. ಇವರ ಆಟ ಕಣ್ತುಂಬಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಆದರೆ ಉಭಯ ಆಟಗಾರರು ಕಳಪೆ ಬ್ಯಾಟಿಂಗ್‌ ಮೂಲಕ ಅವರ ಮೇಲಿಟ್ಟ ನಿರೀಕ್ಷೆಯನ್ನು ಹುಸಿಗೊಳಿಸಿದರು. ರೋಹಿತ್‌ 8 ರನ್‌ ಗಳಿಸಿದರೆ, ಕೊಹ್ಲಿ ಶೂನ್ಯ ಸುತ್ತಿದರು. ರೋಹತ್‌ ಈ ಪಂದ್ಯವನ್ನಾಡುವ ಮೂಲಕ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಪೂರ್ತಿಗೊಳಿಸಿದರು. ಈ ಸಾಧನೆಗೈದ 5ನೇ ಭಾರತೀಯ ಕ್ರಿಕೆಟಿಗ ಎನಿಸಿದರು. ಸಚಿನ್‌ ತೆಂಡೂಲ್ಕರ್‌, ರಾಹುಲ್‌ ದ್ರಾವಿಡ್‌, ಎಂ.ಎಸ್‌ ಧೋನಿ, ವಿರಾಟ್‌ ಕೊಹ್ಲಿ ಮೊದಲಿಗರು.

ರಾಹುಲ್‌-ಅಕ್ಷರ್‌ ಆಸರೆ

ನಾಯಕ ಶುಭಮನ್‌ ಗಿಲ್‌ 10ರನ್‌ಗೆ ಆಟ ಮುಗಿಸಿದರು. ಉಪನಾಯಕ ಶ್ರೇಯಸ್‌ ಅಯ್ಯರ್‌(11) ಕೂಡ ಹೆಚ್ಚು ಹೊತ್ತು ಕ್ರೀಸ್‌ ಆಕ್ರಮಿಸಲು ವಿಫಲರಾದರು. ಪವರ್‌ ಪ್ಲೇ ಮುಕ್ತಾಯದ ವೇಳೆಗೆ ಭಾರತ 27 ರನ್‌ಗೆ ಮೂರು ವಿಕೆಟ್‌ ಕಳೆದುಕೊಂಡಿತು. ಸಂಕಷ್ಟಕ್ಕೆ ಸಿಲುಕಿದ ಭಾರತ ತಂಡಕ್ಕೆ ಆಸರೆಯಾದದ್ದು ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಮತ್ತು ಕನ್ನಡಿಗ ಕೆ.ಎಲ್‌ ರಾಹುಲ್‌ ಮಾತ್ರ. ಉಭಯ ಆಟಗಾರರು ಸಣ್ಣ ಬ್ಯಾಟಿಂಗ್‌ ಹೋರಾಟವೊಂದನ್ನು ನಡೆಸಿದ ಕಾರಣ ತಂಡ 100ರ ಗಡಿ ದಾಟೀತು. ಇವರ ಬ್ಯಾಟಿಂಗ್‌ ವೇಳೆ ಹಲವು ಬಾರಿ ಮಳೆಯೂ ಕೂಡ ತಾಳ್ಮೆ ಪರೀಕ್ಷಿಸಿತು. ಆಗಾಗ ಮಳೆಯಿಂದ ಪಂದ್ಯ ಸ್ಥಗಿತ ಮತ್ತು ಆರಂಭಗೊಳ್ಳುತ್ತಿತ್ತು.

ಇದನ್ನೂ ಓದಿ IND vs AUS 1st ODI: 2023ರ ಬಳಿಕ ಪವರ್‌ ಪ್ಲೇಯಲ್ಲಿ ಕಡಿಮೆ ಮೊತ್ತ ದಾಖಲಿಸಿದ ಭಾರತ

ರಾಹುಲ್‌ ತಲಾ ಎರಡು ಸಿಕ್ಸರ್‌ ಮತ್ತು ಬೌಂಡರಿ ನೆರವಿನಿಂದ 38 ರನ್‌ ಗಳಿಸಿದರೆ, ಅಕ್ಷರ್‌ ಪಟೇಲ್‌ ಮೂರು ಬೌಂಡರಿ ಸಹಾಯದಿಂದ 31 ರನ್‌ ಬಾರಿಸಿದರು. ಏಕದಿನ ಪದಾರ್ಪಣ ಪಂದ್ಯವನ್ನಾಡಿದ ನಿತೀಶ್‌ ಕುಮಾರ್‌ ರೆಡ್ಡಿ 19 ರನ್‌ ಗಳಿಸಿ ಅಜೇಯರಾಗಿ ಉಳಿದರು. ಆಸೀಸ್‌ ಪರ ಘಾತಕ ಬೌಲಿಂಗ್‌ ನಡೆಸಿದ ಹ್ಯಾಜಲ್‌ವುಡ್‌, ಮ್ಯಾಥ್ಯೂ ಕುಹ್ನೆಮನ್ ಮತ್ತು ಮಿಚ್​ ಓವನ್ ತಲಾ ಎರಡು ವಿಕೆಟ್‌ ಉರುಳಿಸಿದರು. ಮಿಚೆಲ್‌ ಸ್ಟಾರ್ಕ್‌ ಮತ್ತು ನಥಾನ್‌ ಎಲ್ಲಿಸ್‌ ತಲಾ ಒಂದು ವಿಕೆಟ್‌ ಪಡೆದರು.

ಸತತ 16ನೇ ಟಾಸ್‌ ಸೋತ ಭಾರತ

ಪಂದ್ಯದಲ್ಲಿ ಭಾರತ, ಟಾಸ್‌ ಸೋಲುದರೊಂದಿಗೆ ಸತತವಾಗಿ 16 ಏಕದಿನ ಪಂದ್ಯದಲ್ಲಿ ಟಾಸ್‌ ಸೋತಂತಾಯಿತು. ಭಾರತ ಕೊನೆಯ ಟಾಸ್ 2023 ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ವಾಂಖೆಡೆಯಲ್ಲಿ ಗೆದ್ದಿತ್ತು.

ಎಲೈಟ್‌ ಪಟ್ಟಿ ಸೇರಿದ ಗಿಲ್‌

  1. ಶುಭಮಾನ್​ ಗಿಲ್​ ಎಲ್ಲ 3 ಕ್ರಿಕೆಟ್​ ಪ್ರಕಾರದಲ್ಲಿ ಭಾರತವನ್ನು ಮುನ್ನಡೆಸಿದ 7ನೇ ನಾಯಕ ಎನಿಸಿಕೊಂಡರು. ವೀರೇಂದ್ರ ಸೆಹ್ವಾಗ್​, ಎಂಎಸ್​ ಧೋನಿ, ವಿರಾಟ್​ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್​ ಶರ್ಮ, ಕೆಎಲ್​ ರಾಹುಲ್​ ಹಿಂದಿನ ಸಾಧಕರು.
  2. ಶುಭಮಾನ್​ ಗಿಲ್​ (26 ವರ್ಷ, 41 ದಿನ) ಏಕದಿನ ಕ್ರಿಕೆಟ್​ನಲ್ಲಿ ಭಾರತದ 28ನೇ ಮತ್ತು 7ನೇ ಅತಿ ಕಿರಿಯ ನಾಯಕ ಎನಿಸಿದರು.
  3. ಗಿಲ್​ (122) ಭಾರತ ಪರ ಅತಿ ಕಡಿಮೆ ಪಂದ್ಯಗಳನ್ನು ಆಡಿ ಮೂರೂ ಮಾದರಿಯಲ್ಲಿಯೂ ನಾಯಕತ್ವ ವಹಿಸಿದ ನಾಯಕ ಎಂಬ ಹಿರಿಮೆಗೆ ಪಾತ್ರರಾದರು. ಅಜಿಂಕ್ಯ ರಹಾನೆ (129) ಹಿಂದಿನ ಸಾಧಕ.