#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Australian Open: ಜೋಕೋಗೆ ಗಾಯ; ಫೈನಲ್‌ ಪ್ರವೇಶಿಸಿದ ಜ್ವೆರೇವ್‌

ಕ್ವಾರ್ಟರ್‌ ಫೈನಲ್‌ ಪಂದ್ಯದ ವೇಳೆಯೀ ಜೋಕೊ(Novak Djokovic) ಗಾಯಕ್ಕೆ ತುತ್ತಾಗಿದ್ದರು. ಆದರೂ ಕೂಡ ಹೋರಾಟ ನಡೆಸಿ ಮೂರನೇ ಶ್ರೇಯಾಂಕದ ಕಾರ್ಲೊಸ್‌ ಅಲ್ಕರಾಜ್‌ ಅವರನ್ನು ಮಣಿಸಿ ಸೆಮಿ ಪ್ರವೇಶಿಸಿದ್ದರು.

Australian Open: ಜೋಕೋಗೆ ಗಾಯ; ಫೈನಲ್‌ ಪ್ರವೇಶಿಸಿದ ಜ್ವೆರೇವ್‌

Novak Djokovic

Profile Abhilash BC Jan 24, 2025 1:25 PM

ಮೆಲ್ಬರ್ನ್‌: ಎಡಗಾಲಿನ ಗಾಯದ ಸಮಸ್ಯೆಯಿಂದ ನೊವಾಕ್‌ ಜೋಕೊವಿಕ್‌ ಅವರು ಆಸ್ಟ್ರೇಲಿಯನ್‌ ಓಪನ್‌(Australian Open) ಸೆಮಿಫೈನಲ್‌ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಅವರ 25ನೇ ಗ್ರಾಂಡ್‌ ಸ್ಲಾಂ ಕಿರೀಟದ ಹೋರಾಟ ಕೊನೆಗೊಂಡಿದೆ.

ಶುಕ್ರವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ವಿರುದ್ಧ ಆಡಲಿದ ಜೋಕೊ ಮೊದಲ ಸೆಟ್‌ನಲ್ಲಿ ತೀವ್ರ ಹೋರಾಟ ನಡೆಸಿ ಸೋಲು ಕಂಡರು. ದ್ವಿತೀಯ ಸೆಟ್‌ ಆರಂಭಕ್ಕೂ ಮುನ್ನ ಎದುರಾಳಿಗೆ ಕೈ ಕುಲುಕಿ ಪಂದ್ಯದಿಂದ ಹಿಂದೆ ಸರಿದರು. ಹೀಗಾಗಿ ಜ್ವೆರೇವ್‌ ವಾಕ್‌ ಓವರ್‌ ಮೂಲಕ ಫೈನಲ್‌ ಪ್ರವೇಶಿಸಿದರು.

ಕ್ವಾರ್ಟರ್‌ ಫೈನಲ್‌ ಪಂದ್ಯದ ವೇಳೆಯೀ ಜೋಕೊ ಗಾಯಕ್ಕೆ ತುತ್ತಾಗಿದ್ದರು. ಆದರೂ ಕೂಡ ಹೋರಾಟ ನಡೆಸಿ ಮೂರನೇ ಶ್ರೇಯಾಂಕದ ಕಾರ್ಲೊಸ್‌ ಅಲ್ಕರಾಜ್‌ ಅವರನ್ನು ಮಣಿಸಿ ಸೆಮಿ ಪ್ರವೇಶಿಸಿದ್ದರು.



ಗುರುವಾರ ನಡೆದಿದ್ದ ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ ಪಂದ್ಯದಲ್ಲಿ ವಿಶ್ವದ ನಂಬರ್‌ 1 ಆಟಗಾರ್ತಿ, ಹಾಲಿ ಚಾಂಪಿಯನ್‌(Australian Open) ಅರಿನಾ ಸಬಲೆಂಕಾ(Aryna Sabalenka) ಮತ್ತು ಅಮೆರಿಕದ ಮ್ಯಾಡಿಸನ್‌ ಕೀಯ್ಸ್‌ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದ್ದರು. ಐದು ಗ್ರಾಂಡ್‌ ಸ್ಲಾಂ ಒಡತಿ ಐಗಾ ಸ್ವಿಯಾಟೆಕ್‌ ವಿರುದ್ಧ 7-5, 1-6, 6-7(8-10) ಸೂಪರ್‌ ಟೈ ಬ್ರೇಕರ್‌ನಲ್ಲಿ ಕೀಯ್ಸ್‌ ರೋಚಕ ಗೆಲುವು ಸಾಧಿಸಿದರು. ಕೀಯ್ಸ್‌ಗೆ ಇದು ಎರಡನೇ ಗ್ರಾಂಡ್‌ ಸ್ಲಾಂ ಫೈನಲ್‌ ಪಂದ್ಯ.

ಇದನ್ನೂ ಓದಿ Australian Open: ಫೈನಲ್‌ ಪ್ರವೇಶಿಸಿದ ಅರಿನಾ ಸಬಲೆಂಕಾ; ಮೂರನೇ ಪ್ರಶಸ್ತಿ ಮೇಲೆ ಕಣ್ಣು

ಸಬಲೆಂಕಾ ಅವರು ಪೌಲಾ ಬಡೋಸಾ(Paula Badosa) ವಿರುದ್ಧ 6-4, 6-2 ನೇರ ಸೆಟ್‌ಗಳಿಂದ ಅಧಿಕಾರಯುತ ಗೆಲುವು ಸಾಧಿಸಿದ್ದರು.