IPL 2026: ವೆಂಕಟೇಶ್ ಅಯ್ಯರ್ ಔಟ್! ಆರ್‌ಸಿಬಿ ಪ್ಲೇಯಿಂಗ್ XI ಕಟ್ಟಿದ ಸಂಜಯ್ ಬಾಂಗರ್!
RCB Playing XI for IPL 2026: ಬಹುನಿರೀಕ್ಷಿತ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ಇನ್ನು ಕಲವೇ ದಿನಗಳು ಬಾಕಿ ಇವೆ. ಇದರ ನಡುವೆ ಭಾರತ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ ಅವರು ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ XI ಅನ್ನು ಆರಿಸಿದ್ದಾರೆ. ಆದರೆ, ವೆಂಕಟೇಶ್ ಅಯ್ಯರ್ ಅವರನ್ನು ಕೈ ಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸಂಜಯ್ ಬಾಂಗರ್ ಆಯ್ಕೆಯ ಆರ್‌ಸಿಬಿ ಪ್ಲೇಯಿಂಗ್ XI -
ನವದೆಹಲಿ: ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ(IPL 2026) ಹಾಲಿ ಚಾಂಪಿಯನ್ ಆಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕಣಕ್ಕೆ ಇಳಿಯುತ್ತಿರುವುದು ತುಂಬಾ ವಿಶೇಷ. ಕಳೆದ 2025ರ ಸಾಲಿನಂತೆ 2026ರ ಐಪಿಎಲ್ ಟೂರ್ನಿಯಲ್ಲಿಯೂ ಆರ್‌ಸಿಬಿ ತಂಡ ಬಲಿಷ್ಠ ಆಟಗಾರರನ್ನು ಹೊಂದಿದೆ ಹಾಗೂ ಉತ್ತಮ ಪ್ರದರ್ಶನವನ್ನು ತೋರುವ ವಿಶ್ವಾಸವನ್ನು ಹೊಂದಿದೆ. ಮಾರ್ಚ್ 28 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ಕಾದಾಟ ನಡೆಸಲಿದೆ. ಭಾರತೀಯ ಮಾಜಿ ಕ್ರಿಕೆಟಿಗ ಸಂಜಯ್ ಬಾಂಗರ್ (Sanjay Bangar) ಅವರು ಆರ್‌ಸಿಬಿ ತಂಡದ ತನ್ನ ನೆಚ್ಚಿನ ಪ್ಲೇಯಿಂಗ್ XIಅನ್ನು ಆರಿಸಿದ್ದಾರೆ.
ಆರ್‌ಸಿಬಿ ತಂಡದ ತನ್ನ ನೆಚ್ಚಿನ ಪ್ಲೇಯಿಂಗ್ XI ಕಟ್ಟುವಾಗ ಸಂಜಯ್ ಬಾಂಗರ್ ಅವರು, ವೆಂಕಟೇಶ್ ಅಯ್ಯರ್ ಅವರನ್ನು ಕೈ ಬಿಟ್ಟು ಅಚ್ಚರಿ ಮೂಡಿಸಿದ್ದಾರೆ. ಕನ್ನಡಿಗ ದೇವದತ್ ಪಡಿಕ್ಕಲ್ ಅವರನ್ನು ಪ್ಲೇಯಿಂಗ್ XI ನಲ್ಲಿ ಉಳಿಸಿಕೊಳ್ಳುವ ಮೂಲಕ ಬಾಂಗರ್, ವೆಂಕಟೇಶ್ ಅಯ್ಯರ್ ಅವರನ್ನು ಬೆಂಚ್ ಕಾಯಿಸಿದ್ದಾರೆ.
RCB IPL 2026 Schedule: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಳಾಪಟ್ಟಿ!
"ವೆಂಕಟೇಶ್ ಅಯ್ಯರ್‌ಗೆ ತಂಡದಲ್ಲಿ ಸ್ಥಾನವಿಲ್ಲ. ಏಕೆಂದರೆ, ತಂಡದಲ್ಲಿ ಒಳ್ಳೆಯ ಆಟಗಾರರನ್ನು ಖರೀದಿಸಲು ಬೆಂಗಳೂರು ಫ್ರಾಂಚೈಸಿ ಸಾಕಷ್ಟು ಹಣವನ್ನು ವ್ಯಯಿಸಿದೆ, ಹಾಗಾಗಿ ಅವರಿಗೆ ಪ್ಲೇಯಿಂಗ್ XIನಲ್ಲಿ ಸ್ಥಾನ ಇಲ್ಲದೇ ಇದ್ದರೂ ತಲೆ ಬಿಸಿ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ದೇವದತ್ ಪಡಿಕ್ಕಲ್ ಅವರು ಕಳೆದ ಸೀಸನ್‌ನಲ್ಲಿ ನಿರ್ಣಾಯಕ ರನ್‌ಗಳನ್ನು ಗಳಿಸಿದ್ದಾರೆ," ಎಂದು ಸಂಜಯ್ ಬಾಂಗರ್ ತಿಳಿಸಿದ್ದಾರೆ.
"ಕಳೆದ ಸೀಸನ್‌ನ ಆರಂಭದಲ್ಲಿ ದೇವದತ್ ಪಡಿಕ್ಕಲ್ ಉತ್ತಮ ಪ್ರದರ್ಶನವನ್ನು ತೋರಿರಲಿಲ್ಲ. ಆದರೆ, ಪ್ಲೇಆಫ್ಸ್ ಸೇರಿದಂತೆ ನಾಕ್‌ಔಟ್ ಹಂತದಲ್ಲಿ ಅವರು ನಿರ್ಣಾಯಕ ಇನಿಂಗ್ಸ್‌ಗಳನ್ನು ಆಡಿದ್ದರು. ಕಳೆದ ಸೀಸನ್‌ನಲ್ಲಿ ಆಡಿದ್ದ ಬಹುತೇಕ ಅದೇ ಆಟಗಾರರನ್ನು ಮೊದಲನೇ ಪಂದ್ಯದಲ್ಲಿ ಆಡಿಸಬಹುದು," ಎಂದು ಆರ್‌ಸಿಬಿ ಮಾಜಿ ಸಹಾಯಕ ಕೋಚ್ ಹೇಳಿದ್ದಾರೆ.
IPL 2026: ʻಆರ್‌ಸಿಬಿಗೆ ಎರಡನೇ ಟ್ರೋಫಿʼ-ವಿರಾಟ್ ಕೊಹ್ಲಿ ಬಗ್ಗೆ ಇರ್ಫಾನ್ ಪಠಾಣ್ ದೊಡ್ಡ ಹೇಳಿಕೆ!
ಸಂಜಯ್ ಬಾಂಗರ್ ಆಯ್ಕೆಯ ಆರ್‌ಸಿಬಿ ಪ್ಲೇಯಿಂಗ್ XI
1.ವಿರಾಟ್ ಕೊಹ್ಲಿ (ಓಪನರ್)
2.ಫಿಲ್ ಸಾಲ್ಟ್ (ಓಪನರ್)
3.ದೇವದತ್ ಪಡಿಕ್ಕಲ್ (ಬ್ಯಾಟ್ಸ್‌ಮನ್)
4.ರಜತ್ ಪಾಟಿದಾರ್ (ನಾಯಕ, ಬ್ಯಾಟ್ಸ್‌ಮನ್)
5.ಜಿತೇಶ್ ಶರ್ಮಾ (ವಿಕೆಟ್ ಕೀಪರ್, ಬ್ಯಾಟ್ಸ್‌ಮನ್)
6.ಟಿಮ್ ಡೇವಿಡ್ (ಆಲ್‌ರೌಂಡರ್)
7.ರೊಮ್ಯಾರಿಯೊ ಶೆಫರ್ಡ್ (ಆಲ್‌ರೌಂಡರ್)
8.ಕೃಣಾಲ್ ಪಾಂಡ್ಯ (ಆಲ್‌ರೌಂಡರ್)
9.ಭುವನೇಶ್ವರ್ ಕುಮಾರ್ (ವೇಗದ ಬೌಲರ್)
10.ಜಾಶ್ ಹೇಝಲ್‌ವುಡ್ (ವೇಗದ ಬೌಲರ್)
11.ಯಶ್ ದಯಾಳ್ (ವೇಗದ ಬೌಲರ್)
ಇಂಪ್ಯಾಕ್ಟ್ ಪ್ಲೇಯರ್: ಸುಯೇಶ್ ಶರ್ಮಾ
2026ರ ಐಪಿಎಲ್‌ಗೆ ಆರ್‌ಸಿಬಿ ಸಂಪೂರ್ಣ ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕೃಣಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ಜಾಶ್ ಹೇಝಲ್‌ವುಡ್, ಯಶ್ ದಯಾಳ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಾಸಿಖ್ ಸಲಾಂ, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್, ಜಾಕೋಬ್ ಡಫಿ, ಸಾತ್ವಿಕ್ ದೇಸ್ವಾಲ್, ಜೋರ್ಡಾನ್ ಕಾಕ್ಸ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾಣ್, ವಿಕಿ ಓಸ್ತ್ವಾಲ್.