Neymar: ಫುಟ್‌ಬಾಲ್ ತಾರೆ ನೇಮರ್‌ಗೆ ಕೋವಿಡ್ ಸೋಂಕು
ಸ್ಯಾಂಟೋಸ್ ಕ್ಲಬ್‌ನಲ್ಲಿ ನೇಮಾರ್ ಅವರ ಭವಿಷ್ಯವು ಅನಿಶ್ಚಿತವಾಗಿಯೇ ಉಳಿದಿದೆ. ಅವರ ಪ್ರಸ್ತುತ ಒಪ್ಪಂದವು ಜೂನ್ 30 ರಂದು ಮುಕ್ತಾಯಗೊಳ್ಳಲಿದೆ. ಈ ಋತುವಿನಲ್ಲಿ ಗಾಯಗಳಿಂದಾಗಿ ಕೇವಲ 12 ಪಂದ್ಯಗಳನ್ನು ಆಡಿದ್ದರು. ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡು ಬಂದಿಲ್ಲ. ಕೇವಲ ಮೂರು ಗೋಲುಗಳು ಮಾತ್ರ ಗಳಿಸಲು ಸಾಧ್ಯವಾಗಿತ್ತು.


ರಿಯೋ ಡಿ ಜನೈರೊ: ಕೋವಿಡ್(Covid-19) ಸೋಂಕು ನಿಧಾನಗತಿಯಲ್ಲಿ ಏರಿಕೆ ಕಾಣುತ್ತಿದ್ದು ಖ್ಯಾತ ಫುಟ್‌ಬಾಲ್ ತಾರೆ ಬ್ರೆಜಿಲ್‌ನ ನೇಮರ್‌ಗೆ(Neymar) ಕೋವಿಡ್ ದೃಢಪಟ್ಟಿದೆ. ಕೊರೊನಾ ಸೋಂಕು ದೃಢಪಟ್ಟ ನಂತರ ನೇಮರ್ ಅವರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಕ್ಲಬ್ ಸ್ಯಾಂಟೋಸ್(club Santos) ಬ್ರೆಜಿಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ನೇಮರ್‌ಗೆ ಈ ಹಿಂದೆ 2020 ರಲ್ಲಿಯೂ ಕೋವಿಡ್ ಸೋಂಕು ತಗುಲಿತ್ತು.
ಸೌದಿ ಪ್ರೊ ಲೀಗ್‌ನಲ್ಲಿ ಅಲ್-ಹಿಲಾಲ್ ಪರ ಆಡುವ ವೇಳೆ ಗಾಯಗೊಂಡಿದ್ದ ನೇಮರ್ ಈ ವರ್ಷದ ಆರಂಭದಲ್ಲಿ ಸ್ಯಾಂಟೋಸ್ ಕ್ಲಬ್‌ಗೆ ಮರಳಿದ್ದರು. ಅವರು ಗಂಭೀರ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು. ಸ್ಯಾಂಟೋಸ್ ಕ್ಲಬ್‌ನಲ್ಲಿ ನೇಮಾರ್ ಅವರ ಭವಿಷ್ಯವು ಅನಿಶ್ಚಿತವಾಗಿಯೇ ಉಳಿದಿದೆ. ಅವರ ಪ್ರಸ್ತುತ ಒಪ್ಪಂದವು ಜೂನ್ 30 ರಂದು ಮುಕ್ತಾಯಗೊಳ್ಳಲಿದೆ. ಈ ಋತುವಿನಲ್ಲಿ ಗಾಯಗಳಿಂದಾಗಿ ಕೇವಲ 12 ಪಂದ್ಯಗಳನ್ನು ಆಡಿದ್ದರು. ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡು ಬಂದಿಲ್ಲ. ಕೇವಲ ಮೂರು ಗೋಲುಗಳು ಮಾತ್ರ ಗಳಿಸಲು ಸಾಧ್ಯವಾಗಿತ್ತು.
Brazil forward NEYMAR has been sidelined after TESTING POSITIVE for COVID-19, his club Santos said in a statement as quoted by Brazilian media. The 33-year-old began showing symptoms on Thursday and was immediately removed from team activities.
— Professional Foul (@Pro_Foul) June 8, 2025
-ESPN pic.twitter.com/UT62N6iIrh
ಭಾರತದಲ್ಲೂ ಕೋವಿಡ್ ಹೆಚ್ಚಳ
ಭಾರತದಲ್ಲಿಯೂ ಕೋವಿಡ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಭಾನುವಾರ ಬಿಡುಗಡೆಯಾದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಕಳೆದ 48 ಗಂಟೆಗಳಲ್ಲಿ 769 ಹೊಸ ಕೋವಿಡ್ ಸೋಂಕುಗಳು ವರದಿಯಾಗಿವೆ. ಈ ಮೂಲಕ ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 6,000 ದಾಟಿದೆ.
ಭಾರತದಲ್ಲಿ 6,133 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಮತ್ತು ಕಳೆದ 24 ಗಂಟೆಗಳಲ್ಲಿ ಇನ್ನೂ ಆರು ಸಾವುಗಳು ವರದಿಯಾಗಿವೆ ಎಂದು ಸಚಿವಾಲಯ ತಿಳಿಸಿದೆ. ಈ ವರ್ಷದ ಜನವರಿಯಿಂದ, ದೇಶದಲ್ಲಿ ಕೋವಿಡ್ ಗೆ ಸಂಬಂಧಿಸಿದಂತೆ 65 ಸಾವುಗಳು ವರದಿಯಾಗಿವೆ.