ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Smriti Mandhana: 12ನೇ ಏಕದಿನ ಶತಕ ಸಿಡಿಸಿ ವಿಶ್ವ ದಾಖಲೆ ಸರಿಗಟ್ಟಿದ ಸ್ಮೃತಿ ಮಂಧಾನ

IND-W vs AUS-W: 47 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 4700 ಕ್ಕೂ ಹೆಚ್ಚು ರನ್ ಗಳಿಸಿರುವ ಮಂಧಾನಾ, ಒಟ್ಟಾರೆಯಾಗಿ ಮಹಿಳಾ ಏಕದಿನ ಶತಕಗಳ ಪಟ್ಟಿಯಲ್ಲಿ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ. ಮೆಗ್ ಲ್ಯಾನಿಂಗ್ (15) ಮತ್ತು ಬೇಟ್ಸ್ (13) ಮೊದಲ ಎರಡು ಸ್ಥಾನದಲ್ಲಿದ್ದಾರೆ. ವಿಶ್ವ ದಾಖಲೆ ನಿರ್ಮಿಸಲು ಮಂಧಾನಗೆ 4 ಶತಕದ ಅಗತ್ಯವಿದೆ.

12ನೇ ಏಕದಿನ ಶತಕ ಸಿಡಿಸಿ ವಿಶ್ವ ದಾಖಲೆ ಸರಿಗಟ್ಟಿದ ಸ್ಮೃತಿ ಮಂಧಾನ

-

Abhilash BC Abhilash BC Sep 18, 2025 11:34 AM

ಮುಲ್ಲನಪುರ: ಪ್ರವಾಸಿ ಆಸ್ಟ್ರೇಲಿಯಾ(IND-W vs AUS-W) ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಬಿರುಸಿನ ಶತಕ ಬಾರಿಸಿ ಮಿಂಚಿದ್ದ ಸ್ಮೃತಿ ಮಂಧಾನ(Smriti Mandhana) ಈ ಶತಕದ ಮೂಲಕ ವಿಶ್ವ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. 12 ನೇ ಏಕದಿನ ಶತಕ ಬಾರಿಸಿದ ಸ್ಮೃತಿ, ಮಹಿಳಾ ಏಕದಿನ ಪಂದ್ಯದಲ್ಲಿ ಆರಂಭಿಕ ಆಟಗಾರ್ತಿಯಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಸರಿಗಟ್ಟಿದರು.

2013 ರಲ್ಲಿ ಭಾರತಕ್ಕೆ ಆರಂಭಿಕ ಆಟಗಾರ್ತಿಯಾಗಿ ಪದಾರ್ಪಣೆ ಮಾಡಿದ ನಂತರ ಕೇವಲ 106 ಇನ್ನಿಂಗ್ಸ್‌ಗಳಲ್ಲಿ 12 ನೇ ಶತಕ ಗಳಿಸುವ ಮೂಲಕ ಅವರು ನ್ಯೂಜಿಲೆಂಡ್‌ನ ಸುಜೀ ಬೇಟ್ಸ್ ಮತ್ತು ಇಂಗ್ಲೆಂಡ್‌ನ ಟ್ಯಾಮಿ ಬ್ಯೂಮಾಂಟ್ ಅವರ ದಾಖಲೆಯನ್ನು ಸರಿಗಟ್ಟಿದರು.

ಆಸೀಸ್‌ ವಿರುದ್ಧದ ಪಂದ್ಯದಲ್ಲಿ ಮಂಧಾನಾ ಕೇವಲ 77 ಎಸೆತಗಳಲ್ಲಿ ಮಿಡ್-ಆಫ್‌ನಲ್ಲಿ ಸಿಕ್ಸ್ ಬಾರಿಸುವ ಮೂಲಕ ಶತಕ ಪೂರ್ತಿಗೊಳಿಸಿದರು. ಇದು ಭಾರತೀಯ ಮಹಿಳಾ ತಂಡದ ಪರ ದಾಖಲಾದ ಎರಡನೇ ಅತಿ ವೇಗದ ಶತಕ ಇದಾಗಿದೆ. ಒಟ್ಟು 91 ಎಸೆತಗಳಲ್ಲಿ 14 ಬೌಂಡರಿ, ನಾಲ್ಕು ಸಿಕ್ಸರ್‌ಗಳ ನೆರವಿನಿಂದ 117 ರನ್ ಹೊಡೆದರು.



47 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 4700 ಕ್ಕೂ ಹೆಚ್ಚು ರನ್ ಗಳಿಸಿರುವ ಮಂಧಾನಾ, ಒಟ್ಟಾರೆಯಾಗಿ ಮಹಿಳಾ ಏಕದಿನ ಶತಕಗಳ ಪಟ್ಟಿಯಲ್ಲಿ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ. ಮೆಗ್ ಲ್ಯಾನಿಂಗ್ (15) ಮತ್ತು ಬೇಟ್ಸ್ (13) ಮೊದಲ ಎರಡು ಸ್ಥಾನದಲ್ಲಿದ್ದಾರೆ. ವಿಶ್ವ ದಾಖಲೆ ನಿರ್ಮಿಸಲು ಮಂಧಾನಗೆ 4 ಶತಕದ ಅಗತ್ಯವಿದೆ.

ಇದನ್ನೂ ಓದಿ IND-W vs AUS-W: ವೈರಲ್ ಜ್ವರ; ಆಸ್ಟ್ರೇಲಿಯಾ ಮಹಿಳಾ ಏಕದಿನ ಸರಣಿಯಿಂದ ಹೊರಬಿದ್ದ ಜೆಮೀಮಾ