Disha Patani: ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ; ಸಿಸಿಟಿವಿಯಲ್ಲಿ ಸೆರೆ ಆಯ್ತು ವಿಡಿಯೋ
ಬಾಲಿವುಡ್ ನಟಿ ದಿಶಾ ಪಟಾನಿ (Disha Patani) ಅವರ ಬರೇಲಿಯ ನಿವಾಸದ ಹೊರಗೆ ರೋಹಿತ್ ಗೋದಾರ-ಗೋಲ್ಡಿ ಬರಾರ್ ಗ್ಯಾಂಗ್‌ನ ಇಬ್ಬರು ಸದಸ್ಯರು (Viral Video) ಗುಂಡಿನ ದಾಳಿ ನಡೆಸಿದ್ದರು. ಅದರ ವಿಡಿಯೋ ಇದೀಗ ವೈರಲ್ ಆಗಿದೆ.

-

ಲಖನೌ: ಬಾಲಿವುಡ್ ನಟಿ ದಿಶಾ ಪಟಾನಿ (Disha Patani) ಅವರ ಬರೇಲಿಯ ನಿವಾಸದ ಹೊರಗೆ ರೋಹಿತ್ ಗೋದಾರ-ಗೋಲ್ಡಿ ಬರಾರ್ ಗ್ಯಾಂಗ್‌ನ ಇಬ್ಬರು ಸದಸ್ಯರು ಗುಂಡಿನ ದಾಳಿ ನಡೆಸಿದ್ದರು. ಅದರ ವಿಡಿಯೋ ಇದೀಗ ವೈರಲ್ ಆಗಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಬುಧವಾರ ಗಾಜಿಯಾಬಾದ್‌ನ ಟ್ರೋನಿಕಾ ನಗರದ ಬಳಿ ಇಬ್ಬರು ಆರೋಪಿಗಳ ಎನ್‌ಕೌಂಟರ್ ಮಾಡಿದ್ದಾರೆ. ದೆಹಲಿ ಪೊಲೀಸ್ ವಿಶೇಷ ಘಟಕ, ಉತ್ತರ ಪ್ರದೇಶ ಎಸ್‌ಟಿಎಫ್ ಮತ್ತು ಹರಿಯಾಣ ಎಸ್‌ಟಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ಈ ಎನ್‌ಕೌಂಟರ್ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೃತರನ್ನು ಹರಿಯಾಣದ ರೋಹ್ಟಕ್ ನಿವಾಸಿ ರವೀಂದರ್ ಮತ್ತು ಹರಿಯಾಣದ ಸೋನಿಪತ್‌ನ ಅರುಣ್ ಎಂದು ಗುರುತಿಸಲಾಗಿದ್ದು, ಹರಿಯಾಣ ಎಸ್‌ಟಿಎಫ್‌ನ ಹಿರಿಯ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದು, ಇಬ್ಬರ ಮೇಲೆಯೂ ಗುಂಡು ಹಾರಿಸಲಾಗಿದೆ ಎಂದು ದೃಢಪಡಿಸಿದರು ಮತ್ತು ಎನ್‌ಕೌಂಟರ್ ಸಮಯದಲ್ಲಿ ವಿಶೇಷ ಘಟಕದ ಸಿಬ್ಬಂದಿಗೂ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ. ಬರೇಲಿ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು, ಅಪರಾಧದ ಬಗ್ಗೆ ರಾಜ್ಯ ಸರ್ಕಾರದ ಶೂನ್ಯ ಸಹಿಷ್ಣುತೆ ನೀತಿಯನ್ನು ಪುನರುಚ್ಚರಿಸಿದ್ದರು.
ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದವು. ಸೆಪ್ಟೆಂಬರ್ 12 ರಂದು ಬೆಳಗಿನ ಜಾವ 3.45 ರ ಸುಮಾರಿಗೆ ಶೂಟರ್‌ಗಳಾದ ರವೀಂದರ್ ಮತ್ತು ಅರುಣ್ ತಮ್ಮ ಮೋಟಾರ್‌ಸೈಕಲ್‌ನಲ್ಲಿ ಮನೆ ಸಮೀಪಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣಬಹುದು. ಅವರು ಸಮೀಪಿಸುತ್ತಿದ್ದಂತೆ, ಪಟಾನಿ ಅವರ ಮನೆಯೊಳಗಿನ ನಾಯಿಗಳು ಬೊಗಳಲು ಪ್ರಾರಂಭಿಸುತ್ತವೆ. ಹಿಂಬದಿ ಸವಾರ ವಾಹನದಿಂದ ಇಳಿದು, ಮನೆಯ ಪಕ್ಕದ ಬೀದಿಗೆ ಪ್ರವೇಶಿಸಿ ಗಾಳಿಯಲ್ಲಿ ಹಲವಾರು ಗುಂಡು ಹಾರಿಸುತ್ತಾನೆ. ಹರಿಯಾಣ ಮೂಲದ ರವೀಂದರ್ ಮತ್ತು ಅರುಣ್ ರೋಹಿತ್ ಗೋದಾರ-ಗೋಲ್ಡಿ ಬ್ರಾರ್ ಗ್ಯಾಂಗ್‌ನ ಇಬ್ಬರು ಸಕ್ರಿಯ ಸದಸ್ಯರಾಗಿದ್ದರು, ಮೊದಲಿಗರು ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದರು ಎಂದು ತಿಳಿದು ಬಂದಿದೆ.
Footage of the firing incident at UP's Bareilly residence of actress Disha Patani. The two suspects - Ravindra and Arun - were killed in encounter with UP STF in Ghaziabad. pic.twitter.com/lwwExFUPf4
— Piyush Rai (@Benarasiyaa) September 17, 2025
ಪೊಲೀಸರು ಗುಪ್ತಚರ ಮಾಹಿತಿಗಳನ್ನು ಸಂಗ್ರಹಿಸಿದರು ಮತ್ತು ನೆರೆಯ ರಾಜ್ಯಗಳಿಂದ ದಾಖಲೆಗಳನ್ನು ಹೋಲಿಸಿದರು, ಇದರಿಂದಾಗಿ ಗುಂಡು ಹಾರಿಸಿದವರನ್ನು ರೋಹ್ಟಕ್‌ನ ಕಾಹ್ನಿ ನಿವಾಸಿ ಕಲ್ಲು ಅವರ ಪುತ್ರ ರವೀಂದ್ರ ಮತ್ತು ಸೋನಿಪತ್‌ನ ಗೋಹಾನಾ ರಸ್ತೆಯ ಇಂಡಿಯನ್ ಕಾಲೋನಿಯ ನಿವಾಸಿ ರಾಜೇಂದ್ರ ಅವರ ಪುತ್ರ ಅರುಣ್ ಎಂದು ಗುರುತಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಅಮಿತಾಭ್ ಯಶ್ ಹೇಳಿದರು.
ಈ ಸುದ್ದಿಯನ್ನೂ ಓದಿ: Disha Patani: ದಿಶಾ ಪಟಾನಿ ಮನೆ ಮೇಲೆ ದಾಳಿ ಮಾಡಿದ್ದ ಇಬ್ಬರು ಎನ್‌ಕೌಂಟರ್‌ಗೆ ಬಲಿ
ನಂತರದ ಗುಂಡಿನ ಚಕಮಕಿಯಲ್ಲಿ, ಇಬ್ಬರೂ ಆರೋಪಿಗಳು ಗಂಭೀರವಾಗಿ ಗಾಯಗೊಂಡರು ಮತ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ರವೀಂದ್ರ ಮತ್ತು ಅರುಣ್ ಇಬ್ಬರೂ ರೋಹಿತ್ ಗೋದಾರ-ಗೋಲ್ಡಿ ಬ್ರಾರ್ ಗ್ಯಾಂಗ್‌ನ ಸಕ್ರಿಯ ಸದಸ್ಯರು ಎಂದು ಎಡಿಜಿ ದೃಢಪಡಿಸಿದರು. ರವೀಂದ್ರ ಅಪರಾಧ ಇತಿಹಾಸವನ್ನು ಹೊಂದಿದ್ದು, ಈ ಹಿಂದೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಘಟನಾ ಸ್ಥಳದಿಂದ ಗ್ಲಾಕ್ ಮತ್ತು ಜಿಗಾನಾ ಪಿಸ್ತೂಲ್ ಜೊತೆಗೆ ದೊಡ್ಡ ಪ್ರಮಾಣದ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.