ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lionel Messi: ಭಾರತ ಪ್ರವಾಸಕ್ಕೂ ಮುನ್ನ ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ಕಳುಹಿಸಿದ ಲಿಯೋನೆಲ್ ಮೆಸ್ಸಿ

ಮೆಸ್ಸಿಯ 3 ದಿನಗಳ ಭಾರತ ಭೇಟಿಯ ವೇಳೆ ಕೋಲ್ಕತಾ, ಅಹಮದಾಬಾದ್‌, ಮುಂಬೈ ಹಾಗೂ ನವದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇದು 2011ರ ಬಳಿಕ ಮೆಸ್ಸಿಯ ಭಾರತದ ಮೊದಲ ಭೇಟಿಯಾಗಿರಲಿದೆ. ಡಿ.13ರಿಂದ ಡಿ.15ರವರೆಗೆ ಅವರು ಭಾರತದಲ್ಲಿ ಇರಲಿದ್ದಾರೆ.

ಮೋದಿಗೆ ವಿಶೇಷ ಉಡುಗೊರೆ ಕಳುಹಿಸಿದ ಲಿಯೋನೆಲ್ ಮೆಸ್ಸಿ

-

Abhilash BC Abhilash BC Sep 18, 2025 11:02 AM

ನವದೆಹಲಿ: ಈ ವರ್ಷದ ಕೊನೆಯಲ್ಲಿ ಭಾರತಕ್ಕೆ ತಮ್ಮ ಬಹುನಿರೀಕ್ಷಿತ ಭೇಟಿಗೆ ಸಿದ್ಧತೆ ನಡೆಸುತ್ತಿರುವ ಅರ್ಜೆಂಟೀನಾದ ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿ(Lionel Messi), 75ನೇ ಹುಟ್ಟುಹಬ್ಬದ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ(PM Modi) ಅವರಿಗೆ 2022 ರ ಫಿಫಾ ವಿಶ್ವಕಪ್ ವಿಜಯೋತ್ಸವದ ಸಹಿ ಹಾಕಿದ ಜೆರ್ಸಿ(Messi World Cup jersey)ಯನ್ನು ಕಳುಹಿಸಿದ್ದಾರೆ.

"ಭಾರತ ಭೇಟಿಯ ಬಗ್ಗೆ ಚರ್ಚಿಸಲು ಫೆಬ್ರವರಿಯಲ್ಲಿ ನಾನು ಮೆಸ್ಸಿಯನ್ನು ಭೇಟಿಯಾದಾಗ, ಪ್ರಧಾನಿಯವರ 75 ನೇ ಹುಟ್ಟುಹಬ್ಬವೂ ಬರುತ್ತಿದೆ ಎಂದು ನಾನು ಅವರಿಗೆ ಹೇಳಿದ್ದೆ ಮತ್ತು ಅವರು ಪ್ರಧಾನಿಗೆ ಸಹಿ ಮಾಡಿದ ಜೆರ್ಸಿಯನ್ನು ಕಳುಹಿಸುವುದಾಗಿ ಹೇಳಿದ್ದರು. ಎರಡು ಅಥವಾ ಮೂರು ದಿನಗಳಲ್ಲಿ ಜೆರ್ಸಿ ಭಾರತಕ್ಕೆ ತಲುಪಲಿದೆ" ಎಂದು ಮೆಸ್ಸಿ ಭಾರತ ಭೇಟಿಯ ಆಯೋಜಕರಲ್ಲಿ ಓರ್ವರಾದ ಸತಾದ್ರು ದತ್ತಾ ಪಿಟಿಐಗೆ ತಿಳಿಸಿದ್ದಾರೆ.

ಮೆಸ್ಸಿಯ 3 ದಿನಗಳ ಭಾರತ ಭೇಟಿಯ ವೇಳೆ ಕೋಲ್ಕತಾ, ಅಹಮದಾಬಾದ್‌, ಮುಂಬೈ ಹಾಗೂ ನವದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇದು 2011ರ ಬಳಿಕ ಮೆಸ್ಸಿಯ ಭಾರತದ ಮೊದಲ ಭೇಟಿಯಾಗಿರಲಿದೆ. ಡಿ.13ರಿಂದ ಡಿ.15ರವರೆಗೆ ಅವರು ಭಾರತದಲ್ಲಿ ಇರಲಿದ್ದಾರೆ.

ಪ್ರಧಾನಿ ನಿವಾಸದಲ್ಲಿ ಮೋದಿ-ಮೆಸ್ಸಿ ಭೇಟಿ

ಡಿ.15ರಂದು ಮೆಸ್ಸಿ, ಪ್ರಧಾನಿ ನರೇಂದ್ರ ಮೋದಿಯನ್ನು ಅವರ ನಿವಾಸದಲ್ಲೇ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಮೋದಿ ಜೊತೆ ಔತಣ ಕೂಟದಲ್ಲೂ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬಳಿಕ ನವದೆಹಲಿಯ ಫಿರೋಜ್‌ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೆಸ್ಸಿ ಭಾಗಿಯಾಗಲಿದ್ದಾರೆ. ವರದಿಗಳ ಪ್ರಕಾರ, ಡೆಲ್ಲಿ ಕ್ರಿಕೆಟ್‌ ಸಂಸ್ಥೆಯು ಖ್ಯಾತ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಹಾಗೂ ಶುಭ್‌ಮನ್‌ ಗಿಲ್‌ರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ ಎಂದು ತಿಳಿದುಬಂದಿದೆ.

ಮೆಸ್ಸಿ ಭೇಟಿ ವೇಳಾಪಟ್ಟಿ

ಡಿ.12: ರಾತ್ರಿ ಭಾರತಕ್ಕೆ ಆಗಮಿಸಲಿರುವ ಲಿಯೋನಲ್ ಮೆಸ್ಸಿಡಿ.13: ಕೋಲ್ಕತಾಗೆ ಭೇಟಿ. ಮೆಸ್ಸಿ ಪ್ರತಿಮೆ, ಬೃಹತ್‌ ವರ್ಣಚಿತ್ರ ಅನಾವರಣ. ಡಿ.13: ಈಡನ್‌ ಗಾರ್ಡನ್ಸ್‌ನಲ್ಲಿ ಫುಟ್ಬಾಲ್ ಪಂದ್ಯ. ಗಂಗೂಲಿ, ಪೇಸ್‌, ಭುಟಿಯಾ ಭಾಗಿ. ಡಿ.13: ಸಂಜೆ ಅಹಮದಾಬಾದ್‌ನಲ್ಲಿ ಅದಾನಿ ಫೌಂಡೇಷನ್‌ನ ಕಾರ್ಯಕ್ರಮಡಿ.14: ಬ್ರಬೋರ್ನ್‌ ಕ್ರೀಡಾಂಗಣದಲ್ಲಿ ಮೀಟ್‌ ಆ್ಯಂಡ್‌ ಗ್ರೀಟ್‌, ಗೋಟ್‌ ಕನ್ಸರ್ಟ್‌. ಡಿ.14: ವಾಂಖೇಡೆ ಕ್ರೀಡಾಂಗಣದಲ್ಲಿ ಪೆಡಲ್‌ ಗೋಟ್‌ ಕಪ್‌. ಸೆಲೆಬ್ರಿಟಿಗಳ ಜೊತೆಗೂಡಿ ಆಟ. ಡಿ.14: ಬಳಿಕ ಸಚಿನ್‌, ಧೋನಿ, ರೋಹಿತ್‌ ಜತೆ ಕಾರ್ಯಕ್ರಮ. ಶಾರುಖ್‌ ಸೇರಿ ಹಲವರ ಉಪಸ್ಥಿತಿ.ಡಿ.15: ಪ್ರಧಾನಿ ಮೋದಿಯನ್ನು ಅವರ ನಿವಾಸದಲ್ಲೇ ಭೇಟಿ. ಡಿ.15: ಫಿರೋಜ್‌ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ. ಅದೇ ದಿನ ರಾತ್ರಿ ಭಾರತದಿಂದ ಮೆಸ್ಸಿ ನಿರ್ಗಮನ.

ಇದನ್ನೂ ಓದಿ Lionel Messi: 2026ರ ವಿಶ್ವಕಪ್‌ನಲ್ಲಿ ಮೆಸ್ಸಿ ಆಡುವುದು ಅನುಮಾನ!