ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಹಿಳಾ ಟಿ20 ಏಷ್ಯಾ ಕಪ್; ಥಾಯ್ಲೆಂಡ್ ಸವಾಲಿಗೆ ಭಾರತ ಸಿದ್ದ

Women’s Asia Cup T20: ಏಷ್ಯಾ ಕಪ್ ಮತ್ತು ಏಷ್ಯನ್ ಕ್ರೀಡಾಕೂಟಕ್ಕೆ ವಿಶ್ವಾಸಾರ್ಹ ಬ್ಯಾಟರ್‌ ಜೆಮಿಮಾ ರೊಡ್ರಿಗಸ್ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಭಾರತವು ಪ್ರತಿಕಾ ರಾವಲ್ ಅವರನ್ನು ತನ್ನ ತಾರಾ ಬಳಗಕ್ಕೆ ಸೇರಿಸಿಕೊಂಡಿದೆ. ಆದರೆ ಈ ಆಯ್ಕೆಯು ಮಧ್ಯಮ ಕ್ರಮಾಂಕದ ಬಲವರ್ಧನೆಯ ಅಗತ್ಯವನ್ನು ಅಷ್ಟೇನೂ ಪೂರೈಸುವುದಿಲ್ಲ.

ಮಹಿಳಾ ಟಿ20 ಏಷ್ಯಾ ಕಪ್; ಥಾಯ್ಲೆಂಡ್ ಸವಾಲಿಗೆ ಭಾರತ ಸಿದ್ದ

Harmanpreet Kaur -

Abhilash BC
Abhilash BC Aug 29, 2026 2:50 PM

ದುಬೈ, ಆ.29: ಭಾನುವಾರ ನಡೆಯಲಿರುವ ಮಹಿಳಾ ಟಿ20 ಏಷ್ಯಾ ಕಪ್ ಗ್ರೂಪ್ ಎ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಥಾಯ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಕಳೆದ ದಶಕದಲ್ಲಿ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಭಾರತ ಅತ್ಯಂತ ಪ್ರಬಲ ತಂಡವಾಗಿದೆ. 2016-17ರಿಂದ ಐದು ಟಿ20 ಆವೃತ್ತಿಗಳಲ್ಲಿ ಮೂರು ಬಾರಿ ಪ್ರಶಸ್ತಿಯನ್ನು ಗೆದ್ದಿದೆ. ಆದರೆ ಇತ್ತೀಚಿನ ಪ್ರದರ್ಶನವು ಪ್ರಸ್ತುತ ಭರವಸೆಗಳಿಗಿಂತ ಹೆಚ್ಚಿನ ಕಳವಳಗಳನ್ನು ಹುಟ್ಟುಹಾಕುತ್ತದೆ.

ಹೌದು, ಈ ವರ್ಷ ಭಾರತ ಆಡಿದ 16 ಟಿ20 ಪಂದ್ಯಗಳಲ್ಲಿ ಒಂಬತ್ತು ಪಂದ್ಯಗಳಲ್ಲಿ ಸೋತಿದೆ. ಇತ್ತೀಚಿನ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಗುಂಪು ಹಂತದಲ್ಲೇ ಸ್ಪರ್ಧೆಯಿಂದ ಹೊರಬಿದ್ದಿತ್ತು. ಮಹಿಳಾ ಟಿ20 ವಿಶ್ವಕಪ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಹರ್ಮನ್‌ಪ್ರೀತ್, ಆಸ್ಟ್ರೇಲಿಯಾ ವಿರುದ್ಧದ ಪ್ರಮುಖ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಹೀಗಿದ್ದರೂ ಅವರ ಸ್ವಂತ ಫಾರ್ಮ್ ಮತ್ತು ಕಡಿಮೆ ಅವಧಿಯ ಮಾದರಿಯಲ್ಲಿ ಅವರ ಭವಿಷ್ಯದ ಬಗ್ಗೆ ಪ್ರಶ್ನೆಗಳು ಮುಂದುವರೆದಿದೆ.

ಏಷ್ಯಾ ಕಪ್ ಮತ್ತು ಏಷ್ಯನ್ ಕ್ರೀಡಾಕೂಟಕ್ಕೆ ವಿಶ್ವಾಸಾರ್ಹ ಬ್ಯಾಟರ್‌ ಜೆಮಿಮಾ ರೊಡ್ರಿಗಸ್ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಭಾರತವು ಪ್ರತಿಕಾ ರಾವಲ್ ಅವರನ್ನು ತನ್ನ ತಾರಾ ಬಳಗಕ್ಕೆ ಸೇರಿಸಿಕೊಂಡಿದೆ. ಆದರೆ ಈ ಆಯ್ಕೆಯು ಮಧ್ಯಮ ಕ್ರಮಾಂಕದ ಬಲವರ್ಧನೆಯ ಅಗತ್ಯವನ್ನು ಅಷ್ಟೇನೂ ಪೂರೈಸುವುದಿಲ್ಲ.

ಹಾಕಿ ವಿಶ್ವಕಪ್‌ನಲ್ಲಿ 5ನೇ ಸ್ಥಾನ ಪಡೆದ ಭಾರತ ಮಹಿಳಾ ತಂಡಕ್ಕೆ 50 ಲಕ್ಷ ಬಹುಮಾನ ಘೋಷಣೆ

ಅಗ್ರಸ್ಥಾನದಲ್ಲಿ ಭಾರತ ತಂಡವು ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಅವರಂತಹ ಬಲಿಷ್ಠ ಆರಂಭಿಕ ಜೋಡಿಯನ್ನು ಹೊಂದಿದೆ. ಆದರೆ 3 ನೇ ಕ್ರಮಾಂಕ ಮತ್ತು ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಇರುವ ದೊಡ್ಡ ಸವಾಲೆಂದರೆ ವೇಗವನ್ನು ಕಾಯ್ದುಕೊಳ್ಳುವುದು ಮತ್ತು ಸ್ಕೋರ್‌ಬೋರ್ಡ್‌ಗೆ ಮತ್ತಷ್ಟು ಉತ್ತೇಜನ ನೀಡುವುದು.

ಕಳೆದ ಬಾರಿ ಭಾರತ ಈ ಸ್ವರೂಪದಲ್ಲಿ ಆಡಿದಾಗ ಕಳಪೆ ಫೀಲ್ಡಿಂಗ್ ಪ್ರಮುಖ ಕಳವಳವಾಗಿತ್ತು. ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿ ಪಂದ್ಯಗಳನ್ನು ಸೋತ್ತಿದ್ದರು. ಭಾರತ ಮತ್ತೊಮ್ಮೆ ಸ್ಪಿನ್ ದಾಳಿಯನ್ನು ಮುನ್ನಡೆಸಲು ತನ್ನ ಅನುಭವಿ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು ಅವಲಂಬಿಸಲಿದ್ದು, ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಶ್ರೀ ಚರಣಿ, ರಾಧಾ ಯಾದವ್ ಮತ್ತು ಪ್ರೇಮಾ ರಾವತ್ ಕೆಲಸದ ಹೊರೆ ಹಂಚಿಕೊಂಡಿದ್ದಾರೆ.

ಭಾರತದ ಸೀಮ್ ಬೌಲಿಂಗ್ ಪಡೆಯೂ ಬಲಿಷ್ಠವಾಗಿ ಕಾಣುತ್ತಿದ್ದು, ಅನುಭವಿ ರೇಣುಕಾ ಸಿಂಗ್ ಠಾಕೂರ್, ಕ್ರಾಂತಿ ಗೌಡ್, ಅರುಂಧತಿ ರೆಡ್ಡಿ ಮತ್ತು ನಂದನಿ ಶರ್ಮಾ ಅವರಂತಹ ಆಟಗಾರ್ತಿಯರಿದ್ದಾರೆ.

ಏತನ್ಮಧ್ಯೆ, ಥಾಯ್ಲೆಂಡ್ ತನ್ನ ಆರಂಭಿಕ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ಧದ ಗೆಲುವಿನಿಂದ ಆತ್ಮವಿಶ್ವಾಸ ಹೆಚ್ಚಿಸಿದೆ. ನಾಯಕಿ ನರುಯೆಮೋಲ್ ಚೈವೈ (43) ಬ್ಯಾಟಿಂಗ್‌ನಲ್ಲಿ ಹಿಡಿತ ಸಾಧಿಸಿದರೆ, ಒನ್ನಿಚಾ ಕಮ್ಚೊಂಫು (3/27) ಮತ್ತು ಫನ್ನಿಟಾ ಮಾಯಾ (2/22) ಚೆಂಡಿನ ಮೂಲಕ ಪ್ರಭಾವ ಬೀರಿದ್ದರು.