ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs NZ: ಎರಡನೇ ಟಿ20ಐಗೆ ಭಾರತ ತಂಡದಲ್ಲಿ ಒಂದು ಬದಲಾವಣೆ ತಂದ ಎಸ್‌ ಬದ್ರಿನಾಥ್!

ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳ ನಡುವಣ ಎರಡನೇ ಟಿ20ಐ ಪಂದ್ಯ ಅಕ್ಟೋಬರ್‌ 24 ರಂದು ಕ್ರೈಸ್ಟ್‌ ಚರ್ಚ್‌ನ ಹ್ಯಾಗ್ಲಿ ಓವಲ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ xi ಅನ್ನು ಮಾಜಿ ಕ್ರಿಕೆಟಿಗ ಎಸ್‌ ಬದ್ರಿನಾಥ್‌ ಆಯ್ಕೆ ಮಾಡಿದ್ದಾರೆ. ಅಕ್ಷರ್‌ ಪಟೇಲ್‌ ಅವರನ್ನು ಕೂರಿಸಿ ಅವರ ಸ್ಥಾನಕ್ಕೆ ವರುಣ್‌ ಚಕ್ರವರ್ತಿಯನ್ನು ಆರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಭಾರತದ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆ ಸೂಚಿಸಿದ ಬದ್ರಿನಾಥ್‌!

ಭಾರತದ ಪ್ಲೇಯಿಂಗ್‌ XI ಆರಿಸಿದ ಎಸ್‌ ಬದ್ರಿನಾಥ್‌. -

Profile
Ramesh Kote Oct 23, 2026 8:00 PM

ಕ್ರೈಸ್ಟ್‌ ಚರ್ಚ್‌: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ (IND vs NZ) ಶನಿವಾರ (ಅಕ್ಟೋಬರ್ 24) ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ 226 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿ ಗೆದ್ದಿರುವ ಭಾರತ, ಎರಡನೇ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸುವ ನಿರೀಕ್ಷೆಯಲ್ಲಿದೆ. ಈ ನಡುವೆ, ಭಾರತದ ಮಾಜಿ ಆರಂಭಿಕ ಆಟಗಾರ ಸುಬ್ರಮಣ್ಯಂ ಬದ್ರಿನಾಥ್ (Subramaniam Badrinath) ಅವರು ಎರಡನೇ ಟಿ20 ಪಂದ್ಯಕ್ಕೆ ತಮ್ಮ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ಅನ್ನು ಆರಿಸಿದ್ದು, ಅಕ್ಷರ್ ಪಟೇಲ್ ಅವರನ್ನು ಕೈಬಿಟ್ಟಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಎಸ್‌ ಬದ್ರಿನಾಥ್, ಅಕ್ಷರ್ ಪಟೇಲ್ ಬದಲಿಗೆ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ವೇಳೆ ಗಾಯಗೊಂಡಿದ್ದ ವರುಣ್, ಬಳಿಕ ಏಷ್ಯನ್ ಗೇಮ್ಸ್‌ನಲ್ಲೂ ಆಡಿರಲಿಲ್ಲ. ಸೈಡ್ ಸ್ಟ್ರೇನ್ ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ವೆಸ್ಟ್ ಇಂಡೀಸ್ ವಿರುದ್ಧದ ತವರಿನ ಸರಣಿಯಲ್ಲೂ ಅವಕಾಶ ಪಡೆದಿರಲಿಲ್ಲ. ಸೆಪ್ಟೆಂಬರ್ 13ರ ಬಳಿಕ ಅವರು ಯಾವುದೇ ಪಂದ್ಯವನ್ನು ಆಡಿಲ್ಲ.

15 ಬಾಲ್‌ಗಳಲ್ಲಿ 42 ರನ್‌ ಸಿಡಿಸಿ ಇರ್ಫಾನ್‌ ಪಠಾಣ್‌ ದಾಖಲೆಯನ್ನು ಮುರಿದ ನಮನ್‌ ಧೀರ್‌!

ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದ ಅಕ್ಷರ್ ಪಟೇಲ್

ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಅಕ್ಷರ್ ಪಟೇಲ್ ನಾಲ್ಕು ಓವರ್‌ಗಳಲ್ಲಿ 51 ರನ್ ಬಿಟ್ಟುಕೊಟ್ಟಿದ್ದರು. ಆದರೆ, ನ್ಯೂಜಿಲೆಂಡ್ ಆರಂಭಿಕ ಆಟಗಾರ ಫಿನ್ ಆಲೆನ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆಲೆನ್ ಕೇವಲ 24 ಎಸೆತಗಳಲ್ಲಿ 45 ರನ್ ಗಳಿಸಿದ್ದರು. ಅಕ್ಷರ್ ಅವರ ದುಬಾರಿ ಬೌಲಿಂಗ್ ಪ್ರದರ್ಶನದ ಹಿನ್ನೆಲೆಯಲ್ಲಿ ಬದ್ರಿನಾಥ್ ತಮ್ಮ ತಂಡದಲ್ಲಿ ವರುಣ್ ಚಕ್ರವರ್ತಿ ಅವರಿಗೆ ಸ್ಥಾನ ನೀಡಿದ್ದಾರೆ. ಆದರೆ, ಇದು ಬದ್ರಿನಾಥ್ ಅವರ ವೈಯಕ್ತಿಕ ಆಯ್ಕೆಯಾಗಿದ್ದು, ಭಾರತ ತಂಡದ ಅಧಿಕೃತ ನಿರ್ಧಾರವಲ್ಲ.

ಎರಡನೇ ಟಿ20ಐ ಪಂದ್ಯಕ್ಕೆ ಬದ್ರಿನಾಥ್ ಆಯ್ಕೆ ಮಾಡಿದ ಭಾರತದ ಪ್ಲೇಯಿಂಗ್‌ XI

  1. ಅಭಿಷೇಕ್ ಶರ್ಮಾ
  2. ಸಂಜು ಸ್ಯಾಮ್ಸನ್
  3. ಇಶಾನ್ ಕಿಶನ್
  4. ಶ್ರೇಯಸ್ ಅಯ್ಯರ್
  5. ತಿಲಕ್ ವರ್ಮಾ
  6. ನಮನ್ ಧೀರ್
  7. ನಿತೀಶ್ ಕುಮಾರ್ ರೆಡ್ಡಿ
  8. ಭುವನೇಶ್ವರ್ ಕುಮಾರ್
  9. ಅರ್ಷದೀಪ್ ಸಿಂಗ್
  10. ಮಯಾಂಕ್ ಯಾದವ್
  11. ವರುಣ್ ಚಕ್ರವರ್ತಿ

IND vs NZ 2nd T20I: ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌ ವಿವರ!

ಎರಡನೇ ಪಂದ್ಯದಿಂದ ಇಶಾನ್ ಕಿಶನ್ ಔಟ್‌

ಎರಡನೇ ಟಿ20ಐ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಎಡಗೈ ಬ್ಯಾಟರ್ ಇಶಾನ್ ಕಿಶನ್ ತೊಡೆಸಂದು ಭಾಗದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಎರಡನೇ ಪಂದ್ಯದಿಂದ ಹೊರಗುಳಿದಿದ್ದಾರೆ. ಮೊದಲ ಪಂದ್ಯದಲ್ಲಿ ಗಾಯದ ಕಾರಣದಿಂದಲೇ ಅವರು ತಮ್ಮ ಸಾಮಾನ್ಯ ಬ್ಯಾಟಿಂಗ್ ಕ್ರಮಾಂಕಕ್ಕಿಂತ ಕೆಳಗೆ, ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು.

ಈ ಬೆಳವಣಿಗೆಯಿಂದಾಗಿ ಯುವ ಬ್ಯಾಟರ್ ವೈಭವ್ ಸೂರ್ಯವಂಶಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆ ಹೆಚ್ಚಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವೈಭವ್ ಇನ್ನೂ ಆಡಲು ಅವಕಾಶ ಪಡೆದಿಲ್ಲ. ಮೊದಲ ಪಂದ್ಯದಲ್ಲೂ ಅವರನ್ನು ಬೆಂಚ್‌ನಲ್ಲಿಯೇ ಉಳಿಸಲಾಗಿತ್ತು.

ವೈಭವ್‌ ಸೂರ್ಯವಂಶಿಯನ್ನು ದೀರ್ಘಾವಧಿ ಬೆಂಚ್‌ ಕಾಯಿಸುತ್ತಿರುವ ಭಾರತಕ್ಕೆ ರವಿ ಶಾಸ್ತ್ರಿ ಎಚ್ಚರಿಕೆ!

ವೈಭವ್ ಸೂರ್ಯವಂಶಿ ಆಯ್ಕೆಯ ಬಗ್ಗೆ ಸಹಾಯಕ ಕೋಚ್ ಹೇಳಿದ್ದೇನು?

“ಇಶಾನ್ ಕಿಶನ್‌ಗೆ ತೊಡೆಸಂದು ಭಾಗದಲ್ಲಿ ಸ್ವಲ್ಪ ಗಾಯವಾಗಿದೆ. ಬ್ಯಾಟಿಂಗ್ ಕ್ರಮಾಂಕದಲ್ಲಿನ ಬದಲಾವಣೆಯ ಬಗ್ಗೆ ಕೆಲವು ಊಹಾಪೋಹಗಳಿದ್ದವು. ಆದರೆ, ಅದು ಉದ್ದೇಶಪೂರ್ವಕ ಬದಲಾವಣೆಯಾಗಿರಲಿಲ್ಲ. ತೊಡೆಸಂದು ಗಾಯದ ಕಾರಣದಿಂದ ಅವರು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದರು. ಅವರು ಒಂದು ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ. ಇಶಾನ್ ಸಂಪೂರ್ಣವಾಗಿ ಚೇತರಿಸಿಕೊಳ್ಳದಿದ್ದರೆ, ವೈದ್ಯಕೀಯ ತಂಡದ ಸಲಹೆಯಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಆಗ ಬ್ಯಾಟರ್ ಆಗಿ ವೈಭವ್ ಸೂರ್ಯವಂಶಿ ಆಯ್ಕೆಯ ಪರಿಗಣನೆಗೆ ಬರುತ್ತಾರೆ,” ಎಂದು ಸಿತಾಂಶು ಕೋಟಕ್ ತಿಳಿಸಿದ್ದಾರೆ.