ವೆಸ್ಟ್ ಇಂಡೀಸ್ ಎದುರು 4ನೇ ಪಂದ್ಯದಲ್ಲಿ ಭಾರತದ ಸೋಲಿಗೆ ಟರ್ನಿಂಗ್ ಪಾಯಿಂಟ್ ತಿಳಿಸಿದ ಸಂಜು ಸ್ಯಾಮ್ಸನ್!
ವೆಸ್ಟ್ ಇಂಡೀಸ್ ವಿರುದ್ಧ ಸಂಜು ಸ್ಯಾಮ್ಸನ್ ಅವರ ಸ್ಪೋಟಕ ಅರ್ಧಶತಕದ ಹೊರತಾಗಿಯೂ ಭಾರತ ತಂಡ, ನಾಲ್ಕನೇ ಟಿ20ಐ ಪಂದ್ಯದಲ್ಲಿ 24 ರನ್ಗಳಿಂದ ಸೋಲು ಅನುಭವಿಸಿದೆ. ಈ ಪಂದ್ಯದ ಬಳಿಕ ಸಂಜು ಸ್ಯಾಮ್ಸನ್, ಜಸ್ಪ್ರೀತ್ ಬುಮ್ರಾ ಹಾಗೂ ಪಂದ್ಯದಲ್ಲಿನ ಸೊಲಿಗೆ ಟರ್ನಿಂಗ್ ಪಾಯಿಂಟ್ ಯಾವುದೆಂದು ವಿವರಿಸಿದ್ದಾರೆ.
ಭಾರತ ತಂಡದ ಸೋಲಿಗೆ ಟರ್ನಿಂಗ್ ಪಾಯಿಂಟ್ ತಿಳಿಸಿದ ಸಂಜು. -
ಹೈದರಾಬಾದ್: ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ ನಾಲ್ಕನೇ ಟಿ20ಐ ಪಂದ್ಯದಲ್ಲಿ (IND vs WI) 24 ರನ್ಗಳಿಂದ ಸೋಲು ಅನುಭವಿಸಿತು. 248 ರನ್ಗಳ ಗುರಿಯನ್ನು ಹಿಂಬಾಲಿಸಿದ ಟೀಮ್ ಇಂಡಿಯಾಗೆ ಸಂಜು ಸ್ಯಾಮ್ಸನ್ (sanju somson) ತಮ್ಮ ಸ್ಪೋಟಕ ಅರ್ಧಶತಕದ ಮೂಲಕ ಭರ್ಜರಿ ಆರಂಭವನ್ನು ನೀಡಿದ್ದಾರೆ. ಆದರೆ ಅವರು ಔಟ್ ಆದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಯಾವೊಬ್ಬ ಬ್ಯಾಟ್ಸ್ಮನ್ ದೀರ್ಘಾವಧಿ ಕ್ರೀಸ್ನಲ್ಲಿ ನೆಲೆಗೊಳ್ಳಲಿಲ್ಲ. ಈ ಪಂದ್ಯದ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್, ಭಾರತದ ಸೋಲಿಗೆ ಟರ್ನಿಂಗ್ ಪಾಯಿಂಟ್ ಯಾವುದೆಂದು ಬಹಿರಂಗಪಡಿಸಿದ್ದಾರೆ.
ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ವಿಂಡೀಸ್ ನೀಡಿದ್ದ 248 ರನ್ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್, 22 ಎಸೆತಗಳಲ್ಲಿ 56 ರನ್ಗಳನ್ನು ಗಳಿಸಿ ತಂಡಕ್ಕೆ ಉತ್ತಮ ಆರಂಭವನ್ನು ತಂದುಕೊಟ್ಟಿದ್ದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ನಮನ್ ಧೀರ್ ವಿಫಲರಾದರು. ಒಂದು ಹಂತದಲ್ಲಿ ಭಾರತ ತಂಡ, 130 ರನ್ಗಳಿಗೆ 5 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ತಿಲಕ್ ವರ್ಮಾ ಹಾಗೂ ನಿತೀಶ್ ಕುಮಾರ್ ರೆಡ್ಡಿ 70 ರನ್ಗಳನ್ನು ಜೊತೆಯಾಟವನ್ನು ಆಡಿದರು. 43 ರನ್ ಗಳಿಸಿದ ಬಳಿಕ ತಿಲಕ್ ಔಟ್ ಆದರು. ನಂತರ ನಿತೀಶ್ ರೆಡ್ಡಿ ಅವರು 41 ರನ್ ಗಳಿಸಿ ಔಟ್ ಆದರು. ಅಂತಿಮವಾಗಿ ಭಾರತ ತಂಡ 19.3 ಓವರ್ಗಳಿಗೆ 223 ರನ್ಗಳಿಗೆ ಆಲ್ಔಟ್ ಆಯಿತು.
IND vs WI: ಐದನೇ ಟಿ20ಐ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆಯನ್ನು ಸೂಚಿಸಿದ ವರುಣ್ ಆರೋನ್!
ಪಂದ್ಯದ ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜು ಸ್ಯಾಮ್ಸನ್, "ತಿಲಕ್ ವರ್ಮಾ ಔಟ್ ಆಗಿದ್ದು ಪಂದ್ಯದ ಪಾಲಿಗೆ ಟರ್ನಿಂಗ್ ಪಾಯಿಂಟ್. ಈ ಹಂತದಲ್ಲಿ ನಾವು ಉತ್ತಮವಾಗಿ ಆಡುತ್ತಿದ್ದೆವು ಹಾಗೂ ಒಂದು ಓವರ್ಗೆ 10 ರಿಂದ 12 ರನ್ಗಳನ್ನು ಗಳಿಸುತ್ತಿದ್ದೆವು. ಒತ್ತಡದ ಸನ್ನಿವೇಶದಲ್ಲಿ ರೆಡ್ಡಿ ಹಾಗೂ ತಿಲಕ್ ತುಂಬಾ ಚೆನ್ನಾಗಿ ಬ್ಯಾಟ್ ಮಾಡುತ್ತಿದ್ದರು. ತಿಲಕ್ ಆಡುತ್ತಿದ್ದಾಗ, ನಾವು ಚೇಸ್ ಮಾಡುವ ಹಾದಿಯಲ್ಲಿಸಾಗುತ್ತಿದ್ದೆವು. ತಂಡ ಐದು ವಿಕೆಟ್ಗಳನ್ನು ಕಳೆದುಕೊಂಡಾಗ ಇಬ್ಬರು ಯುವ ಆಟಗಾರರು ಒತ್ತಡವನ್ನು ಮೆಟ್ಟಿ ನಿಂತು ಕಠಿಣ ಹೋರಾಟವನ್ನು ನಡೆಸಿದ್ದರು. ಇದು ನಿಜಕ್ಕೂ ಅದ್ಭುತ ಸಂಗತಿಯಾಗಿದೆ," ಎಂದು ತಿಳಿಸಿದ್ದಾರೆ.
ಜಸ್ಪ್ರೀತ್ ಬುಮ್ರಾ ಬಗ್ಗೆ ಸಂಜು ಸ್ಯಾಮ್ಸನ್ ಹೇಳಿಕೆ
ಇದೇ ವೇಳೆ ಸಂಜು ಸ್ಯಾಮ್ಸನ್ ಅವರು ಜಸ್ಪ್ರೀತ್ ಬುಮ್ರಾ ಅವರ ಮಹತ್ವದ ಬಗ್ಗೆ ಮಾತನಾಡಿದರು. ಅವರ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಆದರೆ, ನಮ್ಮಲ್ಲಿ ಅದ್ಭುತ ಪ್ರತಿಭಾವಂತ ಬೌಲರ್ಗಳಿದ್ದಾರೆ ಹಾಗೂ ಅವರು ಸುಧಾರಣೆ ಕಂಡುಕೊಳ್ಳಲಿದ್ದಾರೆ ಎಂದು ಸಂಜು ಉಲ್ಲೇಖಿಸಿದರು.
"ಜಸ್ಪ್ರೀತ್ ಬುಮ್ರಾ ಅವರ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಇವರು ಒಂದು ತಲೆ ಮಾರಿನ ಶ್ರೇಷ್ಠ ಬೌಲರ್ ಎಂದು ಹೇಳಬಹುದು ಹಾಗೂ ಅವರನ್ನು ಹೊಂದಿರುವ ನಾವು ನಿಜಕ್ಕೂ ಅದೃಷ್ಟ ಮಾಡಿದ್ದೇವೆ. ಇದರ ಜೊತೆಗೆ ನಾವು ಕೆಲ ಅದ್ಭುತ ಪ್ರತಿಭೆಯುಳ್ಳ ಬೌಲರ್ಗಳನ್ನು ಹೊಂದಿದ್ದೇವೆ. ಅರ್ಷದೀಪ್ ಸಿಂಗ್ ಅದ್ಭುತ ಕೆಲಸವನ್ನು ಮಾಡುತ್ತಿದ್ದಾರೆ ಹಾಗೂ ಕಳೆದ ಕೆಲ ಪಂದ್ಯಗಳಲ್ಲಿ ಪ್ರಿನ್ಸ್ ಯಾದವ್ ಅತ್ಯುತ್ತಮವಾಗಿ ಬೌಲ್ ಮಾಡುತ್ತಿದ್ದಾರೆ. ನಮ್ಮಲ್ಲಿ ಕೆಲ ಪ್ರತಿಭಾವಂತ ಆಟಗಾರರಿದ್ದರೆಂದು ನನಗೆ ಅನಿಸುತ್ತಿದೆ. ಅವರು ನಮ್ಮ ಜೊತೆ ಜಾಸ್ತಿ ಪಂದ್ಯಗಳಲ್ಲಿ ಆಡಿದರೆ, ನಾವು ಅವರನ್ನು ಹೆಚ್ಚು ಬೆಂಬಲಿಸಿದರೆ, ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮರಾಗುತ್ತಾರೆ," ಎಂದು ಸಂಜು ಸ್ಯಾಮ್ಸನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.