ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

2028ರ ಟಿ20 ವಿಶ್ವಕಪ್‌ಗೆ ನೇರ ಅರ್ಹತೆ ಪಡೆದ 12 ತಂಡಗಳ ಪಟ್ಟಿ ಪ್ರಕಟಿಸಿದ ಐಸಿಸಿ

T20 World Cup 2028: ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ಸೇರಿದಂತೆ ಇತರ ಮೂರು ತಂಡಗಳು ಐಸಿಸಿ ಶ್ರೇಯಾಂಕದ ಆಧಾರದ ಮೇಲೆ ತಮ್ಮ ಸ್ಥಾನಗಳನ್ನು ಪಡೆದುಕೊಂಡಿವೆ. ಉಳಿದ ಎಂಟು ತಂಡಗಳನ್ನು ಮುಂದಿನ ಎರಡು ವರ್ಷಗಳಲ್ಲಿ ನಡೆಯುವ ಅರ್ಹತಾ ಪಂದ್ಯಗಳ ಮೂಲಕ ನಿರ್ಧರಿಸಲಾಗುತ್ತದೆ.

Team india

ದುಬೈ, ಫೆ.19: 2026ರ ಟಿ20 ವಿಶ್ವಕಪ್‌ನ ಸೂಪರ್ ಎಂಟು ಹಂತಗಳು ಅಂತಿಮಗೊಂಡಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮುಂದಿನ ಆವೃತ್ತಿಗೆ ನೇರ ಅರ್ಹತೆ ಪಡೆದ ತಂಡಗಳನ್ನು ದೃಢಪಡಿಸಿದೆ. ಸಹ-ಆತಿಥೇಯರಾಗಿ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ 2028 ರ ಟಿ20 ವಿಶ್ವಕಪ್‌(T20 World Cup 2028)ಗೆ ಮೊದಲೇ ಅರ್ಹತೆ ಪಡೆದಿತ್ತು. ಮತ್ತು ಈಗ, ಭಾರತ, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು 2026 ರ ಆವೃತ್ತಿಯ ಸೂಪರ್ ಎಂಟು ಹಂತಗಳಿಗೆ ಅರ್ಹತೆ ಪಡೆಯುವ ಮೂಲಕ ಅರ್ಹತೆ ಪಡೆದಿದೆ. ಒಟ್ಟು 12 ತಂಡಗಳು ನೇರ ಅರ್ಹತೆ ಪಡೆದಿವೆ.

ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ಸೇರಿದಂತೆ ಇತರ ಮೂರು ತಂಡಗಳು ಐಸಿಸಿ ಶ್ರೇಯಾಂಕದ ಆಧಾರದ ಮೇಲೆ ತಮ್ಮ ಸ್ಥಾನಗಳನ್ನು ಪಡೆದುಕೊಂಡಿವೆ. ಉಳಿದ ಎಂಟು ತಂಡಗಳನ್ನು ಮುಂದಿನ ಎರಡು ವರ್ಷಗಳಲ್ಲಿ ನಡೆಯುವ ಅರ್ಹತಾ ಪಂದ್ಯಗಳ ಮೂಲಕ ನಿರ್ಧರಿಸಲಾಗುತ್ತದೆ.

"ಮುಂದಿನ ಟಿ20ಗೆ 12 ತಂಡಗಳು ಅರ್ಹತೆ ಪಡೆದಿವೆ. ಹಾಲಿ ಆವೃತ್ತಿಯ ಫೈನಲ್‌ ಪಂದ್ಯ ಬಳಿಕ ಇದನ್ನೂ ಅಧಿಕೃತವಾಗಿ ಘೋಷಿಸಲಾಗುತ್ತದೆ. ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳು ಪ್ರಸ್ತುತ ಶ್ರೇಯಾಂಕದ ಮೇಲೆ ಪರಿಣಾಮ ಬೀರುವುದಿಲ್ಲ" ಎಂದು ಐಸಿಸಿ ದೃಢಪಡಿಸಿದೆ.

2028ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ 12 ತಂಡಗಳು

ಭಾರತ- ಸೂಪರ್-8

ಆಸ್ಟ್ರೇಲಿಯಾ- ಸಹ-ಆತಿಥ್ಯ

ನ್ಯೂಜಿಲೆಂಡ್- ಸೂಪರ್8/ಸಹ-ಆತಿಥ್ಯ

ದಕ್ಷಿಣ ಆಫ್ರಿಕಾ- ಸೂಪರ್ 8

ಜಿಂಬಾಬ್ವೆ- ಸೂಪರ್ 8

ವೆಸ್ಟ್ ಇಂಡೀಸ್- ಸೂಪರ್ 8

ಇಂಗ್ಲೆಂಡ್- ಸೂಪರ್ 8

ಪಾಕಿಸ್ತಾನ- ಸೂಪರ್ 8

ಶ್ರೀಲಂಕಾ- ಸೂಪರ್ 8

ಬಾಂಗ್ಲಾದೇಶ- ಐಸಿಸಿ ಟಿ20ಐ ಶ್ರೇಯಾಂಕ

ಅಫ್ಘಾನಿಸ್ತಾನ- ಐಸಿಸಿ ಟಿ20ಐ ಶ್ರೇಯಾಂಕ

ಐರ್ಲೆಂಡ್ ಐಸಿಸಿ- ಟಿ20ಐ ಶ್ರೇಯಾಂಕ

ಫೆಬ್ರವರಿ 21 ಸೂಪರ್-‌8 ಪಂದ್ಯ ಆರಂಭ

ಪಾಕಿಸ್ತಾನ ತಂಡವು ನಮೀಬಿಯಾ ವಿರುದ್ಧ 102 ರನ್‌ಗಳ ಅಂತರದ ಗೆಲುವು ಸಾಧಿಸುವ ಮೂಲಕ ಪ್ರಸಕ್ತ ಆವೃತ್ತಿಯ ಸೂಪರ್ 8ನಲ್ಲಿ ಭಾಗವಹಿಸುವ ಎಲ್ಲಾ ತಂಡಗಳನ್ನು ದೃಢಪಡಿಸಿದೆ. ಸಲ್ಮಾನ್ ಅಘಾ ನೇತೃತ್ವದ ತಂಡವು ಬಿ ಗುಂಪಿನಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಜೊತೆಗೆ ಸ್ಥಾನ ಪಡೆದಿದ್ದರೆ, ಎ ಗುಂಪಿನಲ್ಲಿ ಭಾರತ, ವೆಸ್ಟ್ ಇಂಡೀಸ್, ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ.

IND vs NED: ಶಿವಂ ದುಬೆ ಅಬ್ಬರ, ನೆದರ್ಲೆಂಡ್ಸ್‌ ವಿರುದ್ಧವೂ ಗೆದ್ದು ಬೀಗಿದ ಭಾರತ ತಂಡ!

ಸೂಪರ್ 8 ಪಂದ್ಯಗಳು ಫೆಬ್ರವರಿ 21 ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಲಿದ್ದು, ಮರುದಿನ ಭಾರತ ತಂಡವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.

ಪ್ರತಿ ಗುಂಪಿನಿಂದ ಹೆಚ್ಚು ಅಂಕಗಳನ್ನು ಗಳಿಸುವ ಎರಡು ತಂಡಗಳು ಕ್ರಮವಾಗಿ ಮಾರ್ಚ್ 4 ಮತ್ತು 5 ರಂದು ನಡೆಯಲಿರುವ ಸೆಮಿಫೈನಲ್‌ಗೆ ಮುನ್ನಡೆಯುತ್ತವೆ. ಎರಡನೇ ಸೆಮಿಫೈನಲ್ ಪಂದ್ಯವನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು, ಆದರೆ ಮೊದಲ ಸೆಮಿಫೈನಲ್ ಸ್ಥಳವನ್ನು ಪಾಕಿಸ್ತಾನದ ಅರ್ಹತೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಪಾಕ್‌ ಅರ್ಹತೆ ಪಡೆದರೆ, ಪಂದ್ಯವನ್ನು ಕೊಲಂಬೊದಲ್ಲಿ ಅಥವಾ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಆಯೋಜಿಸಲಾಗುತ್ತದೆ.