ʻಯುವರಾಜ್ ಸಿಂಗ್‌ರ 6 ಸಿಕ್ಸರ್ ನನ್ನ ವೃತ್ತಿ ಜೀವನದ 5 ವರ್ಷಗಳನ್ನು ಉಳಿಸಿದೆʼ: ಸ್ಟುವರ್ಟ್ ಬ್ರಾಡ್!
2007ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ತನ್ನ ಓವರ್‌ಗೆ ಆರು ಸಿಕ್ಸರ್ ಬಾರಿಸಿದ್ದ ಘಟನೆಯನ್ನು ಇಂಗ್ಲೆಂಡ್ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಸ್ಮರಿಸಿಕೊಂಡಿದ್ದಾರೆ. ಈ ಘಟನೆಯಿಂದ ನನ್ನ ಕ್ರಿಕೆಟ್ ವೃತ್ತಿ ಜೀವನದ ಐದು ವರ್ಷಗಳು ಉಳಿದಿವೆ ಎಂದು ಹೇಳಿದ್ದಾರೆ.
ಯುವರಾಜ್ ಸಿಂಗ್‌ಗೆ 6 ಸಿಕ್ಸರ್ ಕೊಟ್ಟ ಬಗ್ಗೆ ನೆನೆದ ಬ್ರಾಡ್. -
ನವದೆಹಲಿ: ಇಂಗ್ಲೆಂಡ್ ಕ್ರಿಕೆಟ್ ತಂಡದ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳ ಸಾಲಿನಲ್ಲಿ ಸ್ಟುವರ್ಟ್ ಬ್ರಾಡ್ (Stuart Broad) ಕೂಡ ಒಬ್ಬರು. ಇವರು 2023ರಲ್ಲಿ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅಂದ ಹಾಗೆ ಸ್ಟುವರ್ಟ್ ಬ್ರಾಡ್ ಅವರು 2007ರ ಐಸಿಸಿ ಟಿ20 ವಿಶ್ವಕಪ್ (T20 World Cup 2007) ಟೂರ್ನಿಯಲ್ಲಿ ಒಂದೇ ಓವರ್‌ನಲ್ಲಿ ಯುವರಾಜ್ ಸಿಂಗ್ (Yuvraj Singh) ಆರು ಸಿಕ್ಸರ್ ಹೊಡೆಸಿಕೊಂಡಿದ್ದರು. ಈ ಘಟನೆಯನ್ನು ಬ್ರಾಡ್ ಇದೀಗ ಸ್ಮರಿಸಿಕೊಂಡಿದ್ದಾರೆ. ಈ ಘಟನೆಯಿಂದ ನನ್ನ ವೃತ್ತಿ ಜೀವನದ 5 ವರ್ಷಗಳು ಉಳಿದಿವೆ ಎಂದು ಹೇಳಿದ್ದಾರೆ.
2007ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ನಡೆದಿತ್ತು. ಈ ವೇಳೆ ಡರ್ಬನ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಪಂದ್ಯ ನಡೆದಿತ್ತು. ಯುವರಾಜ್ ಸಿಂಗ್, ಸ್ಟುವರ್ಟ್ ಬ್ರಾಡ್ ಅವರ ಏಕೈಕ ಓವರ್‌ನ ಎಲ್ಲಾ ಆರು ಎಸೆತಗಳಲ್ಲಿ ಆರು ಸಿಕ್ಸರ್ ಬಾರಿಸಿದ್ದರು. ಆ ಮೂಲಕ ಬ್ರಾಡ್ ತಮ್ಮ ವೃತ್ತಿ ಜೀವನದ ಆರಂಭದಲ್ಲಿಯೇ ಭಾರಿ ಹಿನ್ನಡೆ ಅನುಭವಿಸಿದ್ದರು. ಈ ಬಗ್ಗೆ ಅವರು ಮಾತನಾಡಿದ್ದಾರೆ.
ಕೆಕೆಆರ್‌ನಿಂದ ರಿಲೀಸ್ ಆದ 9 ಕೋಟಿ ರು ಬೆಲೆಯ ಮುಸ್ತಾಫಿಝುರ್ ರೆಹಮಾನ್‌ಗೆ ಪರಿಹಾರ ಸಿಗುತ್ತಾ?
ಕ್ರಿಕೆಟ್ ವೃತ್ತಿ ಜೀವನವನ್ನು ಮುಗಿಸಿದ ಬಳಿಕ ಬ್ರಾಡ್ ಇದೀಗ ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವೇಳೆ ಅವರು ಅಂದಿನ ಘಟನೆಯನ್ನು ನೆನೆದುಕೊಂಡಿದ್ದಾರೆ. ಆ ದಿನ ಮುಂದೆ ನನ್ನನ್ನು ಉತ್ತಮ ಆಟಗಾರನನ್ನಾಗಿ ಮಾಡಿತು ಎಂದು ಹೇಳಿಕೊಂಡಿದ್ದಾರೆ. ಅಂದು ಸಿಕ್ಸರ್ ಹೊಡೆಸಿಕೊಂಡಿದ್ದರ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.
"ಅದು ಎಂದಿಗೂ ಸಂಭವಿಸದಿರಲಿ ಎಂದು ನಾನು ಬಯಸುತ್ತೇನೆ, ಆದರೆ ವಿಚಿತ್ರವೆಂದರೆ, ಅದು ಒಂದು ಅರ್ಥದಲ್ಲಿ ನನ್ನಿಂದಲೇ ಸೃಷ್ಟಿಯಾಗಿತ್ತು. ಕ್ರೀಡೆಯಿಂದ ಬಂದ ಆ ಭಯಾನಕ ಮಾತು ನಿಮಗೆ ತಿಳಿದಿದೆ, ಸಕಾರಾತ್ಮಕ ಅಂಶಗಳನ್ನು ತೆಗೆದುಕೊಳ್ಳಿ, ಆ ಮಾತನ್ನು ನಾನು ದ್ವೇಷಿಸುತ್ತೇನೆ. ಆದರೆ ಆ ಕ್ಷಣದಲ್ಲಿ, ಸಕಾರಾತ್ಮಕ ಅಂಶಗಳು ಏನೆಂದರೆ, ನಾವು ಆಗಲೇ ವಿಶ್ವಕಪ್ ಟೂರ್ನಿಯಿಂದ ಹೊರ ನಡೆದಿದ್ದೆವು. ಮರುದಿನ ಬೆಳಿಗ್ಗೆ ಹೊರಡಲು ನಮ್ಮ ವಿಮಾನಗಳನ್ನು ಈಗಾಗಲೇ ಬುಕ್ ಮಾಡಲಾಗಿತ್ತು. ಆ ಸಮಯದಲ್ಲಿ ನನಗೆ 19 ಅಥವಾ 20 ವರ್ಷ ವಯಸ್ಸಾಗಿತ್ತು, ದಕ್ಷಿಣ ಆಫ್ರಿಕಾ ನಮಗಿಂತ ಮೊದಲು ಆಡಿತ್ತು, ಅದೇ ಮೈದಾನದಲ್ಲಿ ಅದು ಡಬಲ್ ಹೆಡರ್ ಆಗಿತ್ತು. ನಾನು ಹಿಂತಿರುಗಿ ನೋಡಿದಾಗ, ನನ್ನಲ್ಲಿ ಯಾವುದೇ ತಯಾರಿ ಇರಲಿಲ್ಲ," ಎಂದು ಸ್ಟುವರ್ಟ್ ಬ್ರಾಡ್, ಮ್ಯಾಥ್ಯೂ ಹೇಡನ್ ಅವರ ಆಲ್ ಓವರ್ ಬಾರ್ ದಿ ಕ್ರಿಕೆಟ್ ಪಾಡ್‌ಕ್ಯಾಸ್ಟ್‌ನೊಂದಿಗಿನ ಸಂವಾದದಲ್ಲಿ ಹೇಳಿಕೊಂಡಿದ್ದಾರೆ.
6⃣6⃣6⃣6⃣6⃣6⃣
— OneCricket (@OneCricketApp) September 19, 2023
Flashback to this day in 2007: Yuvraj Singh smashed six sixes off Stuart Broad in an over, becoming the first to achieve this milestone! 😮💨🔥#YuvrajSingh #StuartBroad #CricketTwitterpic.twitter.com/xO1yJoJORN
"ಪಂದ್ಯಗಳ ನಡುವೆ ಸಿದ್ಧರಾಗಲು ನಮಗೆ 20 ನಿಮಿಷಗಳ ಸಮಯವಿತ್ತು, ಒಂದು ತುದಿಯನ್ನು ಗುರುತಿಸಲು ಮಾತ್ರ ಸಮಯವಿತ್ತು ಮತ್ತು ಅದು ಇನ್ನೊಂದು ತುದಿಯಾಗಿತ್ತು. ಆ ಓವರ್ ಅನ್ನು ಬೌಲ್ ಮಾಡಲು ಕೇಳಿದಾಗ ನಾನು ತುಳಿತಕ್ಕೊಳಗಾದೆ, ನಾನು ಎಲ್ಲಿದ್ದೇನೆ ಎಂದು ಯೋಚಿಸುತ್ತಿದ್ದೆ. ನನ್ನ ಮೈದಾನ ಯಾವುದು, ನಾನು ಯಾವ ಎಸೆತವನ್ನು ಬೌಲ್ ಮಾಡಲಿದ್ದೇನೆ ಎಂಬುದರ ಹೊರತಾಗಿ ಇತರ ವಿಷಯಗಳ ಬಗ್ಗೆ ಯೋಚಿಸುತ್ತಿದ್ದೇನೆ. ವಿಶ್ವಕಪ್ ಪಂದ್ಯದಲ್ಲಿ ರನ್-ಅಪ್‌ಗಳ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಅದರ ಬಗ್ಗೆ ಯೋಚಿಸಿದಾಗ, ನನ್ನ ತಯಾರಿ ತುಂಬಾ ಕಳಪೆಯಾಗಿತ್ತು, ನಾನು ಯಾವ ಚೆಂಡನ್ನು ಬೌಲ್ ಮಾಡಲಿದ್ದೇನೆ ಎಂಬುದರ ಬಗ್ಗೆ ನಾನು ಏನನ್ನೂ ಹೇಳಿರಲಿಲ್ಲ. ಅಂತರರಾಷ್ಟ್ರೀಯ ಪಂದ್ಯಕ್ಕಾಗಿ ನಾನು ಸರಿಯಾದ ಹೆಡ್‌ಸ್ಪೇಸ್‌ನಲ್ಲಿ ನನ್ನನ್ನು ಪಡೆಯಲಿಲ್ಲ," ಎಂದು ಸ್ಟುವರ್ಟ್ ಬ್ರಾಡ್ ಹೇಳಿದರು.