ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಯಶಸ್ವಿ ಜೈಸ್ವಾಲ್‌ಗೆ ಒಡಿಐ, ಟಿ20ಐ ತಂಡದಲ್ಲಿ ಅನ್ಯಾಯವಾಗುತ್ತಿದೆ ಎಂದ ಆಕಾಶ್‌ ಚೋಪ್ರಾ!

ಭಾರತ ಏಕದಿನ ಹಾಗೂ ಟಿ20ಐ ತಂಡದಲ್ಲಿ ಯಶಸ್ವಿ ಜೈಸ್ವಾಲ್‌ಗೆ ಸ್ಥಾನ ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಹಾಗೂ ಕ್ರಿಕೆಟ್‌ ನಿರೂಪಕ ಆಕಾಶ್‌ ಚೋಪ್ರಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆಯನ್ನು ಹೊಂದಿರುವ ಜೈಸ್ವಾಲ್‌, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿಯೂ ಅದ್ಭುತ ಸಾಮರ್ಥ್ಯವನ್ನು ಹೊಂದಿದ್ದಾರೆಂದು ತಿಳಿಸಿದ್ದಾರೆ.

ಯಶಸ್ವಿ ಜೈಸ್ವಾಲ್‌ಗೆ ಅನ್ಯಾಯವಾಗುತ್ತಿದೆ ಎಂದ ಆಕಾಶ್‌ ಚೋಪ್ರಾ!

ಯಶಸ್ವಿ ಜೈಸ್ವಾಲ್‌ಗೆ ಅನ್ಯಾಯವಾಗುತ್ತಿದೆ ಎಂದ ಆಕಾಶ್‌ ಚೋಪ್ರಾ. -

Profile Ramesh Kote Sep 18, 2025 9:20 PM

ನವದೆಹಲಿ: ಭಾರತ (Indian Cricket Team) ಒಡಿಐ ಹಾಗೂ ಟಿ20ಐ ತಂಡದಲ್ಲಿ ಎಡಗೈ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ (Yashasvi jaiswal) ಅವರುಗೆ ಸ್ಥಾನ ನೀಡದ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ನಿರೂಪಕ ಆಕಾಶ್‌ ಚೋಪ್ರಾ (Aakash Chopra) ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿರುವ ಯಶಸ್ವಿ ಜೈಸ್ವಾಲ್‌ಗೆ ಎಲ್ಲಾ ಸ್ವರೂಪದಲ್ಲಿಯೂ ಆಡುವ ಸಾಮರ್ಥ್ಯವಿದೆ. ಆದರೆ, ಅವರಿಗೆ ವೈಟ್‌ಬಾಲ್‌ ತಂಡದಲ್ಲಿ ಸ್ಥಾನವನ್ನು ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಮಾಜಿ ಆರಂಭಿಕ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ನಡೆಯುತ್ತಿರುವ 2025ರ ಏಷ್ಯಾ ಕಪ್‌ ಟೂರ್ನಿಯ ಭಾರತ ತಂಡದಲ್ಲಿ ಯಶಸ್ವಿ ಜೈಸ್ವಾಲ್‌ಗೆ ಅವಕಾಶವನ್ನು ನೀಡಲಾಗಿಲ್ಲ. ಆದರೆ, ಅವರನ್ನು ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಯಶಸ್ವಿ ಜೈಸ್ವಾಲ್‌ ಬದಲು ಶುಭಮನ್‌ ಗಿಲ್‌ ಅವರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೆ ನಾಯಕ ಸೂರ್ಯಕುಮಾರ್‌ ಯಾದವ್‌ಗೆ ಉಪ ನಾಯಕನಾಗಿ ಶುಭಮನ್‌ ಗಿಲ್‌ ಅವರನ್ನು ಆಯ್ಕೆ ಮಾಡಲಾಗಿದೆ.

ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ಯಶಸ್ವಿ ಜೈಸ್ವಾಲ್‌ ಅವರ ವೈಟ್‌ಬಾಲ್‌ ಕ್ರಿಕೆಟ್‌ ಭವಿಷ್ಯದ ಬಗ್ಗೆ ಮಾತನಾಡಿದರು. ಏಕದಿನ ತಂಡದಲ್ಲಿ ರೋಹಿತ್‌ ಶರ್ಮಾ ಜೊತೆಗೆ ಗಿಲ್‌ ಇನಿಂಗ್ಸ್‌ ಆರಂಭಿಸುತ್ತಿದ್ದಾರೆ. ಮತ್ತೊಂದೆಡೆ ಅಭಿಷೇಕ್‌ ಶರ್ಮಾ ಅವರು ಏಕದಿನ ಮತ್ತು ಟಿ20ಐ ಸ್ವರೂಪಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿದ್ದಾರೆ.

Asia Cup 2025: ಈ ಬಾರಿ ಪ್ರಶಸ್ತಿ ಗೆಲ್ಲುವ ತಮ್ಮ ನೆಚ್ಚಿನ ತಂಡವನ್ನು ಆರಿಸಿದ ಜೋನಾಥನ್‌ ಟ್ರಾಟ್!

"ಇದು ತುಂಬಾ ಆಸಕ್ತದಾಯಕ ಪ್ರಶ್ನೆಯಾಗಿದೆ, ಏಕೆಂದರೆ ಯಶಸ್ವಿ ಜೈಸ್ವಾಲ್‌ ಅತ್ಯುತ್ತಮ ಆಟಗಾರ. ನೀವು ಜೈಸ್ವಾಲ್‌ ಅವರನ್ನು ನೋಡಿದರೆ, ಅವರು ಮೂರೂ ಸ್ವರೂಪದ ಆಟಗಾರನಾಗಿ ಕಾಣುತ್ತಾರೆ. ಆದರೆ ಇದೀಗ ಅವರು ಕೇವಲ ಒಂದೇ ಒಂದು ಸ್ವರೂಪದಲ್ಲಿ ಆಡುತ್ತಿದ್ದಾರೆ ಹಾಗೂ ಇದು ಹಾಸ್ಯಸ್ಪದದ ರೀತಿ ಕಾಣುತ್ತಿದೆ. ನೋಡಲು ಇದು ಅನ್ಯಾಯದ ರೀತಿ ಭಾಸವಾಗುತ್ತಿದೆ. ಏಕೆಂದರೆ ಅವರು ಮೂರೂ ಸ್ವರೂಪದಲ್ಲಿ ಆಡಬೇಕು," ಎಂದು ಆಕಾಶ್‌ ಚೋಪ್ರಾ ತಿಳಿಸಿದ್ದಾರೆ.

ಮುಂಬರುವ ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರೆ, ಅವರು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಬಹುದು ಎಂದು ಮಾಜಿ ಟೆಸ್ಟ್‌ ಆರಂಭಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Asia Cup 2025: ಪಾಕಿಸ್ತಾನದ ಬಳಿ ಕ್ಷಮೆಯಾಚಿಸಿದ ಮ್ಯಾಚ್‌ ರೆಫರಿ ಆಂಡಿ ಪೈಕ್ರಾಫ್ಟ್!

"ಇಲ್ಲಿ ನಿಜ ಏನೆಂದರೆ, ಅವರು ವೆಸ್ಟ್‌ ಇಂಡೀಸ್‌ ವಿರುದ್ದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದ್ದಾರೆ. ಈ ಸರಣಿಯಲ್ಲಿ ಅವರು ರನ್‌ಗಳನ್ನು ಕಲೆ ಹಾಕಲಿದ್ದಾರೆಂಬ ಬಗ್ಗೆ ನನಗೆ ಖಚಿತವಿದೆ ಏಕೆಂದರೆ ಅವರು ಅದ್ಭುತ ಆಟಗಾರ. ಆ ಮೂಲಕ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಆಡಲು ಅವಕಾಶವನ್ನು ಪಡೆಯಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾದಾಗ, ಅವರು ತಂಡದಲ್ಲಿ ಇರಲಿದ್ದಾರೆ," ಎಂದು ಆಕಾಶ್‌ ಚೋಪ್ರಾ ಭವಿಷ್ಯ ನುಡಿದಿದ್ದಾರೆ.

Asia Cup 2025: ಅಂಪೈರ್‌ ತಲೆಗೆ ಚೆಂಡೆಸೆದು ಗಾಯಗೊಳಿಸಿದ ಪಾಕ್‌ ಆಟಗಾರ; ವಿಡಿಯೊ ವೈರಲ್‌

ಕಳೆದ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಭಾರತ ತಂಡದಲ್ಲಿ ಮೊದಲಿಗೆ ಯಶಸ್ವಿ ಜೈಸ್ವಾಲ್‌ಗೆ ಅವಕಾಶವನ್ನು ನೀಡಲಾಗಿತ್ತು. ಆದರೆ, ಯುಎಇ ಕಂಡೀಷನ್ಸ್‌ ಸ್ಪಿನ್‌ ಸ್ನೇಹಿಯಾಗಿದ್ದರಿಂದ ಹೆಚ್ಚುವರಿ ಸ್ಪಿನ್ನರ್‌ ಅನ್ನು ಆಡಿಸುವ ಉದ್ದೇಶದಿಂದ ಬಿಸಿಸಿಐ ಆಯ್ಕೆದಾರರು ಯಶಸ್ವಿ ಜೈಸ್ವಾಲ್‌ ಅವರ ಬದಲು ವರುಣ್‌ ಚಕ್ರವರ್ತಿಗೆ ಅವಕಾಶವನ್ನು ಕಲ್ಪಿಸಿದ್ದರು.