ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಈ ಬಾರಿ ಪ್ರಶಸ್ತಿ ಗೆಲ್ಲುವ ತಮ್ಮ ನೆಚ್ಚಿನ ತಂಡವನ್ನು ಆರಿಸಿದ ಜೋನಾಥನ್‌ ಟ್ರಾಟ್!

ಪ್ರಸ್ತುತ ನಡೆಯುತ್ತಿರುವ 2025ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿರುವ ಭಾರತ ತಂಡವನ್ನು ಅಫ್ಘಾನಸ್ತಾನ ತಂಡದ ಹೆಡ್‌ ಕೋಚ್‌ ಜೋನಾಥನ್‌ ಟ್ರಾಟ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅಲ್ಲದೆ ಏಷ್ಯಾ ಕಪ್‌ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತ ಕೂಡ ಒಂದು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಭಾರತ ಏಷ್ಯಾ ಕಪ್‌ ಗೆಲ್ಲುವ ನೆಚ್ಚಿನ ತಂಡ: ಜೋನಾಥನ್‌ ಟ್ರಾಟ್‌!

ಭಾರತ ತಂಡವನ್ನು ಶ್ಲಾಘಿಸಿದ ಜೋನಾಥನ್‌ ಟ್ರಾಟ್‌. -

Profile Ramesh Kote Sep 18, 2025 7:25 PM

ನವದೆಹಲಿ: ಪ್ರಸ್ತುತ ಸಾಗುತ್ತಿರುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿರುವ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡವನ್ನು (India) ಅಫ್ಘಾನಸ್ತಾನ ತಂಡದ ಹೆಡ್‌ ಕೋಚ್‌ ಜೋನಾಥನ್‌ ಟ್ರಾಟ್‌ (Jonathan Trott) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಈ ಬಾರಿ ಏಷ್ಯಾ ಕಪ್‌ ಗಲ್ಲುವ ನೆಚ್ಚಿನ ತಂಡಗಳನ್ನು ಭಾರತ ಮುಂಚೂಣಿಯಲ್ಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ ತಂಡ ಆಡಿದ ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದು ಟೂರ್ನಿಯ ಸೂಪರ್‌-4ರ ಹಂತಕ್ಕೆ ಪ್ರವೇಶ ಮಾಡಿದೆ.

ಎಎನ್‌ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಜೋನಾಥನ್‌ ಟ್ರಾಟ್‌, "ಈಗಿನ ದಿನಗಳನ್ನು ಭಾರತ ತಂಡ, ಪ್ರತಿಯೊಂದು ತಂಡವನ್ನು ಸೋಲಿಸುತ್ತಿದೆ ಹಾಗೂ ಭಾರತ ಅತ್ಯುತ್ತಮ ತಂಡವಾಗಿದೆ. ಏಷ್ಯಾ ಕಪ್‌ ಟೂರ್ನಿ ನಡೆಯುತ್ತಿರುವ ಈ ಕಂಡೀಷನ್ಸ್‌ನಲ್ಲಿ ಭಾರತ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಹೇಗೆ ಆಡಿತ್ತು ಎಂಬುದನ್ನು ನೋಡಿದ್ದೇವೆ. ಏಷ್ಯಾ ಕಪ್‌ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ಭಾರತ ಕೂಡ ಒಂದು ಎಂದು ಹೇಳಿಲ್ಲವಾದರೆ, ಅದು ನಿಜಕ್ಕೂ ದಡ್ಡತನ," ಎಂದು ತಿಳಿಸಿದ್ದಾರೆ.

Asia Cup 2025: ಅಂಪೈರ್‌ ತಲೆಗೆ ಚೆಂಡೆಸೆದು ಗಾಯಗೊಳಿಸಿದ ಪಾಕ್‌ ಆಟಗಾರ; ವಿಡಿಯೊ ವೈರಲ್‌

ಭಾರತ ತಂಡ ತನ್ನ ಆರಂಭಿಕ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿತ್ತು. ಯುಎಇ ವಿರುದ್ದ 9 ವಿಕೆಟ್‌ಗಳಿಂದ ಗೆದ್ದಿದ್ದ ಟೀಮ್‌ ಇಂಡಿಯಾ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ಆ ಮೂಲಕ ಸೂಪರ್‌-4ಕ್ಕೆ ಲಗ್ಗೆ ಇಟ್ಟಿತ್ತು. ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಅವರನ್ನು ಇದೇ ವೇಳೆ ಟ್ರಾಟ್‌ ಶ್ಲಾಘಿಸಿದ್ದಾರೆ. ನಾಯಕನಾಗಿ ಸೂರ್ಯ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದಾರೆಂದು ಆಫ್ಘನ್‌ ಕೋಚ್‌ ತಿಳಿಸಿದ್ದಾರೆ.



"ಸೂರ್ಯಕುಮಾರ್‌ ಯಾದವ್‌ ಅವರು ಅದ್ಭುತ ಆಟಗಾರ ಹಾಗೂ ಇದೀಗ ಅದ್ಭುತ ನಾಯಕ ಕೂಡ. ಬ್ಯಾಟ್ಸ್‌ಮನ್‌ ಜೊತೆಗೆ ನಾಯಕನಾಗಿ ಅವರ ಮೇಲೆ ಹೆಚ್ಚುವರಿ ಜವಾಬ್ದಾರಿ ಇದೆ. ಇದನ್ನು ಅವರು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ," ಎಂದು ಇಂಗ್ಲೆಂಡ್‌ ಮಾಜಿ ಆಟಗಾರ ಗುಣಗಾನ ಮಾಡಿದ್ದಾರೆ.

Asia Cup 2025: ಭಾರತ vs ಪಾಕ್‌ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ಮತ್ತೆ ವೇದಿಕೆ ಸಜ್ಜು

ಭಾರತ ತಂಡವನ್ನು ಶ್ಲಾಘಿಸಿದ ಗುಲ್ಬದಿನ್‌ ನೈಬ್‌

ವಿಶ್ವ ಹಾಗೂ ಏಷ್ಯಾದಲ್ಲಿಯೇ ಭಾರತ ಅತ್ಯುತ್ತಮ ತಂಡ ಎಂದು ಅಫ್ಘಾನಿಸ್ತಾನ ತಂಡದ ಆಲ್‌ರೌಂಡರ್‌ ಗುಲ್ಬದ್ದಿನ್‌ ನೈಬ್‌ ಎಂದು ಶ್ಲಾಘಿಸಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸಂದರ್ಭದಲ್ಲಿ ಭಾರತೀಯ ಆಟಗಾರರ ಜೊತೆ ಡ್ರೆಸ್ಸಿಂಗ್‌ ರೂಂ ಹಂಚಿಕೊಂಡಿರುವುದು ಅದ್ಭುತ ಅನುಭವನ್ನು ನೀಡಿದೆ ಹಾಗೂ ಸಾಕಷ್ಟು ಕಲಿತಿದ್ದೇನೆ ಎಂದು ಆಫ್ಘನ ಆಲ್‌ರೌಂಡರ್‌ ತಿಳಿಸಿದ್ದಾರೆ.

"ವಿಶ್ವ ಹಾಗೂ ಏಷ್ಯಾದಲ್ಲಿಯೇ ಭಾರತ ಅತ್ಯುತ್ತಮ ತಂಡವಾಗಿದೆ. ನೀವು ಭಾರತೀಯ ಆಟಗಾರರಿಂದ ಸಾಕಷ್ಟು ಕಲಿಯಬಹುದು," ಎಂದು ಗುಲ್ಬದ್ದಿನ್‌ ನೈಬ್‌ ಶ್ಲಾಘಿಸಿದ್ದಾರೆ.

Asia Cup 2025: ಪಾಕಿಸ್ತಾನದ ಬಳಿ ಕ್ಷಮೆಯಾಚಿಸಿದ ಮ್ಯಾಚ್‌ ರೆಫರಿ ಆಂಡಿ ಪೈಕ್ರಾಫ್ಟ್!

ಬಾಂಗ್ಲಾ ಎದುರು ಸೋತಿದ್ದ ಆಫ್ಘನ್‌

ಮಂಗಳವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಸೋಲು ಅನುಭವಿಸಿತ್ತು. ಟಾಸ್ಕಿನ್‌ ಅಹ್ಮದ್‌ ಮತ್ತು ಮುಸ್ತಾಫಿಝುರ್‌ ರೆಹಮಾನ್‌ ಅವರ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಬಾಂಗ್ಲಾ ತಂಡ ಎಂಟು ರನ್‌ಗಳಿಂದ ಅಫ್ಘಾನಿಸ್ತಾನ ತಂಡವನ್ನು ಮಣಿಸಿತ್ತು. ಒಂದು ಗೆಲುವು ಹಾಗೂ ಒಂದು ಸೋಲಿನೊಂದಿಗೆ ಬಾಂಗ್ಲಾ ಬಿ ಗುಂಪಿನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಶ್ರೀಲಂಕಾ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನದಲ್ಲಿದೆ.