ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

INDA vs SAA: ಭಾರತ ಎ ತಂಡದ ಎರಡೂ ಇನಿಂಗ್ಸ್‌ಗಳಲ್ಲಿ ಡಕ್‌ಔಟ್‌ ಆದ ಅಭಿಮನ್ಯು ಈಶ್ವರನ್‌!

ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆಯನ್ನು ಹೊಂದಿರುವ ಅಭಿಮನ್ಯು ಈಶ್ವರನ್ ಬಹಳ ಸಮಯದಿಂದ ಭಾರತ ತಂಡದಲ್ಲಿದ್ದಾರೆ. ಆದರೆ ಅವರು ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿಲ್ಲ. ಅವರು ಇದೀಗ ಭಾರತ ಎ ಪರ ವೈಫಲ್ಯ ಅನುಭವಿಸಿದ್ದಾರೆ. ದಕ್ಷಿಣ ಆಫ್ರಿಕಾ ಎ ವಿರುದ್ಧ ಎರಡೂ ಇನಿಂಗ್ಸ್‌ಗಳಲ್ಲಿ ಡಕ್‌ಔಟ್‌ ಆಗುವ ಮೂಲಕ ನಿರಾಶೆ ಮೂಡಿಸಿದ್ದಾರೆ.

ದಕ್ಷಿಣ ಆಫ್ರಿಕಾ ಎ ವಿರುದ್ಧ ಎರಡೂ ಇನಿಂಗ್ಸ್‌ಗಳಲ್ಲಿ ಈಶ್ವರನ್‌ ಡಕ್‌ಔಟ್‌!

ದಕ್ಷಿಣ ಆಫ್ರಿಕಾ ಎ ವಿರುದ್ಧ ಎರಡೂ ಇನಿಂಗ್ಸ್‌ಗಳಲ್ಲಿ ಅಭಿಮನ್ಯು ಈಶ್ವರನ್‌ ಡಕ್‌ಔಟ್‌. -

Profile
Ramesh Kote Nov 7, 2025 7:44 PM

ಬೆಂಗಳೂರು: ಅಭಿಮನ್ಯು ಈಶ್ವರನ್ (Abhimanyu Eshwaran) 2013 ರಿಂದ ದೇಶಿ ಕ್ರಿಕೆಟ್ ಆಡುತ್ತಿದ್ದಾರೆ. ಬಂಗಾಳ ಪರ ಅವರ ಅದ್ಭುತ ರನ್ ಸ್ಕೋರಿಂಗ್ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ತಂದುಕೊಟ್ಟಿತು. ಹಲವು ವರ್ಷಗಳಿಂದ ಭಾರತ ತಂಡದ (India) ಭಾಗವಾಗಿದ್ದರೂ, ಈಶ್ವರನ್ ಇನ್ನೂ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿಲ್ಲ. ಅವರು ಭಾರತದ ಪರ ಕೊನೆಯ ಇಂಗ್ಲೆಂಡ್ ಪ್ರವಾಸದ ಭಾಗವಾಗಿದ್ದರು. ಆದರೆ ಅಲ್ಲಿ ಅವರಿಗೆ ಆಡಲು ಅವಕಾಶ ಲಭಿಸಿರಲಿಲ್ಲ. ನಂತರ ವೆಸ್ಟ್ ಇಂಡೀಸ್ ಸರಣಿಯಿಂದ ಕೈ ಬಿಡಲಾಗಿತ್ತು. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ (IND vs SA) ಅವರನ್ನು ಟೆಸ್ಟ್ ತಂಡದಿಂದ ಹೊರಗಿಡಲಾಗಿದೆ. ಈಶ್ವರನ್ ಪ್ರಸ್ತುತ ದಕ್ಷಿಣ ಆಫ್ರಿಕಾ ಎ ವಿರುದ್ಧ ಭಾರತ ಎ ತಂಡದಲ್ಲಿ ಆಡುತ್ತಿದ್ದಾರೆ.

ಅಭಿಮನ್ಯು ಈಶ್ವರನ್‌ಗೆ ಅವಕಾಶ ನೀಡದಿದ್ದಕ್ಕಾಗಿ ಭಾರತ ತಂಡದ ಟೀಮ್‌ ಮ್ಯಾನೇಜ್‌ಮೆಂಟ್‌ ಮತ್ತು ಆಯ್ಕೆದಾರರು ಪ್ರಶ್ನೆಗಳನ್ನು ಎದುರಿಸುತ್ತಿರುವಾಗ, ಈಶ್ವರನ್ ಅವರ ಬ್ಯಾಟ್ ಕೂಡ ಮೌನವಾಗಿದೆ. ದಕ್ಷಿಣ ಆಫ್ರಿಕಾ ಎ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಅವರು ಖಾತೆ ತೆರೆಯದೆ ಉಳಿದರು. ಪ್ರಥಮ ಇನಿಂಗ್ಸ್‌ನಲ್ಲಿ ವೇಗದ ಬೌಲರ್ ತ್ಸೆಪೊ ಮೊರೆಕಿ ಅವರಿಂದ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ದ್ವಿತೀಯ ಇನಿಂಗ್ಸ್‌ನಲ್ಲಿ ಈಶ್ವರನ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು, ಈ ಬಾರಿ ಒಕುಹ್ಲೆ ಕೆಲೆ ಅವರಿಗೆ ವಿಕೆಟ್‌ ಒಪ್ಪಿಸಿದರು.

IND vs AUS 5th T20I: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

ಭಾರತ ಎ ಪಂದ್ಯಗಳಲ್ಲಿ ಪ್ರಭಾವ ಬೀರಲು ವಿಫಲತೆ

ದೇಶಿ ಕ್ರಿಕೆಟ್‌ನಲ್ಲಿ ಅಭಿಮನ್ಯು ಈಶ್ವರನ್ ಉತ್ತಮ ದಾಖಲೆ ಹೊಂದಿದ್ದಾರೆ. ಆದಾಗ್ಯೂ, ಅವರು ಭಾರತ ಎ ಪಂದ್ಯಗಳಲ್ಲಿ ಗಮನಾರ್ಹ ಪರಿಣಾಮ ಬೀರಲು ಸಾಧ್ಯವಾಗಿಲ್ಲ. ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಮುನ್ನ ಅವರು ಭಾರತ ಎ ಪರ ಎರಡೂ ಪಂದ್ಯಗಳಲ್ಲಿ ನಾಲ್ಕು ಇನಿಂಗ್ಸ್‌ಗಳಲ್ಲಿ 36 ರನ್ ಗಳಿಸಿದರು. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಅವರು ಇಂಗ್ಲೆಂಡ್ ಲಯನ್ಸ್ ವಿರುದ್ಧದ ನಾಲ್ಕು ಇನಿಂಗ್ಸ್‌ಗಳಲ್ಲಿ 11, 80, 8 ಮತ್ತು 68 ರನ್ ಗಳಿಸಿದರು. ಆ ಸರಣಿಯಲ್ಲಿನ ಪಿಚ್‌ಗಳು ಬ್ಯಾಟ್ ಮಾಡಲು ಸುಲಭವಾಗಿದ್ದವು, ಆದರೆ ಅವರು ಶತಕ ಗಳಿಸುವಲ್ಲಿ ವಿಫಲರಾದರು. ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ಎ ವಿರುದ್ಧ ಅವರು ಭಾರತ ಎ ಪರ 44 ರನ್ ಗಳಿಸಿದರು. ದೇವದತ್ ಪಡಿಕ್ಕಲ್ ಮತ್ತು ಧ್ರುವ್ ಜುರೆಲ್ ಶತಕಗಳನ್ನು ಗಳಿಸಿದರೆ, ನಾರಾಯಣ್ ಜಗದೀಶನ್ ಮತ್ತು ಸಾಯಿ ಸುದರ್ಶನ್ ಅರ್ಧಶತಕಗಳನ್ನು ಗಳಿಸಿದ್ದರು.

IND vs AUS 4th T20: ಕಳಪೆ ಬ್ಯಾಟಿಂಗ್‌ಗೆ ಬೆಲೆ ತೆತ್ತ ಆಸ್ಟ್ರೇಲಿಯಾ; 4ನೇ ಟಿ20 ಗೆದ್ದ ಭಾರತ

ಪಂದ್ಯದ ಮೇಲೆ ಭಾರತ ಎ ತಂಡ ಹಿಡಿತ

ಧ್ರುವ್ ಜುರೆಲ್ ಅವರ ಶತಕದ ನೆರವಿನಿಂದ ಭಾರತ ಎ ತಂಡ ತನ್ನ ಪ್ರಥಮ ಇನಿಂ ಗ್ಸ್‌ನಲ್ಲಿ 255 ರನ್ ಗಳಿಸಿತು. ದಕ್ಷಿಣ ಆಫ್ರಿಕಾ ಎ ತಂಡವು 221 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ದಿನದ ಆಟದ ಅಂತ್ಯಕ್ಕೆ ಭಾರತ ಎ ತಂಡವು ತನ್ನ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 78 ರನ್ ಗಳಿಸಿತ್ತು. ಕೆಎಲ್ ರಾಹುಲ್ 26 ರನ್ ಗಳಿಸಿ ಬ್ಯಾಟ್‌ ಮಾಡುತ್ತಿದ್ದರು. ಭಾರತ ಎ ತಂಡವು ಈಗ 112 ರನ್‌ಗಳ ಮುನ್ನಡೆಯನ್ನು ಹೊಂದಿದೆ.