ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Jacob Bethel: ಆಸ್ಟ್ರೇಲಿಯಾ ವಿರುದ್ಧ ಐದನೇ ಟೆಸ್ಟ್‌ನಲ್ಲಿ ಭರ್ಜರಿ ಶತಕ ಬಾರಿಸಿದ ಆರ್‌ಸಿಬಿ ಆಟಗಾರ!

ಆಸ್ಟ್ರೇಲಿಯಾ ವಿರುದ್ಧ ಐದನೇ ಹಾಗೂ ಆಷಸ್‌ ಟ್ರೋಫಿ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಜಾಕೋಬ್‌ ಬೆಥೆಲ್‌ ತಮ್ಮ ಟೆಸ್ಟ್‌ ವೃತ್ತಿ ಜೀವನದ ಚೊಚ್ಚಲ ಶತಕವನ್ನು ಬಾರಿಸಿದರು. ಆ ಮೂಲಕ ಇಂಗ್ಲೆಂಡ್‌ ತಂಡವನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಗ್ಯಾಲರಿಯಲ್ಲಿದ್ದ ಜಾಕೋಬ್‌ ಬೆಥೆಲ್‌ ಅವರ ತಂದೆ ಭಾವುಕರಾದರು.

ಆಸ್ಟ್ರೇಲಿಯಾ ಎದುರು ಚೊಚ್ಚಲ ಟೆಸ್ಟ್‌ ಶತಕ ಬಾರಿಸಿದ ಜಾಕೋಬ್‌ ಬೆಥೆಲ್!

ಜಾಕೋಬ್‌ ಬೆಥೆಲ್‌ ಭರ್ಜರಿ ಶತಕ. -

Profile
Ramesh Kote Jan 7, 2026 11:11 PM

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಐದನೇ ಹಾಗೂ ಆಷಸ್‌ ಟ್ರೋಫಿ (Ashes) ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಜಾಕೋಬ್‌ ಬೆಥೆಲ್‌ (Jacob Bethel) ತಮ್ಮ ಟೆಸ್ಟ್‌ ವೃತ್ತಿ ಜೀವನದ ಚೊಚ್ಚಲ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಕಡಿಮೆ ಮೊತ್ತಕ್ಕೆ ಆಲ್‌ಔಟ್‌ ಆಗುತ್ತಿದ್ದ ಇಂಗ್ಲೆಂಡ್‌ ತಂಡಕ್ಕೆ ಆಸರೆಯಾದರು. ಆದರೆ, ತಮ್ಮ ಮಗ ಶತಕ ಸಿಡಿಸುತ್ತಿದ್ದ ಗ್ಯಾಲರಿಯಲ್ಲಿ ಕುಳಿತಿದ್ದ ತಂದೆ ಗ್ರಹಮ್‌ (Graham) ಭಾವುಕರಾಗಿ ಕಣ್ಣೀರಿಟ್ಟರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಜಾಕೋಬ್‌ ಬೆಥೆಲ್‌ ಶತಕದ ಹಿನ್ನೆಲೆಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೂ ಖುಷಿಯಾಗಿದೆ.

ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಮುಗಿದಿದ್ದು, ಇಂಗ್ಲೆಂಡ್ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 302 ರನ್ ಗಳಿಸಿದೆ ಹಾಗೂ ಇನ್ನೂ 119 ರನ್‌ಗಳ ಮುನ್ನಡೆಯಲ್ಲಿದೆ. ಇಂಗ್ಲೆಂಡ್ ಪ್ರಥಮ ಇನಿಂಗ್ಸ್‌ನಲ್ಲಿ 384 ರನ್ ಗಳಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಆಸ್ಟ್ರೇಲಿಯಾ ಮೊದಲ ಪ್ರಥಮ ಇನಿಂಗ್ಸ್‌ನಲ್ಲಿ 567 ರನ್ ಗಳಿಸಿತ್ತು. ಈ ಟೆಸ್ಟ್ ಇಂಗ್ಲೆಂಡ್‌ನ ಯುವ ಆಟಗಾರ ಜಾಕೋಬ್ ಬೆಥೆಲ್‌ಗೆ ಸ್ಮರಣೀಯವಾಗಿತ್ತು. ಸಿಡ್ನಿ ಟೆಸ್ಟ್‌ನಲ್ಲಿ ಬೆಥೆಲ್ ತಮ್ಮ ವೃತ್ತಿಜೀವನದ ಮೊದಲ ಟೆಸ್ಟ್ ಶತಕ ಗಳಿಸಿದರು.

2026ರ ಐಸಿಸಿ ಟಿ20 ವಿಶ್ವಕಪ್‌ಗೆ ನ್ಯೂಜಿಲೆಂಡ್‌ ತಂಡ ಪ್ರಕಟ, ಆರ್‌ಸಿಬಿ ವೇಗಿ ಜಾಕೋಬ್‌ ಡಫಿಗೆ ಸ್ಥಾನ!

ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಜಾಕೋಬ್ ಬೆಥೆಲ್ 232 ಎಸೆತಗಳನ್ನು ಎದುರಿಸಿದ ನಂತರ 142 ರನ್ ಗಳಿಸಿದ್ದಾರೆ. ಅವರು ತಮ್ಮ ಇನಿಂಗ್ಸ್‌ನಲ್ಲಿ 15 ಬೌಂಡರಿಗಳನ್ನು ಬಾರಿಸಿದ್ದಾರೆ. ಬೆಥೆಲ್ ಶತಕ ಪೂರೈಸಿದಾಗ ಅವರ ಕುಟುಂಬದ ಸದಸ್ಯರು ಮೈದಾನದಲ್ಲಿ ಹಾಜರಿದ್ದರು.



ಜಾಕೋಬ್‌ ಬೆಥೆಲ್ ತಂದೆ ಭಾವುಕ

ಜಾಕೋಬ್ ಬೆಥೆಲ್ ಅವರ ಟೆಸ್ಟ್ ವೃತ್ತಿಜೀವನದ ಮೊದಲ ಶತಕ ಗಳಿಸಿದಾಗ, ಅವರ ಕುಟುಂಬವು ಸ್ಟ್ಯಾಂಡ್‌ಗಳಲ್ಲಿತ್ತು. ಅವರ ತಂದೆ ಹಾಜರಿದ್ದರು. ಅವರ ಶತಕದ ನಂತರ ಬೆಥೆಲ್ ಅವರ ತಂದೆ ಗ್ರಹಮ್‌ ಭಾವುಕರಾಗಿ ಕಣ್ಣೀರಿಟ್ಟರು. ಇದರ ವಿಡಯೊ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಬೆಥೆಲ್ ಟೆಸ್ಟ್‌ನಲ್ಲಿ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ.



ಜಾಕೋಬ್ ಬೆಥೆಲ್ ವೃತ್ತಿಜೀವನ

22ರ ವಯಸ್ಸಿನ ಜಾಕೋಬ್ ಬೆಥೆಲ್ ಐದು ಟೆಸ್ಟ್ ಪಂದ್ಯಗಳು, 18 ಏಕದಿನ ಮತ್ತು 20 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ 312 ರನ್‌ಗಳು, ಏಕದಿನ ಕ್ರಿಕೆಟ್‌ನಲ್ಲಿ 517 ಮತ್ತು ಟಿ20ಐಗಳಲ್ಲಿ 392 ರನ್‌ಗಳನ್ನು ಗಳಿಸಿದ್ದಾರೆ. ಬೆಥೆಲ್ ಒಂದು ಶತಕ ಮತ್ತು ಏಕದಿನಗಳಲ್ಲಿ ನಾಲ್ಕು ಅರ್ಧಶತಕಗಳು ಮತ್ತು ಟಿ20ಐಗಳಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ. ಬೆಥೆಲ್ ಕಳೆದ ವರ್ಷ 2025ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಎರಡು ಪಂದ್ಯಗಳಲ್ಲಿ 67 ರನ್ ಗಳಿಸಿದರು. ಆಸ್ಟ್ರೇಲಿಯಾ ಪ್ರಸ್ತುತ ಆಷಸ್‌ ಸರಣಿಯನ್ನು 3-1 ರಿಂದ ಮುನ್ನಡೆಸುತ್ತಿದೆ, ಈಗಾಗಲೇ ಟೆಸ್ಟ್ ಸರಣಿಯನ್ನು ಗೆದ್ದಿದೆ.