ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಆರ್‌ಸಿಬಿಯ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನೇ ಮುಂದುವರಿಯಬೇಕೆಂದ ಅಭಿನವ್‌ ಮುಕುಂದ್‌!

ಮುಂಬರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಮೂರನೇ ಕ್ರಮಾಂಕದಲ್ಲಿ ಎಡಗೈ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ ಅವರನ್ನು ಮುಂದುವರಿಸಬೇಕೆಂದು ಭಾರತೀಯ ಮಾಜಿ ಕ್ರಿಕೆಟಿಗ ಅಭಿನವ್‌ ಮುಕುಂದ್‌ ಅಭಿಪ್ರಾಯಪಟ್ಟಿದ್ದಾರೆ.

ಆರ್‌ಸಿಬಿಯ 3ನೇ ಕ್ರಮಾಂಕದಲ್ಲಿ ಕನ್ನಡಿಗನೇ ಮುಂದುವರಿಯಬೇಕು: ಮುಕುಂದ್‌!

ದೇವದತ್‌ ಪಡಿಕ್ಕಲ್‌ ಪರ ಅಭಿನವ್‌ ಮುಕುಂದ್‌ ಬ್ಯಾಟಿಂಗ್‌. -

Profile
Ramesh Kote Mar 17, 2026 9:01 PM

ಬೆಂಗಳೂರು: ಹಾಲಿ ಚಾಂಪಿಯನ್ಸ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಕನ್ನಡಿಗ ದೇವದತ್‌ ಪಡಿಕ್ಕಲ್‌ (Devdutt Padikkal) ಅವರನ್ನು ಆಡಿಸಬೇಕೆಂದು ಭಾರತೀಯ ಮಾಜಿ ಕ್ರಿಕೆಟಿಗ ಅಭಿನವ್‌ ಮುಕುಂದ್‌ ಸಲಹೆ ನೀಡಿದ್ದಾರೆ. ವೆಂಕಟೇಶ್‌ ಅಯ್ಯರ್‌ ಅವರ ಸೇರ್ಪಡೆಯ ಬಳಿಕ ಮೂರನೇ ಕ್ರಮಾಂಕದಲ್ಲಿ ಎಡಗೈ ಬ್ಯಾಟ್ಸ್‌ಮನ್‌ ಅನ್ನು ಸೇರಿಸಲು ಹಾಲಿ ಚಾಂಪಿಯನ್ಸ್‌ ಸ್ವಲ್ಪ ಗೊಂದಲಕ್ಕೆ ಒಳಗಾಗಬಹುದು. ಆದರೆ, ಚೆನ್ನೈ ಮೂಲದ ಆಟಗಾರ ಸ್ಪಷ್ಟವಾಗಿ ಹೇಳಿದ್ದಾರೆ.

ಬೆಂಗಳೂರು ಫ್ರಾಂಚೈಸಿ 2026ರ ಐಪಿಎಲ್‌ ಮಿನಿ ಹರಾಜಿನಲ್ಲಿ ವೆಂಕಟೇಶ್‌ ಅಯ್ಯರ್‌ ಅವರನ್ನು 7 ಕೋಟಿ ರು. ಗಳಿಗೆ ಖರೀದಿಸಿತ್ತು. ದೇವದತ್‌ ಪಡಿಕ್ಕಲ್‌ ಅವರನ್ನು ಮೂಲ ಬೆಲೆಗೆ ಮತ್ತೆ ತಂಡಕ್ಕೆ ಸೇರಿಸಿಕೊಂಡಿತ್ತು. 2025ರ ಐಪಿಎಲ್‌ ಟೂರ್ನಿಯಲ್ಲಿ ಪಡಿಕ್ಕಲ್‌ ಪ್ರದರ್ಶನ ತೀರಾ ಸಾಧಾರಣವಾಗಿದ್ದರೂ, ಅವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿತ್ತು.ಅವರು ಕಳೆದ ಸೀಸನ್‌ನಲ್ಲಿ 150.61 ಸ್ಟ್ರೈಕ್ ರೇಟ್‌ನೊಂದಿಗೆ 247 ರನ್‌ಗಳನ್ನು ಕಲೆ ಹಾಕಿದ್ದರು.

ಇದೀಗ, ಅಭಿನವ್‌ ಮುಕುಂದ್‌ ಅವರು ಆರ್‌ಸಿಬಿಗೆ ಪಡಿಕ್ಕಲ್ ಮೇಲೆ ನಂಬಿಕೆ ಇಟ್ಟು ಮುಂದುವರಿಯುವಂತೆ ಸಲಹೆ ನೀಡಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಇತ್ತೀಚಿನ ಅವರ ಪ್ರದರ್ಶನವನ್ನು ಗಮನಿಸಿದ ಅವರು, ಎಡಗೈ ಬ್ಯಾಟ್ಸ್‌ಮನ್‌ಗೆ ಇನ್ನಷ್ಟು ಅವಕಾಶಗಳನ್ನು ನೀಡಬೇಕೆಂದು ಹೇಳಿದ್ದಾರೆ.

IPL 2026: ಸಂಜು ಸ್ಯಾಮ್ಸನ್‌ or ಋತುರಾಜ್‌ ಗಾಯಕ್ವಾಡ್‌? ಸಿಎಸ್‌ಕೆಗೆ ಸೂಕ್ತ ನಾಯಕನನ್ನು ಆರಿಸಿದ ಎಬಿಡಿ!

ಅಭಿನವ್‌ ಮುಕುಂದ್‌ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಯ್ಕೆ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. “ಹಿಂದಿನ ವರ್ಷದ ಹರಾಜು ಸಮಯದಲ್ಲಿ ವೆಂಕಟೇಶ್‌ ಅಯ್ಯರ್‌ ಅವರ ಮೌಲ್ಯ 10ರಷ್ಟಿತ್ತು, ಆದರೆ ದೇವದತ್‌ ಪಡಿಕ್ಕಲ್‌ ಕೇವಲ 2ರಷ್ಟಿದ್ದರು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಪಡಿಕ್ಕಲ್ ಅದ್ಭುತ ಸೀಸನ್ ಕಂಡಿದ್ದಾರೆ. ಅವರು ಈಗ ಭಾರತೀಯ ತಂಡದ ಕದ ತಟ್ಟುತ್ತಿರುವ ಆಟಗಾರ. ಆರ್‌ಸಿಬಿ ಪರವಾಗಿ ಮೂರನೇ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದ್ದರಿಂದ ನನ್ನ ಅಭಿಪ್ರಾಯದಲ್ಲಿ ವೆಂಕಟೇಶ್ ಅಯ್ಯರ್ ಪ್ಲೇಯಿಂಗ್ XIನಲ್ಲಿ ಆರಂಭಿಕ ಆಯ್ಕೆಯಾಗಬಾರದು. ನಾನು ದೇವದುತ್ ಪದಿಕ್ಕಲ್ ಅವರನ್ನು ಆಯ್ಕೆ ಮಾಡುತ್ತೇನೆ,” ಎಂದು ಅವರು ಇಎಸ್‌ಪಿಎನ್‌ ಕ್ರಿಕ್‌ಇನ್ಫೋಗೆ ತಿಳಿಸಿದ್ದಾರೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ದೇವದತ್‌ ಪಡಿಕ್ಕಲ್‌ ಮೇಲಿಟ್ಟಿರುವ ವಿಶ್ವಾಸವೇ ಅವರಿಗೆ ಸ್ವತಂತ್ರವಾಗಿ ಮತ್ತು ಆತ್ಮವಿಶ್ವಾಸದಿಂದ ಆಡಲು ನೆರವಾಗಿದೆ ಎಂದು ಫಾಫ್‌ ಡು ಪ್ಲೆಸಿಸ್ ಹೇಳಿದ್ದಾರೆ. ಎಡಗೈ ಬ್ಯಾಟರ್ ಪಡಿಕ್ಕಲ್ ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಸೀಸನ್ ಕಂಡಿದ್ದು, ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ 9 ಇನಿಂಗ್ಸ್‌ಗಳಲ್ಲಿ 725 ರನ್ ಗಳಿಸಿದ್ದಾರೆ. ಅವರು 90.62 ಸರಾಸರಿಯೊಂದಿಗೆ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು. ಇದೇ ರೀತಿ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲೂ ಅವರು ಮಿಂಚಿದ್ದು, 6 ಇನಿಂಗ್ಸ್‌ಗಳಲ್ಲಿ 61.80 ಸರಾಸರಿ ಮತ್ತು 167.08 ಸ್ಟ್ರೈಕ್ ರೇಟ್‌ನೊಂದಿಗೆ 309 ರನ್ ಗಳಿಸಿ ಗಮನ ಸೆಳೆದಿದ್ದಾರೆ.

IPL 2026: ರೋಹಿತ್‌ ಶರ್ಮಾ ಅಲ್ಲ! ಬೆಸ್ಟ್‌ ಟಿ20 ಓಪನರ್‌ ಆರಿಸಿದ ವಿರಾಟ್‌ ಕೊಹ್ಲಿ!

“ಅವರ ಬಗ್ಗೆ ಇರುವ ಪ್ರಶ್ನೆ ಸ್ಟ್ರೈಕ್ ರೇಟ್ ಕುರಿತದ್ದೇ ಅಲ್ಲವೇ? ಕಳೆದ ವರ್ಷ ಅವರಿಗೆ ಸ್ಟ್ರೈಕ್ ರೇಟ್ ಹೆಚ್ಚಿಸಬೇಕು, ಆಟವನ್ನು ಹಿಡಿದುಕೊಳ್ಳಬೇಕು ಎಂಬ ಚರ್ಚೆಗಳು ನಡೆದವು. ನಾಯಕತ್ವ ಗುಂಪಿನಿಂದ ಅವರಿಗೆ ಹೆಚ್ಚಿನ ಆತ್ಮವಿಶ್ವಾಸ ನೀಡಲಾಗಿತ್ತು, ಏಕೆಂದರೆ ಅದು ಅವರ ಸ್ವಾಭಾವಿಕ ಆಟದ ಶೈಲಿ ಅಲ್ಲ,” ಎಂದು ಫಾಫ್‌ ಡು ಪ್ಲೆಸಿಸ್‌ ತಿಳಿಸಿದ್ದಾರೆ.