ನವದೆಹಲಿ: ಆಸ್ಟ್ರೇಲಿಯಾ ವಿರದ್ಧ ಆಷಸ್ ಟೆಸ್ಟ್ (Ashes) ಸರಣಿಯ ಎರಡನೇ ಪಂದ್ಯದಲ್ಲಿ (AUS vs ENG) ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ (Joe Root) ಶತಕವನ್ನು ಬಾರಿಸಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 40ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಅಂದ ಹಾಗೆ ಆಸ್ಟ್ರೇಲಿಯಾದಲ್ಲಿ ಈ ಸರಣಿಯಲ್ಲಿ ಆಡಿದ ಮೂರು ಇನಿಂಗ್ಸ್‌ಗಳ ಪೈಕಿ ಒಂದು ಶತಕವನ್ನು ಬಾರಿಸಿದ್ದಾರೆ.
ಬ್ರಿಸ್ಬೇನ್‌ನ ದಿ ಗಬ್ಬಾ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡ ಇಂಗ್ಲೆಂಡ್ ತಂಡಕ್ಕೆ ಮಿಚೆಲ್ ಸ್ಟಾರ್ಕ್, ಬೆನ್ ಡಕೆಟ್ ಹಾಗೂ ಒಲ್ಲಿ ಪೋಪ್ ಅವರನ್ನು ಔಟ್ ಮಾಡುವ ಮೂಲಕ ಆರಂಭಿಕ ಆಘಾತ ನೀಡಿದ್ದರು. ಬಳಿಕ ಮೂರನೇ ವಿಕೆಟ್‌ಗೆ ಜೊತೆಯಾಗಿದ್ದ ಜೋ ರೂಟ್ ಹಾಗೂ ಝ್ಯಾಕ್ ಕ್ರಾವ್ಲಿ (76) ಅವರು 117 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಆರಂಭಿಕ ಆಘಾತಕ್ಕೆ ಒಳಗಾಗಿದ್ದ ತಂಡವನ್ನು ಮೇಲೆತ್ತಿದರು.
IND vs SA: ಕೊಹ್ಲಿ, ಗಾಯಕ್ವಾಡ್ ಶತಕಗಳು ವ್ಯರ್ಥ, ಭಾರತಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!
ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಜೋ ರೂಟ್ ಅವರು, ಆಸ್ಟ್ರೇಲಿಯಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಮೊದಲನೇ ದಿನದಾಟದ ಅಂತ್ಯಕ್ಕೆ 202 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 15 ಬೌಂಡರಿಗಳೊಂದಿಗೆ ಅಜೇಯ 135 ರನ್‌ಗಳನ್ನು ಕಲೆ ಹಾಕಿದರು. ಒಂದು ತುದಿಯಲ್ಲಿ ನಿರಂತರವಾಗಿ ವಿಕೆಟ್‌ಗಳು ಉರುಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಜೋ ರೂಟ್, ಆಸೀಸ್ ಮಾರಕ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಆ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ 1000 ಟೆಸ್ಟ್ ರನ್‌ಗಳನ್ನು ಕೂಡ ಪೂರ್ಣಗೊಳಿಸಿದರು. ಕಾಂಗರೂ ನಾಡಿನಲ್ಲಿ ಆಡಿದ 30 ಇನಿಂಗ್ಸ್‌ಗಳಿಂದ ಒಂದು ಶತಕ ಹಾಗೂ 9 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಇತಿಹಾಸ ಬರೆದ ಜೋ ರೂಟ್
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಜೋ ರೂಟ್ ಅವರ ಪಾಲಿಗೆ ಇದು 22ನೇ ಶತಕವಾಗಿದೆ. ಆ ಮೂಲಕ ಈ ಟೂರ್ನಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ಜೋ ರೂಟ್ ಅವರ ಹೆಸರಿನಲ್ಲಿದೆ. ಅವರು ಇದೀಗ ತಮ್ಮ ದಾಖಲೆಯನ್ನು ಇನ್ನಷ್ಟು ಉತ್ತಮಪಡಿಸಿಕೊಂಡಿದ್ದಾರೆ. 13 ಶತಕಗಳ ಮೂಲಕ ಆಸ್ಟ್ರೇಲಿಯಾ ಹಿರಿಯ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಅವರು ಎರಡನೇ ಸ್ಥಾನದಲ್ಲಿದ್ದಾರೆ.
ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದು ವಸೀಮ್ ಅಕ್ರಮ್ ದಾಖಲೆ ಮುರಿದ ಮಿಚೆಲ್ ಸ್ಟಾರ್ಕ್!
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ಸ್
ಜೋ ರೂಟ್: 22 ಶತಕಗಳು-129 ಇನಿಂಗ್ಸ್‌ಗಳು
ಸ್ಟೀವನ್ ಸ್ಮಿತ್: 13 ಶತಕಗಳು- 97 ಇನಿಂಗ್ಸ್‌ಗಳು
ಮಾರ್ನಸ್ ಲಾಬುಶೇನ್: 11 ಶತಕಗಳು- 98 ಇನಿಂಗ್ಸ್‌ಗಳು
ಕೇನ್ ವಿಲಿಯಮ್ಸನ್: 11 ಶತಕಗಳು- 52 ಇನಿಂಗ್ಸ್‌ಗಳು
ಶುಭಮನ್ ಗಿಲ್: 10 ಶತಕಗಳು- 73 ಇನಿಂಗ್ಸ್‌ಗಳು
ಇಂಗ್ಲೆಂಡ್ ಪರ ಅತಿ ಹೆಚ್ಚು ಟಸ್ಟ್ ಶತಕ ಸಿಡಿಸಿದ ಬ್ಯಾಟರ್ಸ್
59* ಜೋ ರೂಟ್ (496 ಇನಿಂಗ್ಸ್)
38 - ಆಲಸ್ಟೈರ್ ಕುಕ್ (387 ಇನಿಂಗ್ಸ್)
32 -ಕೇವಿನ್ ಪೀಟರ್ಸನ್ (340 ಇನಿಂಗ್ಸ್)
28 - ಗ್ರಹಮ್ ಗೂಚ್ (337 ಇನಿಂಗ್ಸ್)
27 - ಆಂಡ್ರೆ ರಸೆಲ್ (308 ಇನಿಂಗ್ಸ್)