ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದು ವಸೀಮ್ ಅಕ್ರಮ್ ದಾಖಲೆ ಮುರಿದ ಮಿಚೆಲ್ ಸ್ಟಾರ್ಕ್!
Mitchell Starc breaks Wasim Akram Record: ಆಸ್ಟ್ರೇಲಿಯಾ ತಂಡದ ಹಿರಿಯ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎಡಗೈ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಆ ಮೂಲಕ ವಸೀಮ್ ಅಕ್ರಮ್ ದಾಖಲೆಯನ್ನು ಮುರಿದಿದ್ದಾರೆ.
ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಮೊದಲ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್. -
ನವದೆಹಲಿ: ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಎಡಗೈ ವೇಗದ ಬೌಲರ್ ಎಂಬ ದಾಖಲೆಯನ್ನುಆಸ್ಟ್ರೇಲಿಯಾ ತಂಡದ ಹಿರಿಯ ವೇಗಿ ಮಿಚೆಲ್ ಸ್ಟಾರ್ಕ್ (Mitchell Starc) ಬರೆದಿದ್ದಾರೆ. ಆ ಮೂಲಕ ಪಾಕಿಸ್ತಾನ ಮಾಜಿ ವೇಗಿ ವಸೀಮ್ ಅಕ್ರಮ್ (Wasim Akram) ಅವರ ದಾಖಲೆಯನ್ನು ಮುರಿದಿದ್ದಾರೆ. ಇಂಗ್ಲೆಂಡ್ ವಿರುದ್ಧ ಆಷಸ್ ಟೆಸ್ಟ್ ಸರಣಿಯ (Ashes) ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಮೊದಲನೇ ದಿನ ಎರಡನೇ ಸೆಷನ್‌ನಲ್ಲಿ ಬೆನ್ ಡಕೆಟ್ ಅವರನ್ನು ಔಟ್ ಮಾಡುವ ಮೂಲಕ ಈ ಸಾಧನೆಗೆ ಭಾಜನರಾದರು. ಇದಕ್ಕೂ ಮುನ್ನ ಅವರು ಬೆನ್ ಡಕೆಟ್ ಹಾಗೂ ಒಲ್ಲೀ ಪೋಪ್ ಅವರನ್ನು ಔಟ್ ಮಾಡಿದ್ದರು.
ಪ್ರಸ್ತುತ ನಡೆಯುತ್ತಿರುವ ಆಷಸ್ ಟೆಸ್ಟ್ ಸರಣಿಯಲ್ಲಿ ಮಿಂಚಿನ ಬೌಲಿಂಗ್ ದಾಳಿ ನಡೆಸುವ ಮೂಲಕ ಮಿಚೆಲ್ ಸ್ಟಾರ್ಕ್ ಅವರು ತಮ್ಮ ಟೆಸ್ಟ್ ವೃತ್ತಿ ಜೀವನದ 102 ಪಂದ್ಯಗಳಿಂದ ವಸೀಮ್ ಅಕ್ರಮ್ ಅವರ ದಾಖಲೆಯನ್ನು ಮುರಿದಿದ್ದಾರೆ. ಪರ್ತ್‌ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಅವರು 7 ವಿಕೆಟ್‌ಗಳನ್ನು ಕಬಳಿಸಿದ್ದರು. ನಂತರ ಇದೀಗ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಲ್ಲಿಯವರೆಗೂ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ.
IND vs SA: ಕೊಹ್ಲಿ, ಗಾಯಕ್ವಾಡ್ ಶತಕಗಳು ವ್ಯರ್ಥ, ಭಾರತಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!
ಎರಡನೇ ಟೆಸ್ಟ್ ಪಂದ್ಯದ ಮೊಟ್ಟ ಮೊದಲ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಅವರು ಬೆನ್ ಡಕೆಟ್ ಅವರನ್ನು ಔಟ್ ಮಾಡಿದ್ದರು. ಸ್ಲಿಪ್‌ನಲ್ಲಿ ಅವರು ಕ್ಯಾಚ್ ಕೊಟ್ಟಿದ್ದರು. ಆ ಮೂಲಕ ವಸೀಮ್ ಅಕ್ರಮ್ ದಾಖಲೆಯನ್ನು ಸರಿಗಟ್ಟಿದರು. ಇನ್ನು ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಅವರನ್ನು ಕೂಡ ಬಹುತೇಕ ಔಟ್ ಮಾಡಿದ್ದರು. ಆದರೆ ಅದೃಷ್ಟ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಕಡೆ ಇತ್ತು. ಈ ವೇಳೆ ಸ್ಲಿಪ್‌ನಲ್ಲಿ ಕ್ಯಾಚ್ ಪಡೆಯಲು ಸಾಧ್ಯವಾಗಲಿಲ್ಲ. ನಂತರ ತಮ್ಮ ನೂತನ ಮೈಲುಗಲ್ಲು ತಲುಪಲು ಸ್ವಲ್ಪ ಹೆಚ್ಚಿನ ಸಮಯ ಕಾಯಬೇಕಾಯಿತು. ಏಕೆಂದರೆ ಝ್ಯಾಕ್ ಕ್ರಾವ್ಲಿ ಮತ್ತು ಜೋ ರೂಟ್ ಉತ್ತಮ ಜೊತೆಯಾಟವನ್ನು ಆಡುವ ಮೂಲಕ ಇಂಗ್ಲೆಂಡ್ ಮೊತ್ತವನ್ನು ಏರಿಸಿದರು.
ಟೀ ವಿರಾಮಕ್ಕೂ ಮುನ್ನ ಮಿಚೆಲ್ ಸ್ಟಾರ್ಕ್ ಲಘು ಸ್ಪೆಲ್ ಬೌಲ್ ಮಾಡಿದರು. ಆದರೆ, ಅವರು ಎರಡನೇ ಸೆಷನ್‌ನಲ್ಲಿ ಉತ್ತಮ ಲಯದಲ್ಲಿ ಇರುವಂತೆ ಕಂಡು ಬಂದರು. ಹ್ಯಾರಿ ಬ್ರೂಕ್ ಅವರು ಮಿಚೆಲ್ ಸ್ಟಾರ್ಕ್ ಅವರ ಮೇಲೆ ಆಕ್ರಮಣಕಾರಿ ಹೊಡೆತಕ್ಕೆ ಕೈ ಹಾಕಿದರು. ಆದರೆ, ಅವರು ವಿಫಲರಾಗಿ ಸ್ಲಿಪ್‌ನಲ್ಲಿ ಸ್ಟೀವನ್ ಸ್ಮಿತ್‌ಗೆ ಕ್ಯಾಚ್ ಕೊಟ್ಟರು.
Mitchell Starc passes Wasim Akram as the most prolific left-arm bowler in Test cricket history 🤩#Ashes | #MilestoneMoment | @nrmainsurance pic.twitter.com/gxzYjLGR2S
— cricket.com.au (@cricketcomau) December 4, 2025
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಎಡಗೈ ವೇಗಿಗಳು
ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) – 102 ಪಂದ್ಯಗಳು, 415 ವಿಕೆಟ್‌ಗಳು
ವಸೀಮ್ ಅಕ್ರಮ್ (ಪಾಕಿಸ್ತಾನ) – 104 ಪಂದ್ಯಗಳು, 414 ವಿಕೆಟ್‌ಗಳು
ಚಮಿಂಡಾ ವಾಸ್ (ಶ್ರೀಲಂಕಾ) – 111 ಪಂದ್ಯಗಳು, 355 ವಿಕೆಟ್‌ಗಳು
ಮಿಚೆಲ್ ಜಾನ್ಸನ್ (ಆಸ್ಟ್ರೇಲಿಯಾ) – 73 ಪಂದ್ಯಗಳು, 313 ವಿಕೆಟ್‌ಗಳು
ಜಹೀರ್ ಖಾನ್ (ಭಾರತ) – 92 ಪಂದ್ಯಗಳು, 311 ವಿಕೆಟ್‌ಗಳು