ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Asian Games: ಬಾಂಗ್ಲಾದೇಶ ಎದುರು ಹರ್ಮನ್‌ಪ್ರೀತ್‌ ಕೌರ್‌ ಪಡೆದ ಕ್ಯಾಚ್‌ನ ಅಸಲಿ ಸತ್ಯ ಇಲ್ಲಿದೆ!

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರದ್ದು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಕ್ಯಾಚ್ ವಿಡಿಯೊ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಆದರೆ ಈ ವಿಡಿಯೊ ನಿಜವಾದದ್ದಲ್ಲ ಎಂಬುದು ಬೆಳಕಿಗೆ ಬಂದಿದೆ. ಕೌರ್‌ ಅವರ ಅದ್ಭುತ ಕ್ಯಾಚ್ ವಿಡಿಯೊ ಸಂಪೂರ್ಣವಾಗಿ AI ಮೂಲಕ ಸೃಷ್ಟಿಸಲಾದ ನಕಲಿ ಕಂಟೆಂಟ್ ಎಂದು ತಿಳಿದುಬಂದಿದೆ.

ಬಾಂಗ್ಲಾ ಎದುರು ಹರ್ಮನ್‌ಪ್ರೀತ್‌ ಕೌರ್‌ ಕ್ಯಾಚ್‌ ಅಸಲಿ ಸತ್ಯ ಇಲ್ಲಿದೆ!

ಹರ್ಮನ್‌ಪ್ರೀತ್‌ ಕೌರ್‌ ವಿಡಿಯೊ ವೈರಲ್‌. -

Profile
Ramesh Kote Sep 10, 2026 6:56 PM

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಭಾರತ ಮಹಿಳಾ ಕ್ರಿಕೆಟ್ (Indian Women Team) ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಅವರ ಹೆಸರಿನಲ್ಲಿ ಅಚ್ಚರಿ ಮೂಡಿಸುವ ವಿಡಿಯೊವೊಂದು ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೊದಲ್ಲಿ ಆಟಗಾರ್ತಿಯೊಬ್ಬರು ಓಡುತ್ತಾ ಗಾಳಿಯಲ್ಲಿ ಸಾಹಸಮಯವಾಗಿ ಕಸರತ್ತು ನಡೆಸಿ, ಅಸಾಧ್ಯವೆನಿಸುವ ಕ್ಯಾಚ್‌ವೊಂದನ್ನು ಹಿಡಿಯುತ್ತಿರುವ ದೃಶ್ಯ ಕಂಡುಬರುತ್ತದೆ.

ಮೊದಲ ನೋಟಕ್ಕೆ ಈ ವಿಡಿಯೊ ಅತ್ಯಂತ ರೋಚಕವಾಗಿದ್ದು, ನೈಜ ಪಂದ್ಯದ ದೃಶ್ಯದಂತೆ ಕಾಣುತ್ತದೆ. ಆದರೆ ಇದರ ಹಿಂದಿನ ಸತ್ಯ ಬೇರೆಯೇ ಇದೆ. ಈ ವಿಡಿಯೊವನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಸಹಾಯದಿಂದ ಸೃಷ್ಟಿಸಲಾದ ನಕಲಿ ವಿಡಿಯೋ ಎಂದು ತಿಳಿದುಬಂದಿದೆ. ಹಲವರು ಇದನ್ನು ಮನರಂಜನೆಯ ದೃಷ್ಟಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇಂತಹ ನಕಲಿ ಚಿತ್ರಗಳು ಮತ್ತು ವಿಡಿಯೊಗಳು ಸಾಮಾನ್ಯ ಕ್ರೀಡಾಭಿಮಾನಿಗಳನ್ನು ಸುಲಭವಾಗಿ ದಾರಿ ತಪ್ಪಿಸುವ ಸಾಧ್ಯತೆಯಿದೆ.

ENG vs PAK: ಮೊದಲ ಮಹಾಯುದ್ಧದ ಬಳಿಕ ಅತ್ಯುತ್ತಮ ಟೆಸ್ಟ್‌ ಸರಾಸರಿಯಲ್ಲಿ 100 ವಿಕೆಟ್‌ ಕಿತ್ತ ಓಲ್ಲಿ ರಾಬಿನ್ಸನ್‌!

AI ಮೂಲಕ ಸೃಷ್ಟಿಸಲಾದ ಕ್ಯಾಚ್ ವಿಡಿಯೊ ವೈರಲ್

ಪ್ರಸ್ತುತ ಡೀಪ್‌ಫೇಕ್ ತಂತ್ರಜ್ಞಾನ ಗಂಭೀರ ಅಪಾಯವಾಗಿ ಬೆಳೆಯುತ್ತಿದ್ದು, ಸಿನಿಮಾ ಕ್ಷೇತ್ರದ ಗಣ್ಯರು ಹಾಗೂ ಕ್ರೀಡಾಪಟುಗಳು ಇದರ ಪ್ರಮುಖ ಗುರಿಯಾಗುತ್ತಿದ್ದಾರೆ. ಡೀಪ್‌ಫೇಕ್ ಎಂದರೆ AI ತಂತ್ರಜ್ಞಾನದ ಮೂಲಕ ಸೃಷ್ಟಿಸಲಾಗುವ ನಕಲಿ ವಿಡಿಯೊ ಅಥವಾ ಆಡಿಯೊ ಕ್ಲಿಪ್‌ಗಳು. ಇವುಗಳಲ್ಲಿ ವ್ಯಕ್ತಿಯ ಮುಖ ಹಾಗೂ ಧ್ವನಿಯನ್ನು ನೈಜವಾದಂತೆ ಕಾಣುವ ರೀತಿಯಲ್ಲಿ ಸೃಷ್ಟಿಸಬಹುದು.

ತಂತ್ರಜ್ಞಾನದ ಈ ದುರ್ಬಳಕೆಯಿಂದ ಯಾವುದೇ ವ್ಯಕ್ತಿಯ ಮುಖ, ಧ್ವನಿ ಹಾಗೂ ಗುರುತನ್ನು ಕ್ಷಣಾರ್ಧದಲ್ಲಿ ತಪ್ಪಾಗಿ ಬಳಸಿಕೊಂಡು, ಅವರು ಮಾಡದಿರುವ ಕೆಲಸವನ್ನು ಮಾಡಿದಂತೆ ಬಿಂಬಿಸುವ ಸಾಧ್ಯತೆಯಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಇಂತಹ ವಿಡಿಯೊಗಳನ್ನು ಪರಿಶೀಲಿಸದೆ ನೈಜವೆಂದು ನಂಬುವುದು ಅಥವಾ ಹಂಚಿಕೊಳ್ಳುವುದು ಅಪಾಯಕಾರಿ.



ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿರುವ ವಿಡಿಯೊದಲ್ಲಿ ಮಹಿಳಾ ಕ್ರಿಕೆಟರ್‌ ಒಬ್ಬರು ಚಿರತೆಯ ವೇಗದಲ್ಲಿ ಓಡಿಬಂದು, ಕೋತಿಯಂತೆ ಗಾಳಿಯಲ್ಲಿ ಪಲ್ಟಿ ಹೊಡೆದು ಅಸಾಧ್ಯವೆನಿಸುವ ಕ್ಯಾಚ್‌ವೊಂದನ್ನು ಹಿಡಿಯುತ್ತಿರುವ ದೃಶ್ಯ ಕಂಡುಬರುತ್ತದೆ. ಈ ಅದ್ಭುತ ದೃಶ್ಯವನ್ನು ಕಂಡು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

ಮೊದಲ ನೋಟಕ್ಕೆ ಈ ನಂಬಲಸಾಧ್ಯವಾದ ಕ್ಯಾಚ್ ಹರ್ಮನ್‌ಪ್ರೀತ್ ಕೌರ್ ಅವರ ಅದ್ಭುತ ಫೀಲ್ಡಿಂಗ್ ಪ್ರದರ್ಶನದಂತೆ ಕಾಣುತ್ತದೆ. ಹೀಗಾಗಿ ಅನೇಕರು ವಿಡಿಯೋವನ್ನು ಮತ್ತೆ ಮತ್ತೆ ವೀಕ್ಷಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಇದು AI ತಂತ್ರಜ್ಞಾನದ ಮೂಲಕ ಸೃಷ್ಟಿಸಲಾದ ಸಂಪೂರ್ಣ ನಕಲಿ ವಿಡಿಯೋವಾಗಿದೆ.



ಇಂಟರ್‌ನೆಟ್‌ನಲ್ಲಿ ಹಲವು ರೀತಿಯ ನಕಲಿ ವಿಡಿಯೊಗಳು ವೈರಲ್

ಇಂಟರ್‌ನೆಟ್ ಜಗತ್ತಿನಲ್ಲಿ ಶೇ.100ರಷ್ಟು ಸುರಕ್ಷತೆಯ ಭರವಸೆ ನೀಡುವುದು ಸಾಧ್ಯವಿಲ್ಲ. ಆದರೆ ಎಚ್ಚರಿಕೆ ವಹಿಸುವ ಮೂಲಕ ಇಂತಹ ಅಪಾಯಗಳನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡಬಹುದು. ಸಾರ್ವಜನಿಕ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ತಮ್ಮ ಅತ್ಯಂತ ಖಾಸಗಿ ಫೋಟೋಗಳು ಅಥವಾ ವಿಡಿಯೊಗಳನ್ನು ಹಂಚಿಕೊಳ್ಳುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಮೊದಲ ಹಾಗೂ ಪ್ರಮುಖ ಕ್ರಮವಾಗಿದೆ.

CPL 2026: 47ನೇ ವಯಸ್ಸಿನಲ್ಲಿ 5 ವಿಕೆಟ್‌ ಕಿತ್ತು ವಿಶ್ವ ದಾಖಲೆ ಬರೆದ ಇಮ್ರಾನ್‌ ತಾಹಿರ್‌!

ಒಂದು ವೇಳೆ ವೈಯಕ್ತಿಕ ಫೋಟೋ ಅಥವಾ ವಿಡಿಯೋಗಳನ್ನು ಹಂಚಿಕೊಳ್ಳುವುದು ಅನಿವಾರ್ಯವಾದರೆ, ತಮ್ಮ ಪ್ರೊಫೈಲ್‌ನ ಪ್ರೈವಸಿ ಸೆಟ್ಟಿಂಗ್‌ಗಳನ್ನು ಅತ್ಯಂತ ಕಠಿಣ ಮಟ್ಟದಲ್ಲಿ ಇರಿಸಿಕೊಳ್ಳುವುದು ಉತ್ತಮ. ಇದರಿಂದ ಅಪರಿಚಿತ ವ್ಯಕ್ತಿಗಳು ನಿಮ್ಮ ವೈಯಕ್ತಿಕ ಮಾಧ್ಯಮ ಫೈಲ್‌ಗಳನ್ನು ಸುಲಭವಾಗಿ ಪ್ರವೇಶಿಸುವುದನ್ನು ತಡೆಯಬಹುದು.

AI ಮತ್ತು ಡೀಪ್‌ಫೇಕ್ ತಂತ್ರಜ್ಞಾನಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುವ ಪ್ರತಿಯೊಂದು ವಿಡಿಯೊವನ್ನು ನೈಜವೆಂದು ನಂಬುವ ಮೊದಲು ಅದರ ಮೂಲ ಹಾಗೂ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅಗತ್ಯವಾಗಿದೆ.