AUS vs BAN: ಮ್ಯಾಟ್ ರೆನ್‌ಶಾ ಕಮ್‌ಬ್ಯಾಕ್; ಎರಡನೇ ಟೆಸ್ಟ್‌ಗೆ ಆಸ್ಟ್ರೇಲಿಯಾ ಪ್ಲೇಯಿಂಗ್ XI ಪ್ರಕಟ!
Australia Playing XI for 2nd Test: ಆಸ್ಟ್ರೇಲಿಯಾ–ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪಂದ್ಯ ಮ್ಯಾಕೇನಲ್ಲಿ ನಡೆಯಲಿದ್ದು, ಪಂದ್ಯಕ್ಕಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ.
ಎರಡನೇ ಟೆಸ್ಟ್‌ಗೆ ಆಸ್ಟ್ರೇಲಿಯಾ ಪ್ಲೇಯಿಂಗ್ XI ಪ್ರಕಟ. -
ನವದೆಹಲಿ: ಬಾಂಗ್ಲಾದೇಶ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ (AUS vs BAN) ಸೋತು ತವರು ಅಭಿಮಾನಿಗಳ ಎದುರು ಮುಖಭಂಗ ಅನುಭವಿಸಿರುವ ಆತಿಥೇಯ ಆಸ್ಟ್ರೇಲಿಯಾ ತಂಡ ಎರಡನೇ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಒಳಗಾಗಿದೆ. ಆಗಸ್ಟ್ 22 ರಂದು ಮ್ಯಾಕೇಯ ಗ್ರೇಟ್ ಬಾರಿಯರ್ ರೀಫ್ ಅರೇನಾದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್ xi (Australia Playing XI) ಅನ್ನು ಪ್ರಕಟಿಸಲಾಗಿದೆ. ಆಸೀಸ್ ಆಡುವ ಬಳಗಕ್ಕೆ ಮ್ಯಾಟ್ ರೆನ್‌ಶಾ ಮರಳಿದ್ದಾರೆ.
ಸೀಮರ್‌ಗಳನ್ನೇ ಹೆಚ್ಚಾಗಿ ಒಳಗೊಂಡಿರುವ ಬೌಲಿಂಗ್ ದಾಳಿಯ ನಡುವೆ ಆಸ್ಟ್ರೇಲಿಯಾ ತಂಡ ಸ್ಪಿನ್ನರ್ ನೇಥನ್ ಲಯಾನ್ ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಿದೆ. ಬ್ಯಾಟರ್ ಮ್ಯಾಥ್ಯೂ ರೆನ್‌ಶಾ ಕೂಡ ತಂಡಕ್ಕೆ ಹೊಸ ಸೇರ್ಪಡೆಯಾಗಿದ್ದು, ಮೊದಲ ಟೆಸ್ಟ್‌ಗೆ ಹೋಲಿಸಿದರೆ ತಂಡದಲ್ಲಿ ಇದು ಏಕೈಕ ಬದಲಾವಣೆಯಾಗಿದೆ.
ಆಸ್ಟ್ರೇಲಿಯಾ ಪರ 14 ಟೆಸ್ಟ್ ಪಂದ್ಯಗಳನ್ನು ಆಡಿರುವ ರೆನ್‌ಶಾ, 2023ರಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಬಳಿಕ ಟೆಸ್ಟ್ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇದೀಗ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅವರು ಆಸ್ಟ್ರೇಲಿಯಾ ಪರ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.
ಆರ್‌ಸಿಬಿ ವೇಗಿಗೆ ಸ್ಥಾನ; 2027ರ ಏಕದಿನ ವಿಶ್ವಕಪ್‌ಗೆ ಭಾರತ ತಂಡವನ್ನು ಆರಿಸಿದ ರಾಬಿನ್ ಉತ್ತಪ್ಪ!
ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಭರ್ಜರಿ ಪ್ರದರ್ಶನ ನೀಡಿತ್ತು. ಡಾರ್ವಿನ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ ಬಾಂಗ್ಲಾದೇಶ ಐತಿಹಾಸಿಕ ಗೆಲುವು ದಾಖಲಿಸಿತ್ತು. ಹೀಗಾಗಿ ಎರಡನೇ ಟೆಸ್ಟ್‌ನಲ್ಲಿ ತಂಡ ಹೇಗೆ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಎರಡನೇ ಟೆಸ್ಟ್‌ಗೂ ಮುನ್ನ ತಂಡದ ಸಂಯೋಜನೆ ಬಗ್ಗೆ ಪ್ಯಾಟ್ ಕಮಿನ್ಸ್ ಹೇಳಿಕೆ
ಮೊದಲ ಟೆಸ್ಟ್ ಮುಕ್ತಾಯಗೊಂಡ ಕೆಲವೇ ಹೊತ್ತಿನಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ತಂಡದ ಸಂಯೋಜನೆ ಕುರಿತು ಮಾತನಾಡಿದ್ದರು. ಆಡುವ ಹನ್ನೊಂದರಲ್ಲಿ ಸ್ಪಿನ್ನರ್‌ಗೆ ಅವಕಾಶ ನೀಡಬೇಕೇ ಅಥವಾ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿಯಬೇಕೇ ಎಂಬ ಬಗ್ಗೆ ಅವರು ಚರ್ಚಿಸಿದ್ದರು.
🚨 AUSTRALIA NAMED PLAYINGXI FOR SECOND TEST v BANGLADESH 🚨
— Maina Singh (@Maina_Singhx77) August 21, 2026
- Matt Renshaw comes IN.
- Jake Weatherald goes OUT.
No place for Scott Boland in P11 as Nathan Lyon held his spot with 3 seamers Cummins, Starc and Hazlewood. 🇦🇺 pic.twitter.com/RuBXn4tuJe
“ನಾಲ್ವರು ವೇಗಿಗಳೊಂದಿಗೆ ಆಡಬೇಕೇ ಅಥವಾ ಸ್ಪಿನ್ನರ್ ಒಬ್ಬರನ್ನು ಆಡಿಸಬೇಕೇ ಎಂಬುದನ್ನು ನಿರ್ಧರಿಸಲು ಮತ್ತೊಂದು ದಿನ ಕಾಯಲು ಪ್ರಯತ್ನಿಸುತ್ತಿದ್ದೇವೆ. ‘ಎಲ್ಲವನ್ನೂ ಗೆಲ್ಲಲೇಬೇಕು’ ಎಂದು ಹಲವರು ಹೇಳುತ್ತಾರೆ. ಖಂಡಿತವಾಗಿಯೂ ನಾವು ಹಾಗೆಯೇ ಮಾಡಲು ಬಯಸುತ್ತೇವೆ. ವಿಶೇಷವಾಗಿ ತವರು ಟೆಸ್ಟ್ ಪಂದ್ಯಗಳಲ್ಲಿ ಸಾಧ್ಯವಾದಷ್ಟು ಪಂದ್ಯಗಳನ್ನು ಗೆಲ್ಲುವುದು ನಮ್ಮ ಹೆಮ್ಮೆ,” ಎಂದು ಕಮಿನ್ಸ್ ಹೇಳಿದ್ದಾರೆ.
ಕುಲ್ದೀಪ್ ಯಾದವ್ ಬಗ್ಗೆ ಗೌತಮ್ ಗಂಭೀರ್, ಶುಭಮನ್ ಗಿಲ್‌ಗೆ ಪ್ರಬಲ ಸಂದೇಶ ರವಾನಿಸಿದ ಅಜಿಂಕ್ಯ ರಹಾನೆ!
“ಮೊದಲ ಟೆಸ್ಟ್ ಪಂದ್ಯದಲ್ಲಿ ನಾವು ನಮ್ಮ ಅತ್ಯುತ್ತಮ ಪ್ರದರ್ಶನದ ಸಮೀಪವೂ ಇರಲಿಲ್ಲ. ಆದರೆ ಬಾಂಗ್ಲಾದೇಶ ಉತ್ತಮವಾಗಿ ಆಡಿತು. ಅವರದು ಅತ್ಯುತ್ತಮ ಕ್ರಿಕೆಟ್ ತಂಡ. ಪಂದ್ಯ ಮುಂದುವರಿದಂತೆ ಬ್ಯಾಟ್ ಮಾಡಲು ಪಿಚ್ ಇನ್ನಷ್ಟು ಉತ್ತಮವಾಗುತ್ತಿರುವಂತೆ ಕಂಡುಬಂತು,” ಎಂದು ಪ್ಯಾಟ್ ಕಮಿನ್ಸ್ ತಿಳಿಸಿದ್ದರು.
ಎರಡನೇ ಟೆಸ್ಟ್‌ಗೆ ಆಸ್ಟ್ರೇಲಿಯಾ ಪ್ಲೇಯಿಂಗ್ XI: ಮ್ಯಾಥ್ಯೂ ರೆನ್‌ಶಾ, ಟ್ರಾವಿಸ್ ಹೆಡ್, ಮಾರ್ನಸ್ ಲಾಬುಶೇನ್, ಸ್ಟೀವನ್ ಸ್ಮಿತ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕೇರಿ (ವಿಕೆಟ್ ಕೀಪರ್), ಬೀ ವೆಬ್‌ಸ್ಟರ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನೇಥನ್ ಲಯಾನ್, ಜಾಶ್ ಹೇಝಲ್‌ವುಡ್