ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

AUS vs ENG: ಶತಕ ಬಾರಿಸಿ 96 ವರ್ಷಗಳ ಹಳೆಯ ದಾಖಲೆ ಮುರಿದ ಸ್ಟೀವನ್‌ ಸ್ಮಿತ್‌!

ಇಂಗ್ಲೆಂಡ್‌ ವಿರುದ್ಧ ಐದನೇ ಹಾಗೂ ಆಷಸ್‌ ಟ್ರೋಫಿ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವನ್‌ ಸ್ಮಿತ್‌ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ 96 ವರ್ಷಗಳ ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ. ಸ್ಮಿತ್‌ ಶತಕದ ಬಲದಿಂದ ಆಸೀಸ್‌, ಐದನೇ ಟೆಸ್ಟ್‌ ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಿದೆ.

ಶತಕ ಬಾರಿಸಿ 96 ವರ್ಷಗಳ ಹಳೆಯ ದಾಖಲೆ ಮುರಿದ ಸ್ಟೀವನ್‌ ಸ್ಮಿತ್‌!

ಶತಕ ಬಾರಿಸಿ 96 ವರ್ಷಗಳ ಹಳೆಯ ದಾಖಲೆ ಮುರಿದ ಸ್ಟೀವನ್‌ ಸ್ಮಿತ್‌. -

Profile
Ramesh Kote Jan 6, 2026 6:52 PM

ನವದೆಹಲಿ: ಆಸ್ಟ್ರೇಲಿಯಾ ತಂಡದ ನಾಯಕ ಹಾಗೂ ಹಿರಿಯ ಬ್ಯಾಟ್ಸ್‌ಮನ್‌ ಸ್ಟೀವನ್‌ ಸ್ಮಿತ್‌ (Steven Smith) ಇಂಗ್ಲೆಂಡ್‌ ವಿರುದ್ಧ ಐದನೇ ಹಾಗೂ ಆಷಸ್‌ ಟ್ರೋಫಿ (Ashes 2025-26) ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಶತಕವನ್ನು ಬಾರಿಸಿದ್ದಾರೆ. ತಮ್ಮ ಶತಕದ ಮೂಲಕ ಅವರು 96 ವರ್ಷಗಳ ಇಂಗ್ಲೆಂಡ್‌ ಮಾಜಿ ಬ್ಯಾಟ್ಸ್‌ಮನ್‌ ಜ್ಯಾಕ್‌ ಹಾಬ್ಸ್‌ (Jack Hobbs) ಅವರ ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ. ಸ್ಟೀವನ್‌ ಸ್ಮಿತ್‌ಗೂ ಮುನ್ನ ಟ್ರಾವಿಸ್‌ ಹೆಡ್‌ ಸ್ಪೋಟಕ ಶತಕವನ್ನು ಬಾರಿಸಿದ್ದರು. ಇವರಿಬ್ಬರ ಶತಕಗಳ ಬಲದಿಂದ ಆಸ್ಟ್ರೇಲಿಯಾ ತಂಡ ಐದನೇ ಟೆಸ್ಟ್‌ ಪಂದ್ಯದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿದೆ.

ನಾಲ್ಕು ಪಂದ್ಯಗಳ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ ಸರಣಿಯಲ್ಲಿ 3-1 ಮುನ್ನಡೆಯನ್ನು ಕಾಯ್ದುಕೊಂಡಿದೆ. ಇದೀಗ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್‌ ಪಂದ್ಯದಲ್ಲಿಯೂ ಕಾಂಗರೂ ಪಡೆ ಮೇಲುಗೈ ಸಾಧಿಸಿದೆ. ಇದಕ್ಕೆ ಕಾರಣರಾಗಿದ್ದು, ಟ್ರಾವಿಸ್‌ ಹೆಡ್‌ ಹಾಗೂ ಸ್ಟೀವನ್‌ ಸ್ಮಿತ್‌. ಈ ಇಬ್ಬರೂ ಶತಕಗಳನ್ನು ಬಾರಿಸಿದ್ದಾರೆ. ಮೂರನೇ ದಿನ ಟ್ರಾವಿಸ್‌ ಹೆಡ್‌ ಮೂರನೇ ದಿನ ಶತಕವನ್ನು ಸಿಡಿಸಿದ ಬಳಿಕ 163 ರನ್‌ಗಳ ಮೂಲಕ ತಮ್ಮ ಇನಿಂಗ್ಸ್‌ ಅನ್ನು ಮುಗಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಸ್ಮಿತ್‌ ಅದ್ಭುತವಾಗಿ ಬ್ಯಾಟ್‌ ಮಾಡಿದ್ದಾರೆ.

ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಇತಿಹಾಸ ನಿರ್ಮಿಸಿದ ಆರ್‌ಸಿಬಿ ಸ್ಟಾರ್‌ ದೇವದತ್‌ ಪಡಿಕ್ಕಲ್‌!

ಅವರು ಮೂರನೇ ದಿನದಾಟದ ಅಂತ್ಯಕ್ಕೆ 205 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 15 ಸೊಗಸಾದ ಬೌಂಡರಿಗಳೊಂದಿಗೆ ಅಜೇಯ 129 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ನಾಲ್ಕನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇವರ ಶತಕದ ಮೂಲಕ ಆಸ್ಟ್ರೇಲಿಯಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 124 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 518 ರನ್‌ಗಳನ್ನು ಗಳಿಸಿದೆ. ಅಂದ ಹಾಗೆ ಸ್ಟೀವನ್‌ ಸ್ಮಿತ್‌ ಅವರು ಆಷಸ್‌ ಟ್ರೋಫಿ ಟೆಸ್ಟ್‌ ಕ್ರಿಕೆಟ್ ವೃತ್ತಿ ಜೀವನದಲ್ಲಿ 3682 ರನ್‌ಗಳನ್ನು ಕಲೆ ಹಾಕಿದ್ದಾರೆ. ಆಷಸ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಆ ಮೂಲಕ ಮಾಜಿ ಆಟಗಾರ ಜ್ಯಾಕ್‌ ಹಾಬ್ಸ್‌ ಅವರನ್ನು ಹಿಂದಿಕ್ಕಿದ್ದಾರೆ. ಹಾಬ್ಸ್‌ 3636 ರನ್‌ಗಳನ್ನು ಗಳಿಸಿದ್ದಾರೆ.

ಆಸ್ಟ್ರೇಲಿಯಾ ದಿಗ್ಗಜ ಡಾನ್‌ ಬ್ರಾಡ್ಮನ್‌ ಅವರು 5028 ರನ್‌ಗಳನ್ನು ಗಳಿಸುವ ಮೂಲಕ ಈ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಇದೀಗ ಸ್ಟೀವನ್‌ ಸ್ಮಿತ್‌ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.



ಆಷಸ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್ಸ್‌

ಡಾನ್‌ ಬ್ರಾಡ್ಮನ್‌ (ಆಸ್ಟ್ರೇಲಿಯಾ): 5028

ಸ್ಟೀವನ್‌ ಸ್ಮಿತ್‌ (ಆಸ್ಟ್ರೇಲಿಯಾ): 3682

ಜ್ಯಾಕ್‌ ಹಾಬ್ಸ್‌ (ಇಂಗ್ಲೆಂಡ್‌): 3636

ಅಲಾನ್‌ ಬಾರ್ಡರ್‌ (ಆಸ್ಟ್ರೇಲಿಯಾ): 3222

ಸ್ಟೀವಾ (ಆಸ್ಟ್ರೇಲಿಯಾ): 3173

ಆಷಸ್‌ ಟೆಸ್ಟ್‌ ಸರಣಿಯಲ್ಲಿ 500 ರನ್‌ ಕಲೆ ಹಾಕಿ ಯಶಸ್ವಿ ಜೈಸ್ವಾಲ್‌ ದಾಖಲೆ ಮುರಿದ ಟ್ರಾವಿಸ್‌ ಹೆಡ್‌!

ಹಲವು ದಾಖಲೆಗಳನ್ನು ಮುರಿದ ಸ್ಟೀವನ್‌ ಸ್ಮಿತ್‌

ಆಷಸ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಸ್ಟೀವನ್‌ ಸ್ಮಿತ್‌ ಅವರ 12ನೇ ಶತಕ ಇದಾಗಿದೆ. ಶತಕಗಳ ಜೊತೆಗೆ 15 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಂದರೆ ಆಷಟ್‌ ಸರಣಿ ಇತಿಹಾಸದಲ್ಲಿ ಅವರು 27 ಬಾರಿ 50 ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಆಷಸ್‌ನಲ್ಲಿ ಎರಡನೇ ಅತಿ ಹೆಚ್ಚು ಬಾರಿ 50ಕ್ಕೂ ಅಧಿಕ ರನ್ ಬಾರಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಜ್ಯಾಕ್‌ ಹಾಬ್ಸ್‌ ಕೂಡ ಇಷ್ಟೇ ಬಾರಿ 50ಕ್ಕೂ ಅಧಿಕ ರನ್‌ ಗಳಿಸಿದ್ದಾರೆ. 31 ಬಾರಿ 50ಕ್ಕೂ ಅಧಿಕ ರನ್‌ ಗಳಿಸಿದ ಡಾನ್‌ ಬ್ರಾಡ್ಮನ್‌ ಈ ಸಾಲಿನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.