ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಇತಿಹಾಸ ನಿರ್ಮಿಸಿದ ಆರ್‌ಸಿಬಿ ಸ್ಟಾರ್‌ ದೇವದತ್‌ ಪಡಿಕ್ಕಲ್‌!

Devdutt Padikkal Scored 600 Runs: ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡದ ದೇವದತ್‌ ಪಡಿಕ್ಕಲ್‌ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅವರು ಮಂಗಳವಾರ ರಾಜಸ್ಥಾನ್‌ ವಿರುದ್ಧದ ಪಂದ್ಯದಲ್ಲಿ 91 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಈ ಟೂರ್ನಿಯಲ್ಲಿ 600 ರನ್‌ಗಳನ್ನು ಪೂರ್ಣಗೊಳಿಸಿದರು.

600 ರನ್‌ಗಳನ್ನು ಪೂರ್ಣಗೊಳಿಸಿದ ದೇವದತ್‌ ಪಡಿಕ್ಕಲ್‌!

ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ದ್ವಿಶತಕ ಬಾರಿಸಿದ ದೇವದತ್‌ ಪಡಿಕ್ಕಲ್‌. -

Profile
Ramesh Kote Jan 6, 2026 4:43 PM

ನವದೆಹಲಿ: ಕರ್ನಾಟಕ ತಂಡದ ದೇವದತ್ ಪಡಿಕ್ಕಲ್ (Devdutt Padikkal) ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ (Vijay Hazare Trophy 2025-26) ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅವರ ಬ್ಯಾಟಿಂಗ್ ಅದ್ಭುತವಾಗಿದ್ದು, ಈ ಟೂರ್ನಿಯಲ್ಲಿ ಆಡಿದ ಆರು ಪಂದ್ಯಗಳಲ್ಲಿ ನಾಲ್ಕು ಶತಕಗಳ ಮೂಲಕ ರನ್‌ ಹೊಳೆ ಹರಿಸಿದ್ದಾರೆ. ಜನವರಿ 6 ರಂದು ಮಂಗಳವಾರ ಕರ್ನಾಟಕ (Karnataka) ತಂಡ, ಅಹಮದಾಬಾದ್‌ನಲ್ಲಿ ರಾಜಸ್ಥಾನ ವಿರುದ್ಧ ಕಾದಾಟ ನಡೆಸಿತ್ತು. ಈ ಪಂದ್ಯದಲ್ಲಿ ಅಬ್ಬರಿಸಿದ ದೇವದತ್ ಪಡಿಕ್ಕಲ್, ಮತ್ತೆ 91 ರನ್ ಗಳಿಸಿದರು. ಅವರು ಶತಕ ಗಳಿಸಲು ವಿಫಲರಾದರೂ ಅವರು ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.

26ರ ವಯಸ್ಸಿನ ದೇವದತ್ ಪಡಿಕ್ಕಲ್ ಈ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಆಡಿದ ಆರು ಪಂದ್ಯಗಳಲ್ಲಿ 605 ರನ್ ಗಳಿಸಿದ್ದಾರೆ. ಇದರೊಂದಿಗೆ, ಆರ್‌ಸಿಬಿ ಬ್ಯಾಟರ್‌ ಮೂರು ವಿಭಿನ್ನ ವಿಜಯ ಹಝಾರೆ ಟ್ರೋಫಿ ಋತುಗಳಲ್ಲಿ 600 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಲ್ಲಿಯವರೆಗೆ ಬೇರೆ ಯಾವುದೇ ಬ್ಯಾಟ್ಸ್‌ಮನ್ ಈ ದಾಖಲೆಯನ್ನು ಬರೆದಿಲ್ಲ. 2019-20ರ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಪಡಿಕ್ಕಲ್ 11 ಪಂದ್ಯಗಳಲ್ಲಿ 609 ರನ್ ಗಳಿಸಿದ್ದರು ಮತ್ತು 2020-21ರ ಋತುವಿನಲ್ಲಿ 7 ಪಂದ್ಯಗಳಲ್ಲಿ 737 ರನ್ ಗಳಿಸಿದ್ದರು.

Vijaya Hazare Trophy: ಬಂಗಾಳ ವಿರುದ್ಧ ದ್ವಿಶತಕ ಬಾರಿಸಿದ ಅಮನ್‌ ರಾವ್‌ ಯಾರು?

ಆರ್‌ಸಿಬಿ ಆಟಗಾರ 2025-26ರ ವಿಜಯ ಹಝಾರೆ ಟ್ರೋಫಿ ಋತುವನ್ನು ಜಾರ್ಖಂಡ್ ವಿರುದ್ಧ 147 ರನ್‌ಗಳ ಇನಿಂಗ್ಸ್‌ನೊಂದಿಗೆ ಪ್ರಾರಂಭಿಸಿದ್ದರು. ನಂತರ ಅವರು ಕೇರಳ ವಿರುದ್ಧ 124 ರನ್ ಗಳಿಸಿದರು. ಮೂರನೇ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಮಾತ್ರ ಪಡಿಕ್ಕಲ್ ಅರ್ಧಶತಕ ಅಥವಾ ಶತಕ ಗಳಿಸದೆ ಔಟಾದರು. ನಾಲ್ಕನೇ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಪುದುಚೇರಿ ವಿರುದ್ಧ 113 ಮತ್ತು ಐದನೇ ಪಂದ್ಯದಲ್ಲಿ ತ್ರಿಪುರ ವಿರುದ್ಧ 108 ರನ್ ಗಳಿಸಿದರು. ಇದೀಗ ಆರನೇ ಪಂದ್ಯದಲ್ಲಿ ಅವರು ರಾಜಸ್ಥಾನ ವಿರುದ್ಧ ಮತ್ತೊಂದು 91 ರನ್ ಗಳಿಸಿದ್ದಾರೆ.



ದೇವದತ್ ಪಡಿಕ್ಕಲ್ ಅಂಕಿಅಂಶ

ದೇವದತ್ ಪಡಿಕ್ಕಲ್ ಇದುವರೆಗೆ ಭಾರತ ಪರ ಎರಡು ಟೆಸ್ಟ್ ಮತ್ತು ಎರಡು ಟಿ20ಐ ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್‌ನಲ್ಲಿ 90 ಮತ್ತು ಟಿ20ಐ ಪಂದ್ಯಗಳಲ್ಲಿ 38 ರನ್ ಗಳಿಸಿದ್ದಾರೆ. ಅವರು 74 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಒಂದು ಶತಕ ಮತ್ತು 11 ಅರ್ಧಶತಕಗಳೊಂದಿಗೆ 1806 ರನ್‌ಗಳನ್ನು ಕಲೆ ಹಾಕಿದ್ದಾರೆ.

ಕರ್ನಾಟಕ ತಂಡಕ್ಕೆ ಜಯ

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಕರ್ನಾಟಕ ತಂಡ, ಮಯಾಂಕ್‌ ಅಗರ್ವಾಲ್‌ (132 ರನ್‌) ಶತಕ ಹಾಗೂ ಮಯಾಂಕ್‌ ಅಗರ್ವಾಲ್‌ (91) ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 363 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ರಾಜಸ್ಥಾನ ತಂಡಕ್ಕೆ 364 ರನ್‌ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ ತಂಡ 50 ಓವರ್‌ಗಳನ್ನು ಪೂರ್ಣಗೊಳಿಸಿದರೂ 296 ರನ್‌ಗಳನ್ನು ಕಲೆ ಹಾಕಿತ್ತು.ಆ ಮೂಲಕ ಕರ್ನಾಟಕ ತಂಡ 67 ರನ್‌ಗಳಿಂದ ಗೆದ್ದು ಬೀಗಿದೆ.