IND vs AUS 4th T20I: ಆಸ್ಟ್ರೇಲಿಯಾ ಎದುರು ಟಾಸ್ ಸೋತ ಭಾರತ ತಂಡ ಮೊದಲ ಬ್ಯಾಟಿಂಗ್!
India vs Australia 4th T20I: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ನಾಲ್ಕನೇ ಟಿ20ಐ ಪಂದ್ಯ ಕ್ವೀನ್ಸ್‌ಲ್ಯಾಂಡ್‌ನ ಕ್ಯಾರೆರಾ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹಾಗಾಗಿ ಭಾರತ ಮೊದಲು ಬ್ಯಾಟ್ ಮಾಡಲಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟಿ20ಐ ಪಂದ್ಯ. -
ಕ್ವೀನ್ಸ್‌ಲ್ಯಾಡ್: ಇಲ್ಲಿನ ಕ್ಯಾರೆರಾ ಓವಲ್ ಕ್ರೀಡಾಂಗಣದಲ್ಲಿನಡೆಯುತ್ತಿರುವ ನಾಲ್ಕನೇ ಟಿ20ಐ ಪಂದ್ಯದಲ್ಲಿ(IND vs AUS) ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ (Autralia) ತಂಡದ ನಾಯಕ ಮಿಚೆಲ್ ಮಾರ್ಷ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಎದುರಾಳಿ ಭಾರತ ತಂಡವನ್ನು (India) ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಲಾಗಿದೆ. ಆ ಮೂಲಕ ಪ್ರವಾಸಿ ತಂಡವನ್ನು ಕಡಿಮೆ ಮೊತ್ತಕ್ಕೆ ಆಲ್‌ಔಟ್ ಮಾಡಲು ಆತಿಥೇಯ ತಂಡದ ನಾಯಕ ಯೋಜನೆ ರೂಪಿಸಿದ್ದಾರೆ.
ಭಾರತ ತಂಡದ ಪ್ಲೇಯಿಂಗ್ XI ನಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಟಾಸ್ ವೇಳೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ. ಮೂರನೇ ಪಂದ್ಯವನ್ನು ಆಡಿದ್ದ ಅದೇ ಆಡುವ ಬಳಗವನ್ನು ಈ ಪಂದ್ಯಕ್ಕೆ ಉಳಿಸಿಕೊಳ್ಳಲಾಗಿದೆ. ಇನ್ನುಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್ XIನಲ್ಲಿ ನಾಲ್ಕು ಬದಲಾವಣೆಯನ್ನು ತರಲಾಗಿದೆ ಎಂದು ಮಿಚೆಲ್ ಮಾರ್ಷ್ ಮಾಹಿತಿ ನೀಡಿದ್ದಾರೆ.
IND vs AUS: ಅರ್ಷದೀಪ್ ಸಿಂಗ್‌ಗೆ ನಿಯಮಿತವಾಗಿ ಚಾನ್ಸ್ ನೀಡದೆ ಇರಲು ಕಾರಣವೇನು?
ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್ XIನಲ್ಲಿ ಆಡಮ್ ಝಾಂಪ, ಗ್ಲೆನ್ ಮ್ಯಾಕ್ಸ್‌ವೆಲ್, ಜಾಶ್ ಫಿಲಿಪ್ ಹಾಗೂ ದ್ವಾರಶುಯಿಸ್ ಅವರು ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್ XIಗೆ ಬಂದಿದ್ದಾರೆ. ಆ ಮೂಲಕ ಮೂರನೇ ಟಿ20ಐ ಪಂದ್ಯವನ್ನು ಆಡಿದ್ದ ನಾಲ್ವರು ಆಟಗಾರರನ್ನು ಕೈ ಬಿಡಲಾಗಿದೆ.
A look at #TeamIndia's Playing XI for the 4️⃣th T20I.
— BCCI (@BCCI) November 6, 2025
Updates ▶ https://t.co/OYJNZ57GLX#AUSvIND pic.twitter.com/Su7RxRqTKj
ಉಭಯ ತಂಡಗಳ ಪ್ಲೇಯಿಂಗ್ XI
ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಶಿವಂ ದುಬೆ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬುಮ್ರಾ
Australia XI: M.Marsh (c), M.Short, J.Inglis (wk), T.David, J.Philippe, M.Stoinis, G.Maxwell, B.Dwarshuis, X.Bartlett, N.Ellis, A.Zampa https://t.co/OYJNZ57GLX #TeamIndia #AUSvIND #4thT20I
— BCCI (@BCCI) November 6, 2025
ಆಸ್ಟ್ರೇಲಿಯಾ: ಮಿಚೆಲ್ ಮಾರ್ಷ್ (ನಾಯಕ), ಮ್ಯಾಥ್ಯೂ ಶಾರ್ಟ್, ಜಾಶ್ ಇಂಗ್ಲಿಸ್ (ವಿಕೆಟ್ ಕೀಪರ್), ಟಿಮ್ ಡೇವಿಡ್, ಜಾಶ್ ಫಿಲಿಪ್, ಮಾರ್ಕಸ್ ಸ್ಟೋನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಬೆನ್ ದ್ವಾರಶುಯಿಸ್, ಜೇವಿಯರ್ ಬಾರ್ಟ್ಲೆಟ್, ನೇಥನ್ ಎಲ್ಲಿಸ್, ಆಡಂ ಝಾಂಪ
ಮೂರು ಪಂದ್ಯಗಳ ಅಂತ್ಯಕ್ಕೆ 1-1
ಇಲ್ಲಿಯವರೆಗೂ ಮೂರು ಪಂದ್ಯಗಳ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 1-1 ಸಮಬಲ ಸಾಧಿಸಿವೆ. ಆರಂಭಿಕ ಪಂದ್ಯ ಮಳೆಗೆ ಬಲಿಯಾಗಿತ್ತು. ನಂತರ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಮೂರನೇ ಪಂದ್ಯದಲ್ಲಿ ಭಾರತ ತಂಡ ಗೆಲುವು ಪಡೆದಿತ್ತು. ಇದೀಗ ಕೊನೆಯ ಎರಡು ಪಂದ್ಯಗಳನ್ನು ಗೆದ್ದು ಟಿ20ಐ ಸರಣಿಯನ್ನು ಮುಡಿಗೇರಿಸಿಕೊಳ್ಳಲು ಉಭಯ ತಂಡಗಳು ಎದುರು ನೋಡುತ್ತಿವೆ.
ತಂಡಗಳು
ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್ (ನಾಯಕ), ಮ್ಯಾಥ್ಯೂ ಶಾರ್ಟ್, ಜಾಶ್ ಇಂಗ್ಲಿಸ್ (ವಿಕೆಟ್ ಕೀಪರ್), ಟಿಮ ಡೇವಿಡ್, ಮಿಚೆಕ್ ಓವೆನ್, ಮಾರ್ಕಸ್ ಸ್ಟೋಯ್ನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಜೇವಿಯರ್ ಬಾರ್ಟ್ಲೆಟ್, ಬೆನ್ ದ್ವಾರಶುಯಿಸ್, ನೇಥನ್ ಎಲ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಜಾಶ್ ಫಿಲಿಪ್, ತನ್ವೀರ್ ಸಂಘ, ಮಹ್ಲಿ ಬೀರ್ಡಮನ್
ಭಾರತ ತಂಡ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ (ನಾಯಕ), ತಿಲಕ್ ವರ್ಮಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ