WPL 2026: ಆರ್‌ಸಿಬಿ ಮಹಿಳಾ ತಂಡಕ್ಕೆ ಮಲೋಲನ್ ರಂಗರಾಜನ್ ಹೆಡ್ ಕೋಚ್!
ಮುಂಬರುವ 2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ನಿಮಿತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೂತನ ಹೆಡ್ ಕೋಚ್ ಆಗಿ ಮಲೋಲನ್ ರಂಗರಾಜನ್ ಅವರು ನೇಮಕಗೊಂಡಿದ್ದಾರೆ. ಬೆಂಗಳೂರು ಫ್ರಾಂಚೈಸಿ ಸೂಮವಾರ ಈ ವಿಷಯವನ್ನು ಪ್ರಕಟಿಸಿದೆ.
ಆರ್‌ಸಿಬಿ ಮಹಿಳಾ ತಂಡಕ್ಕೆ ನೂತನ ಹೆಡ್ ಕೋಚ್ ಆಗಿ ಮಲೋಲನ್ ರಂಗರಾಜನ್ ನೇಮಕ. -
ನವದೆಹಲಿ: ರಾಯಕ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡಕ್ಕೆ ನೂತನ ಹೆಡ್ ಕೋಚ್ ಆಗಿ ತಮಿಳುನಾಡಿನ ಮಲೋಲನ್ ರಂಗರಾಜನ್ ( Malolan Rangarajan) ನೇಮಕಗೊಂಡಿದ್ದಾರೆ. ಮುಂಬರುವ 2026ರ ಮಹಿಳಾ ಪ್ರೀಮಿಯರ್ ಲೀಗ್ (WPL 2026) ಟೂರ್ನಿಯ ನಿಮಿತ್ತ ಬೆಂಗಳೂರು ಫ್ರಾಂಚೈಸಿ ಈ ನಿರ್ಧಾರವನ್ನು ಪ್ರಕಟಿಸಿದೆ. ಕಳೆದ ಎರಡು ವರ್ಷಗಳಿಂದ ಈ ತಂಡದಲ್ಲಿ ಸಹಾಯಕ ಕೋಚ್ ಆಗಿ ರಂಗರಾಜನ್ ಅವರು ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅವರು ಹೆಡ್ ಕೋಚ್ ಆಗಿ ಲ್ಯೂಕ್ ವಿಲಿಯಮ್ಸ್ ಅವರ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರ ಹೆಡ್ ಕೋಚ್ ಅವಧಿಯಲ್ಲಿ ಕಳೆದ ವರ್ಷ ಆರ್‌ಸಿಬಿ ಮಹಿಳಾ ತಂಡ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು.
"ಮಹಿಳಾ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದಕ್ಕೆ ನನಗೆ ತುಂಬಾ ಸಂತೋಷ ಮತ್ತು ಗೌರವವಾಗಿದೆ. 2024 ರಲ್ಲಿ ಆರ್‌ಸಿಬಿ ಪ್ರಶಸ್ತಿ ಗೆಲುವಿಗೆ ಕಾರಣವಾದ ಲ್ಯೂಕ್ ಅವರ ಕೊಡುಗೆ ಮತ್ತು ಪ್ರಭಾವವನ್ನು ನಾನು ಗುರುತಿಸಲು ಬಯಸುತ್ತೇನೆ. ಮುಂಬರುವ ಮೆಗಾ ಹರಾಜು ಒಂದು ರೋಮಾಂಚಕಾರಿ ಸವಾಲನ್ನು ಒದಗಿಸುತ್ತದೆ. ಮುಂದಿನ ಸೀಸನ್‌ಗೆ ಬಲಿಷ್ಠ ತಂಡವನ್ನು ಕಟ್ಟುವ ಸಲುವಾಗಿ ಮೆಗಾ ಹರಾಜು ಅದ್ಭುತ ಅವಕಾಶವನ್ನು ನಮಗೆ ನೀಡುತ್ತದೆ," ಎಂದು ರಂಗರಾಜನ್ ತಿಳಿಸಿದ್ದಾರೆ.
IPL 2026: ಐಪಿಎಲ್ 2026 ಹರಾಜಿಗೂ ಮುನ್ನ ಧೋನಿಯನ್ನು ಬಿಡುಗಡೆ ಮಾಡಲು ಮುಂದಾದ ಸಿಎಸ್‌ಕೆ
ದೇಶಿ ಕ್ರಿಕೆಟ್‌ನಲ್ಲಿ ತಮಿಳುನಾಡು ಹಾಗೂ ಉತ್ತರಾಖಂಡ ತಂಡಗಳನ್ನು ಪ್ರತಿನಿಧಿಸಿರುವ ಮಲೋಲನ್ ರಂಗರಾಜನ್ ಅವರು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷರ ತಂಡದಲ್ಲಿಯೂ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ವರ್ಷ ಆರ್‌ಸಿಬಿ ಪುರುಷರ ತಂಡ ಪ್ರಶಸ್ತಿ ಗೆಲುವಿನಲ್ಲಿ ರಂಗರಾಜನ್ ಅವರ ಪಾತ್ರವೂ ಇದೆ.
"ಕಳೆದ ಮೂರು ವರ್ಷಗಳಲ್ಲಿ, ನಾನು ಸ್ಮೃತಿ ಮಂಧಾನಾ ಅವರ ಜೊತೆಗೆ ಕೋಚಿಂಗ್ ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಉತ್ತಮ ಕಾರ್ಯ ಸಂಬಂಧವನ್ನು ಬೆಳೆಸಿಕೊಂಡಿದ್ದೇನೆ ಮತ್ತು ಆರ್‌ಸಿಬಿ ಅಭಿಮಾನಿಗಳು ಅರ್ಹವಾದ ಯಶಸ್ಸನ್ನು ನೀಡಲು ಆ ಪಾಲುದಾರಿಕೆಯನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ," ಎಂದು ಅವರು ಭರವಸೆಯನ್ನು ನೀಡಿದ್ದಾರೆ.
🚨 OFFICIAL ANNOUNCEMENT
— Royal Challengers Bengaluru (@RCBTweets) November 6, 2025
Malolan Rangarajan, a key member of the RCB support staff for the last 6 years in various roles, has now been appointed as 𝗛𝗘𝗔𝗗 𝗖𝗢𝗔𝗖𝗛 for the upcoming WPL cycle.
More details, and WPL retentions announcement soon… 🤩#PlayBold #ನಮ್ಮRCB pic.twitter.com/PLiDY9sxef
ರಂಗರಾಜನ್ ಬಗ್ಗೆ ಮಂಧಾನಾ ಹೇಳಿದ್ದೇನು?
ಮಲೋಲನ್ ರಂಗರಾಜನ್‌ಗೆ ಹೆಡ್ ಕೋಚ್ ಹುದ್ದೆ ನೀಡಿದ ಬಗ್ಗೆ ನಾಯಕಿ ಸ್ಮೃತಿ ಮಂಧಾನಾ ಪ್ರತಿಕ್ರಿಯೆ ನೀಡಿದ್ದಾರೆ. "ಆರ್‌ಸಿಬಿ ಮಹಿಳಾ ತಂಡಕ್ಕೆ ಹೆಡ್ ಕೋಚ್ ಆಗಿ ನೇಮಕಗೊಂಡಿರುವ ಮಲೋಲನ್ ರಂಗರಾಜನ್ ಅವರ ಬಗ್ಗೆ ನನಗೆ ಸಂತಸವಾಗುತ್ತಿದೆ. ಅವರ ಜೊತೆ ನಾನು ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುತ್ತೇನೆ ಹಾಗೂ ಅವರೊಂದಿಗೆ ಚರ್ಚೆಗಳನ್ನು ನಾನು ಆನಂದಿಸಿದ್ದೇನೆ. ಕಳೆದ ಮೂರು ವರ್ಷಗಳಿಂದ ಅವರು ಸಕಾರಾತ್ಮಕ ಪ್ರಭಾವಶಾಲಿಯಾಗಿದ್ದಾರೆ. ಅವರ ಜೊತೆಗೆ ಕೆಲಸ ಮಾಡುವ ಬಗ್ಗೆ ನನಗೆ ವಿಶ್ವಾಸವಿದೆ," ಎಂದು ಆರ್‌ಸಿಬಿ ನಾಯಕಿ ತಿಳಿಸಿದೆ.
IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಾರಾಟಕ್ಕಿಟ್ಟ ಡಿಯಾಜಿಯೊ!
ಆರ್‌ಸಿಬಿ ಉಳಿಸಿಕೊಳ್ಳಬಲ್ಲ ಆಟಗಾರ್ತಿಯರು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಮೆಗಾ ಹರಾಜಿನ ನಿಮಿತ್ತ ಸ್ಮೃತಿ ಮಂಧಾನಾ, ಎಲಿಸ್ ಪೆರಿ, ರಿಚಾ ಘೋಷ್ ಹಾಗೂ ಶ್ರೇಯಾಂಕ ಪಾಟೀಲ್ ಅವರನ್ನು ಉಳಿಸಿಕೊಳ್ಳಬಹುದು ಎಂದು ವರದಿಯಾಗಿದೆ.