ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ ಕೋಚಿಂಗ್‌ ತಂಡದಿಂದ ಅಭಿಷೇಕ್‌ ನಾಯರ್‌ರನ್ನು ಕೈಬಿಡಲು ಕಾರಣ ಇಲ್ಲಿದೆ!

BCCI sacks Abhishek Nayar From Team India: ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ ನಿರಾಶದಾಯಕ ಪ್ರದರ್ಶನ ತೋರಿದ್ದ ಹಿನ್ನೆಲೆಯಲ್ಲಿ ಬಿಸಿಸಿಐ, ಇದೀಗ ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರನ್ನು ಕೋಚಿಂಗ್ ತಂಡದಿಂದ ತೆಗೆದುಹಾಕಲು ಸಿದ್ಧತೆ ನಡೆಸಿದೆ. ಇಬ್ಬರೂ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಕೈಗೊಳ್ಳುವುದಿಲ್ಲ ಎಂದು ವರದಿ ತಿಳಿಸಿದೆ.

ಭಾರತ ತಂಡದಿಂದ ಅಭಿಷೇಕ್‌ ನಾಯರ್‌ರನ್ನು ಕೈಬಿಡಲು ಕಾರಣವೇನು?

ಭಾರತ ಕೋಚಿಂಗ್‌ ತಂಡದಿಂದ ಅಭಿಷೇಕ್‌ ನಾಯರ್‌ಗೆ ಕೊಕ್‌.

Profile Ramesh Kote Apr 17, 2025 5:08 PM

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ(India) ವೈಫಲ್ಯ ಅನುಭವಿಸಿದ್ದ ಹಿನ್ನೆಲೆಯಲ್ಲಿ ಬಿಸಿಸಿಐ (BCCI), ಟೀಮ್ ಇಂಡಿಯಾದ ತರಬೇತಿ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಸಹಾಯಕ ಕೋಚ್ ಅಭಿಷೇಕ್ ನಾಯರ್ (Abhishwk Nayar), ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಮತ್ತು ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿ ಅವರನ್ನು ವಜಾಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಇದಲ್ಲದೆ, ತಂಡದಲ್ಲಿ ಮಸಾಜ್ ಮಾಡುವವರನ್ನು ತೆಗೆದುಹಾಕುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಅಭಿಷೇಕ್ ನಾಯರ್ ಅವರನ್ನು ಕೇವಲ 8 ತಿಂಗಳ ಹಿಂದೆಯಷ್ಟೇ ಗೌತಮ್ ಗಂಭೀರ್ ಜೊತೆಗೆ ಟೀಮ್ ಇಂಡಿಯಾದ ಸಹಾಯಕ ಕೋಚ್ ಆಗಿ ನೇಮಿಸಲಾಗಿತ್ತು.

ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್ ಆದ ನಂತರ ರಾಹುಲ್‌ ದ್ರಾವಿಡ್‌ ಅವರ ಹೆಡ್‌ ಕೋಚ್‌ ಅವಧಿ ಅಂತ್ಯವಾಗಿತ್ತು. ಈ ವೇಳೆ ಗೌತಮ್ ಗಂಭೀರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿತ್ತು. ನಂತರ ಗಂಭೀರ್ ತಮ್ಮ ಆಯ್ಕೆಯ ಕೋಚಿಂಗ್ ಸಿಬ್ಬಂದಿಯನ್ನು ಆಯ್ಕೆ ಮಾಡಿದ್ದರು. ಇದರಲ್ಲಿ ಸಹಾಯಕ ಕೋಚ್ ಆಗಿ ಅಭಿಷೇಕ್ ನಾಯರ್ ಮತ್ತು ಬೌಲಿಂಗ್ ಕೋಚ್ ಆಗಿ ಮಾರ್ನೆ ಮಾರ್ಕೆಲ್ ನೇಮಕಗೊಂಡಿದ್ದರು. ಅಭಿಷೇಕ್ ನಾಯರ್ ಟೀಮ್ ಇಂಡಿಯಾದ ಕೋಚಿಂಗ್ ಸಿಬ್ಬಂದಿಗೆ ಸೇರುವ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್‌ನಲ್ಲಿ ಗಂಭೀರ್ ಅವರೊಂದಿಗೆ ಕೆಲಸ ಮಾಡಿದ್ದರು. ಅಭಿಷೇಕ್ ಜೊತೆಗೆ, ಗಂಭೀರ್ ರಯಾನ್ ಟೆನ್ ದುಶಾತ್‌ ಅವರನ್ನು ಕೋಚಿಂಗ್ ತಡದಲ್ಲಿ ಅವಕಾಶವನ್ನು ನೀಡಲಾಗಿತ್ತು.

IPL 2025: ಐಪಿಎಲ್‌ ಮೇಲೆ ಮತ್ತೆ ಫಿಕ್ಸಿಂಗ್‌ ಕರಿನೆರಳು; ಎಚ್ಚರಿಕೆ ನೀಡಿದ ಬಿಸಿಸಿಐ

ಅಭಿಷೇಕ್ ನಾಯರ್ ಟೀಮ್ ಇಂಡಿಯಾದ ಕೋಚಿಂಗ್ ತಂಡದಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದರು. ನ್ಯೂಜಿಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿಯನ್ನು 0-3 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿದ್ದ ಟೀಮ್‌ ಇಂಡಿಯಾ ನಂತರ, ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್‌ ಸರಣಿಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿತ್ತು. ವಿಶೇಷವಾಗಿ ಭಾರತ ತಂಡದ ಬ್ಯಾಟಿಂಗ್‌ ವಿಭಾಗ ಸಂಪೂರ್ಣವಾಗಿ ವಿಫಲವಾಗಿತ್ತು. ಈ ವರ್ಷದ ಆರಂಭದಲ್ಲಿ ಎನ್‌ಸಿಎ ಮತ್ತು ಭಾರತ ಎ ತರಬೇತುದಾರ ಶಿತಾಂಶು ಕೊಟಕ್ ಅವರನ್ನು ಸೀಮಿತ ಓವರ್‌ಗಳ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿ ನೇಮಿಸಲಾಗಿತ್ತು.



ಟೆಸ್ಟ್‌ ಸರಣಿಗಳಲ್ಲಿ ವೈಫಲ್ಯ ಅನುಭವಿಸಿದ ಹೊರತಾಗಿಯೂ ಗೌತಮ್ ಗಂಭೀರ್ ಮತ್ತು ಅವರ ಕೋಚಿಂಗ್‌ ತಂಡದ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿತು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಈ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್‌ ಆಗಿತ್ತು. ಅದೇ ಸಮಯದಲ್ಲಿ, ಅಭಿಷೇಕ್ ನಾಯರ್ ಮತ್ತು ಟಿ ದಿಲೀಪ್ ಅವರಿಗೆ ಪರ್ಯಾಯವಾಗಿ ಬಿಸಿಸಿಐ ಇನ್ನೂ ಯಾವುದೇ ಹೆಸರನ್ನು ಘೋಷಿಸಿಲ್ಲ. ಇದಲ್ಲದೆ, ರಯಾನ್ ಟೆನ್ ದುಶಾತ್‌ ಅವರನ್ನು ತಾತ್ಕಾಲಿಕವಾಗಿ ಟಿ ದಿಲೀಪ್ ಅವರ ಸ್ಥಾನದಲ್ಲಿ ಫೀಲ್ಡಿಂಗ್ ಕೋಚ್ ಆಗಿ ನೇಮಿಸಲಾಗಿದೆ. ಇದಲ್ಲದೆ, ಪ್ರಸ್ತುತ ಪಂಜಾಬ್ ಕಿಂಗ್ಸ್ ಜೊತೆಗಿರುವ ದಕ್ಷಿಣ ಆಫ್ರಿಕಾದ ತರಬೇತುದಾರ ಆಡ್ರಿಯನ್ ಲೆ ರೌಕ್ಸ್, ಸೋಹಮ್ ದೇಸಾಯಿ ಅವರ ಸ್ಥಾನದಲ್ಲಿ ಕಂಡೀಷನಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.