ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Boxing Day Test: ಬಾಕ್ಸಿಂಗ್ ಡೇ ಟೆಸ್ಟ್‌ ಎರಡೇ ದಿನದಲ್ಲಿ ಅಂತ್ಯ: ಕ್ರಿಕೆಟ್‌ ಆಸ್ಟ್ರೇಲಿಯಾಗೆ 60 ಕೋಟಿ ನಷ್ಟ

ಆಷಸ್‌ ಸರಣಿಯ ನಾಲ್ಕನೇ ಟೆಸ್ಟ್‌(ಬಾಕ್ಸಿಂಗ್‌ ಡೇ ಟೆಸ್ಟ್) ಪಂದ್ಯವು ಎರಡೇ ದಿನದಲ್ಲಿ ಫಲಿತಾಂಶ ಕಂಡಿದ್ದು ಪ್ರವಾಸಿ ತಂಡ ಮೊದಲ ಗೆಲುವು ಸಾಧಿಸಿದೆ. ಆದರೆ, ಈ ಫಲಿತಾಂಶ ದಿಂದ ಕ್ರಿಕೆಟ್‌ ಆಸ್ಟ್ರೇಲಿಯಾ ಮಂಡಳಿಗೆ 60.6 ಕೋಟಿ ರೂ ನಷ್ಟವಾಗಿರುವುದು ವರದಿಯಾಗಿದೆ.

ಮೆಲ್ಬರ್ನ್:‌ ಆಷಸ್‌ ಸರಣಿಯ ನಾಲ್ಕನೇ ಟೆಸ್ಟ್‌(ಬಾಕ್ಸಿಂಗ್‌ ಡೇ ಟೆಸ್ಟ್) ಪಂದ್ಯವು ಎರಡೇ ದಿನದಲ್ಲಿ ಫಲಿತಾಂಶ ಕಂಡಿದ್ದು ಪ್ರವಾಸಿ ತಂಡ ಮೊದಲ ಗೆಲುವು ಸಾಧಿಸಿದೆ. ಆದರೆ, ಈ ಫಲಿತಾಂಶದಿಂದ ಕ್ರಿಕೆಟ್‌ ಆಸ್ಟ್ರೇಲಿಯಾ ಮಂಡಳಿಗೆ 60.6 ಕೋಟಿ ರೂ ನಷ್ಟವಾಗಿರುವುದು ವರದಿಯಾಗಿದೆ.

ಡಿ.25ರಂದು ಆರಂಭವಾದ ಈ ಟೆಸ್ಟ್‌ ಪಂದ್ಯದಲ್ಲಿ ಉಭಯ ತಂಡದ ಬೌಲರುಗಳು ಪಾರಮ್ಯ ಸಾಧಿಸಿದರು. ಇದಕ್ಕೆ ಆತಿಥೇಯ ಆಸ್ಟ್ರೇಲಿಯಾ ಹಾಗೂ ಪ್ರವಾಸಿ ಇಂಗ್ಲೆಂಡ್‌ ತಂಡದ ಎರಡೂ ಇನ್ನಿಂಗ್ಸ್‌ ನಲ್ಲಿ ಒಂದೂ ಅರ್ಧಶತಕ ದಾಖಲಾಗದಿರುವುದು ದುರಂತ.

ಇದನ್ನೂ ಓದಿ: Ashes: 116 ವರ್ಷಗಳಲ್ಲಿ ಇದೇ ಮೊದಲು!; ಎಂಸಿಜಿಯಲ್ಲಿ 20 ವಿಕೆಟ್‌ ಪತನ

ಈ ಗೆಲುವಿನ ಮೂಲಕ ಇಂಗ್ಲೆಂಡ್‌ ತಂಡ ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯ ದಲ್ಲಿ (AUS vs ENG) ಆಸ್ಟ್ರೇಲಿಯಾ ವಿರುದ್ಧ 4 ವಿಕೆಟ್‌ಗಳ ಗೆಲುವು ಪಡೆಯಿತು.

Josh-Tongue

ಈ ಗೆಲುವಿನ ಹೊರತಾಗಿಯೂ ಐದು ಪಂದ್ಯಗಳ ಆಷಸ್‌ ಟೆಸ್ಟ್‌ ಸರಣಿಯಲ್ಲಿ (Ashes) ಬೆನ್‌ ಸ್ಟೋಕ್ಸ್‌ ನಾಯಕತ್ವದ ಇಂಗ್ಲೆಂಡ್‌ ತಂಡ 1-3 ಹಿನ್ನಡೆ ಅನುಭವಿಸಿದೆ. ಈ ಪಂದ್ಯದಲ್ಲಿ ಮಾರಕ ಬೌಲಿಂಗ್‌ ದಾಳಿ ನಡೆಸಿ 7 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್‌ ತಂಡದ ಗೆಲುವಿಗೆ ನೆರವು ನೀಡಿದ ವೇಗದ ಬೌಲರ್‌ ಜಾಶ್‌ ಟಾಂಗ್‌ (Josh Tongue) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.